ತಿರುಪತಿ ತಿಮ್ಮಪ್ಪನಿಗೆ ಸರಿಯಾಗಿ ನಾಮ ಇಡದ ಪೂಜಾರಿ ಅಮಾನತು

ತಿರುಪತಿ ವೆಂಕಟೇಶ್ವರನ ಮೂರ್ತಿಗೆ ಹಿರಿಯ ಅರ್ಚಕರೊಬ್ಬರು ವಡಗಲಾಯ್ ನಾಮ ಇಟ್ಟು ಅಮಾನತುಗೊಂಡಿದ್ದಾರೆ.
ತೆಂಗಲಾಯ್ ಆಕಾರದ ನಾಮ
ತೆಂಗಲಾಯ್ ಆಕಾರದ ನಾಮ
Updated on

ತಿರುಪತಿ: ಜಗತ್ತಿನ ಅತಿ ಶ್ರೀಮಂತ ದೇವರು ತಿರುಪತಿ ತಿಮ್ಮಪ್ಪ. ಇಡೀ ಭಾರತೀಯ ಭಾರತೀಯರ ಆರಾಧ್ಯ ದೈವ. ಇಂತ  ತಿಮ್ಮಪ್ಪನ ಮೂರ್ತಿಗೆ ನಾಮ ಇಡುವುದು ಅಂದರೆ ಸುಲಭದ ಮಾತಲ್ಲ. ದಶಕಗಳಿಂದ ಈ ತಿಮ್ಮಪ್ಪ ಮೂರ್ತಿಗೆ ನಾಮ ಇಡಲೆಂದೇ ತಿರುಮಲ ಟ್ರಸ್ಟ್ ವಿಶೇಷ ತರಬೇತಿ ಪಡೆದ ಪೂಜಾರಿಗಳನ್ನ ನೇಮಿಸಿದೆ. ಆದರೆ ದುರಂತ ಅಂದರೆ ಹಿರಿಯ ಅರ್ಚಕರೊಬ್ಬರು ವೆಂಕಟೇಶ್ವರನ ಪ್ರತಿಮೆಗೆ ವಡಗಲಾಯ್ ನಾಮ ಇಟ್ಟು ಅಮಾನತುಗೊಂಡಿದ್ದಾರೆ.
ವೈಷ್ಣವರಲ್ಲಿ ತೆಂಗಲಾಯ್ ಮತ್ತು ವಡಗಲಾಯ್ ಎಂಬ ಎರಡು ಪಂಗಡಗಳಿವೆ. ಈ ಎರಡು ಪಂಗಡಗಳು ನಾಮ ಇಡುವ ಶೈಲಿ ವಿಭಿನ್ನವಾಗಿರುತ್ತದೆ. ವಡಗಲಾಯ್ ಪಂಗಡದವರು ಯು ಆಕಾರದಲ್ಲಿ  ನಾಮ ಹಾಕಿಕೊಳ್ಳುತ್ತಾರೆ. ಎರಡು ಕಡೆ ಬಿಳಿ ಹಾದೂ ಮಧ್ಯ ಹಳದಿ ಬಣ್ಣದ ನಾಮ ಇವರ ಶೈಲಿ.
ಇನ್ನು ತೆಂಗಲಾಯ್ ಪಂಗಡದವರು ವೈ ಆಕಾರದಲ್ಲಿ ನಾಮ ಹಾಕಿಕೊಳ್ಳುತ್ತಾರೆ. ಎರಡು ಕಡೆ ಬಿಳಿ ಮದ್ಯೆ ಕೆಂಪು ಬಣ್ಣದ ನಾಮ ಹಾಕಿಕೊಳ್ಳುತ್ತಾರೆ. ಈ ಎರಡು ಪಂಗಡಗಳಿಗೆ ಶತ ಶತಮಾನದಿಂದಲೂ ಬದ್ದ ದ್ವೇಷವಂತೆ. ತಾವೇ ಶ್ರೇಷ್ಟ. ತಾವೇ ಶ್ರೇಷ್ಠ ಎಂದು ಎರಡು ಪಂಗಡಗಳಲ್ಲಿಯೂ ಹಲವು ವರ್ಷಗಳಿಂದ ಕಲಹ ನಡೆಯುತ್ತಲೇ ಇದೆ.
ಪರಿಸ್ಥಿತಿ ಹೀಗಿರುವಾಗ ಹಿರಿಯ ಅರ್ಚಕ ಅರುಣ್ ಕುಮಾರ್ ವೆಂಕಟೇಶ್ವರನಿಗೆ ತಪ್ಪು ನಾಮ ಹಾಕಿ ಅಮಾನತುಗೊಂಡಿದ್ದಾರೆ. ಅರ್ಚಕ ಅರುಣ್ ಕುಮಾರ್ ತಿರುಪತಿಯ ಉನ್ನತ ಮಟ್ಟದ ಮುಖ್ಯ ಪೂಜಾರಿ ಎ.ವಿ ರಾಮಣ್ಣ ದೀಕ್ಷಿತ್ ಅವರ ಮಗ ಎಂಬುದು ಇಲ್ಲಿ ಗಮನಾರ್ಹ. ದೇವಾಲಯದ ಹಿರಿಯ ಪೂಜಾರಿಗಳು ಅಚಾತುರ್ಯದ ವಿರುದ್ಧ ದೂರು ದಾಖಲಿಸಿದ್ದರು. ಈ ಸಂಬಂಧ ತಿರುಪತಿ ಟ್ರಸ್ಚ್ ಶಿಸ್ತು ಕ್ರಮ ಜರುಗಿಸಿದೆ, 128 ಅಡಿ ಎತ್ತರವಿರುವ ವೆಂಕಟೇಶ್ವರನ ಪ್ರತಿಮೆಯ ಹಣೆಗೆ ಪ್ರತಿದಿನ ಮುಂಜಾನೆ ನಾಮ ಇಡಲಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com