ಬಿಎಸ್‍ಎನ್‍ಎಲ್
ದೇಶ
ಇಂದಿನಿಂದ ಬಿಎಸ್‍ಎನ್‍ಎಲ್ ರೋಮಿಂಗ್ ಫ್ರೀ
ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಮೊಬೈಲ್ ಬಳಕೆ ದಾರರಿಗೊಂದು ಸಿಹಿ ಸುದ್ದಿ. ಬಿಎಸ್‍ಎನ್‍ಎಲ್ ಗ್ರಾಹಕರು ದೇಶಾದ್ಯಂತ ಮಾಡುವ ಕರೆಗೆ
ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಮೊಬೈಲ್ ಬಳಕೆ ದಾರರಿಗೊಂದು ಸಿಹಿ ಸುದ್ದಿ. ಬಿಎಸ್‍ಎನ್‍ಎಲ್ ಗ್ರಾಹಕರು ದೇಶಾದ್ಯಂತ ಮಾಡುವ ಕರೆಗೆ ಸೋಮವಾರದಿಂದ ರೋಮಿಂಗ್ ಶುಲ್ಕ ಪಾವತಿಸಬೇಕಿಲ್ಲ. ಇನ್ನು ಮುಂದೆ ಬಿಎಸ್‍ಎನ್‍ಎಲ್ ಗ್ರಾಹಕರು ರೋಮಿಂಗ್ ವೇಳೆ ಎರಡೆರಡು ಸಿಮ್ ಗಳನ್ನು ಇಟ್ಟುಕೊಂಡು ತಿರುಗ ಬೇಕಿಲ್ಲ. ದೇಶದ ಯಾವುದೇ ಮೂಲೆ ಯಲ್ಲೂ ಇನ್ನು ಮುಂದೆ ಗ್ರಾಹಕರು ಹೆಚ್ಚುವರಿ ಶುಲ್ಕವಿಲ್ಲದೆ ಹೊರ ರಾಜ್ಯಗಳಿಂದ ಬರುವ ಕರೆಗಳನ್ನು ಸ್ವೀಕರಿಸಬಹುದು ಅಥವಾ ಮಾಡಬಹುದಾಗಿದೆ. ಒಂದು ದೇಶ ಒಂದು ನಂಬರ್ ಎನ್ನುವ ಪರಿಕಲ್ಪನೆ ಕನಸು ಈಗ ನನಸಾಗುತ್ತಿದೆ ಎಂದು ಬಿಎಸ್ ಎನ್‍ಎಲ್ ಸಿಎಂಡಿ ಅನುಪಮ್ ಶ್ರೀವಾಸ್ತವ ಹೇಳಿದ್ದಾರೆ. ಜೂ.2 ರಂದು ದೂರಸಂಪರ್ಕ ಸಚಿವ ರವಿ ಶಂಕರ್ ಪ್ರಸಾದ್ ಅವರು ಜೂ.15 ರಿಂದ ಬಿಎಸ್‍ಎನ್‍ಎಲ್ ಉಚಿತ ರೋಮಿಂಗ್ ಸೌಲಭ್ಯವನ್ನು ಜಾರಿಗೆ ತರಲಿದೆ ಎಂದು ಘೋಷಿಸಿದ್ದರು. ಬಿಎಸ್‍ಎನ್‍ಎಲ್‍ಗೆ ದೇಶಾದ್ಯಂತ 7.72ರಷ್ಟು ಗ್ರಾಹಕರಿದ್ದಾರೆ.

