ಪೆಟ್ರೋಲ್ ದರ 64 ಪೈಸೆ ಏರಿಕೆ, ಡೀಸೆಲ್ ದರ 1.35 ರೂ ಇಳಿಕೆ

ಪೆಟ್ರೋಲ್ ದರ ಏರಿಕೆಯಾಗಿದ್ದು, ಡೀಸೆಲ್ ದರ ಇಳಿಕೆಯಾಗಿದೆ.
ಪೆಟ್ರೋಲ್ ದರ 64 ಪೈಸೆ ಏರಿಕೆ, ಡೀಸೆಲ್ ದರ 1.35 ರೂ ಇಳಿಕೆ

ನವದೆಹಲಿ: ಪೆಟ್ರೋಲ್ ದರ ಏರಿಕೆಯಾಗಿದ್ದು, ಡೀಸೆಲ್ ದರ ಇಳಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ದರ 65 ಪೈಸೆ ತುಟ್ಟಿಯಾಗಿದ್ದು ಡೀಸೆಲ್ ದರ 1.35 ರೂಪಾಯಿ ಅಗ್ಗವಾಗಿದೆ. ಪರಿಷ್ಕೃತ ದರ ಮಧ್ಯರಾತ್ರಿಯಿಂದ ಜಾರಿಯಾಗಲಿದೆ.  

ಈ ಹಿಂದೆ ಮೇ.15 ರಂದು ಇಂಧನ ಬೆಲೆ ಪರಿಷ್ಕರಣೆಯಾಗಿ ಪೆಟ್ರೋಲ್ ದರ 3.13 ರೂಪಾಯಿ, ಡೀಸೆಲ್ ದರ 2 .17 ರೂಪಾಯಿ ಏರಿಕೆಯಾಗಿತ್ತು. ನಿರಂತರ ಎರಡು ಬಾರಿ ಇಂಧನ ಬೆಲೆ ಏರಿಕೆಯಾದ ಬಳಿಕ ಮತ್ತೊಮ್ಮೆ ಇಂಧನ ದರ ಪರಿಷ್ಕರಣೆಯಾಗಿದ್ದು ಡೀಸೆಲ್ ದರ ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾಗಿದ್ದರ ಪರಿಣಾಮ ಕಳೆದ ಆಗಸ್ಟ್ ನಿಂದ ಪೆಟ್ರೋಲ್, ಡೀಸೆಲ್ ದರ ನಿರಂತರವಾಗಿ ಇಳಿಕೆಯಾಗಿತ್ತು. ಆದರೆ ಇತ್ತೀಚೆಗೆ ಬೆಲೆ ಏರಿಕೆಯಾಗಿಗುತ್ತಿದೆ.

ಪೆಟ್ರೋಲ್ ಡೀಸೆಲ್ ದರಗಳನ್ನು ಮಾರುಕಟ್ಟೆ ದರದೊಂದಿಗೆ ಸಂಯೋಜಿಸಲಾಗಿದ್ದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರಿಳಿತವಾದಾಗ ಇಲ್ಲಿಯೂ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಲಿದೆ.   ಕಳೆದ ಅಕ್ಟೋಬರ್ ನಲ್ಲಿ ಕೇಂದ್ರ ಸರ್ಕಾರ ಡೀಸೆಲ್ ಬೆಲೆಯನ್ನು ನಿಯಂತ್ರಣಮುಕ್ತಗೊಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com