ಹಾಲೆಂಡ್‍ನಲ್ಲಿ ಜೈಲುಗಳಿಗೆ ಹಾಲಿಡೇ!

ಭಾರತದಲ್ಲಿ ಆಗಾಗ ನಡೆಯುವ ಜೈಲ್ ಭರೋ ಚಳವಳಿ ನೆದರ್‍ಲ್ಯಾಂಡ್ಸ್ ನಲ್ಲಿಯೂ ನಡೆಯುವ ಅಗತ್ಯವಿತ್ತೇನೋ! ಯಾಕೆಂದರೆ ಕೈದಿಗಳೇ ಇಲ್ಲದೆ ಜೈಲುಗಳನ್ನು ಮುಚ್ಚುವ ಪರಿಸ್ಥಿತಿ ನೆದರ್‍ಲ್ಯಾಂಡ್ಸ್ ನಲ್ಲಿ ನಿರ್ಮಾಣವಾಗಿದೆ...
ನೆದರ್ ಲ್ಯಾಂಡ್ ಜೈಲು
ನೆದರ್ ಲ್ಯಾಂಡ್ ಜೈಲು

ನವದೆಹಲಿ: ಭಾರತದಲ್ಲಿ ಆಗಾಗ ನಡೆಯುವ ಜೈಲ್ ಭರೋ ಚಳವಳಿ ನೆದರ್‍ಲ್ಯಾಂಡ್ಸ್ ನಲ್ಲಿಯೂ ನಡೆಯುವ ಅಗತ್ಯವಿತ್ತೇನೋ! ಯಾಕೆಂದರೆ ಕೈದಿಗಳೇ ಇಲ್ಲದೆ ಜೈಲುಗಳನ್ನು ಮುಚ್ಚುವ ಪರಿಸ್ಥಿತಿ ನೆದರ್‍ಲ್ಯಾಂಡ್ಸ್ ನಲ್ಲಿ ನಿರ್ಮಾಣವಾಗಿದೆ. ಆದರೆ ಇದು ಆ ದೇಶದ ಪಾಲಿಗೆ ಪಾಸಿಟಿವ್ ವಿಷಯವಾಗಿದ್ದು, ಅಪರಾಧ ಸಂಖ್ಯೆ ಇಳಿಮುಖವಾಗಿರುವುದು ಹಾಗೂ ಕಾನೂನು ಸುವ್ಯವಸ್ಥೆ ಹತೋಟಿಯಲ್ಲಿರುವುದಕ್ಕೆ ಸಾಕ್ಷಿಯಾಗಿದೆ.

ನೆದರ್‍ಲ್ಯಾಂಡ್ಸ್ ನಲ್ಲಿ ಒಟ್ಟು 14,000 ಕೈದಿಗಳನ್ನು ಕೂಡಿಡುವಷ್ಟು ಜೈಲುಗಳಿವೆ. ಆದರೆ, ಸದ್ಯ 12,000 ಕೈದಿಗಳು ಮಾತ್ರ ಆ ದೇಶದ ವಿವಿಧ ಜೈಲುಗಳಲ್ಲಿದ್ದಾರೆ. ಇವರಲ್ಲಿ ಕೆಲವರನ್ನು
ಮನಪರಿವರ್ತನೆ ಮಾಡಿ ಬಿಡುಗಡೆ ಮಾಡಲಾಗಿದೆ. ಇದರಿಂದ ಖಾಲಿ ಹೊಡೆಯುತ್ತಿರುವ ಎಂಟು ಜೈಲುಗಳನ್ನು ಮುಚ್ಚಲು ಅಲ್ಲಿನ ನ್ಯಾಯಾಂಗ ಸಚಿವಾಲಯ ಆದೇಶ ಹೊರಡಿಸಿದೆ.

ಗಂಭೀರ ಅಥವಾ ಹಿಂಸಾಚಟುವಟಿಕೆಗಳು ಅಲ್ಲದಿದ್ದಲ್ಲಿ ನೆದರ್‍ಲ್ಯಾಂಡ್ಸ್ ನಲ್ಲಿ ಕಾರಾಗೃಹ ಶಿಕ್ಷೆ ವಿಧಿಸುತ್ತಿಲ್ಲ. ಅಲ್ಲದೆ ಕೈದಿಗಳ ಮನಪರಿವರ್ತನೆ ಮಾಡುವುದು ಹಾಗೂ ಬಿಡುಗಡೆಯಾದ ಕೈದಿಗಳು ಮತ್ತೆ ಚಟುವಟಿಕೆಗಳಲ್ಲಿ ತೊಡಗದಿರುವುದು ಜೈಲಿನಲ್ಲಿ ಜನಸಂಖ್ಯೆ ಇಳಿಕೆಗೆ ಕಾರಣ ಎಂದು ತಿಳಿದುಬಂದಿದೆ. ಬರುವ ವರ್ಷದಲ್ಲಿ ಈ ಸಂಖ್ಯೆ ಇನ್ನಷ್ಟು ಇಳಿಮುಖವಾಗಲಿದೆ ಎನ್ನುವ ವಿಶ್ವಾಸವನ್ನು ಅಲ್ಲಿ ಸರ್ಕಾರ ವ್ಯಕ್ತಪಡಿಸಿದೆ. ಇದಕ್ಕೆ ವ್ಯತಿರಿಕ್ತ ದೃಶ್ಯ ದೆಹಲಿಯ ತಿಹಾರ್ ಜೈಲಿನಲ್ಲಿ ಕಾಣಸಿಗುತ್ತಿದೆ. 6,250 ಕೈದಿಗಳನ್ನು ಕೂಡಿಡುವ ಸಾಮರ್ಥ್ಯ ಇರುವ ತಿಹಾರ್‍ನಲ್ಲಿ 13000ಕ್ಕೂ ಹೆಚ್ಚು ಕೈದಿಗಳನ್ನು ತುಂಬಿಟ್ಟಿದ್ದು ಉಸಿರುಕಟ್ಟುವಂತಾಗಿದೆ. ಈ ಕೈದಿಗಳಲ್ಲಿ ಬಹುತೇಕರಿಗೆ ಜಾಮೀನು ಸಿಕ್ಕಿದೆ. ಆದರೂ ನ್ಯಾಯಾಲಯ ಕೇಳಿದಷ್ಟು ಶ್ಯೂರಿಟಿ ನೀಡಲು ಸಾಧ್ಯವಾಗದಿದ್ದಕ್ಕೆ ಅವರು ಕಂಬಿ ಎಣಿಸುತ್ತಿದ್ದಾರೆ.

ಮಿತಿಗಿಂತ ಜಾಸ್ತಿ ಕೈದಿಗಳಿರುವುದರಿಂದಾಗಿ ಅವರ ಮೇಲೆ ಹೆಚ್ಚಿನ ನಿಗಾ ಇಡುವುದೂ ಅ„ಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಇದರಿಂದ ಅವರ ಮನಪರಿವರ್ತನೆ ಸವಾಲಾಗಿ ಪರಿಣಮಿಸಿದೆ. ಇನ್ನು ಅನೇಕರ ಪ್ರಕಾರ, ಮಿತಿಗಿಂತ ಹೆಚ್ಚು ಕೈದಿಗಳಿರುವುದರಿಂದ ಜೈಲಿನೊಳಗೆ ಆಗಾಗ ಗುಂಪು ಜಗಳಕ್ಕೂ ಅವಕಾಶ ಮಾಡಿಕೊಟ್ಟಂತಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com