ಸೌರ ಉತ್ಪಾದನೆ ಗುರಿ ಹೆಚ್ಚಳ

ಏಳು ವರ್ಷಗಳೊಳಗೆ ಸೌರ ವಿದ್ಯುತ್ ಉತ್ಪಾದನೆ ಗುರಿಯನ್ನು ಕೇಂದ್ರ ಸರ್ಕಾರ ಐದು ಪಟ್ಟು ಹೆಚ್ಚಿಸಿದೆ. ಅಂದರೆ 2022ರ ವೇಳೆಗೆ 1 ಲಕ್ಷ ಮೆಗಾ ವ್ಯಾಟ್...
ಸೌರ ವಿದ್ಯುತ್
ಸೌರ ವಿದ್ಯುತ್

ನವದೆಹಲಿ:ಏಳು ವರ್ಷಗಳೊಳಗೆ ಸೌರ ವಿದ್ಯುತ್ ಉತ್ಪಾದನೆ ಗುರಿಯನ್ನು ಕೇಂದ್ರ ಸರ್ಕಾರ ಐದು ಪಟ್ಟು ಹೆಚ್ಚಿಸಿದೆ. ಅಂದರೆ 2022ರ ವೇಳೆಗೆ 1 ಲಕ್ಷ ಮೆಗಾ ವ್ಯಾಟ್ ಉತ್ಪಾದಿಸುವ ಗುರಿ
ಹೊಂದಿದೆ. ಇದಕ್ಕಾಗಿ 6 ಲಕ್ಷ ಕೋಟಿ ರು. ಬಂಡವಾಳ ತೊಡಗಿಸಬೇಕಾಗಲಿದೆ. ಜವಾಹರಲಾಲ್ ನೆಹರೂ ನ್ಯಾಷನಲ್ ಸೋಲಾರ್ ಮಿಷನ್(ಜೆಎನ್‍ಎನ್‍ಎಸ್‍ಎಂ) ಈ ಗುರಿ ತಲುಪಲು ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ನಿರ್ಧರಿಸಿತು. ಕೇಂದ್ರ ಸರ್ಕಾರದ ಈ ನಿರ್ಧಾರ ಶುದ್ಧ ಮತ್ತು ಸುಸ್ಥಿರ ವಿದ್ಯುತ್ ಉತ್ಪಾದಿಸುವಲ್ಲಿ ದೊಡ್ಡ ಹೆಜ್ಜೆಯಾಗಿದೆ
ಎಂದು ಕೇಂದ್ರ ಸಂಪರ್ಕ ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಯೋಜನೆ ಸಾಕಾರ ಗೊಂಡ ನಂತರ ಸೌರ ವಿದ್ಯುತ್ ಉತ್ಪಾದನೆ ಯಲ್ಲಿ
ಭಾರತ ಜಗತ್ತಿನ ಅತಿದೊಡ್ಡ ದೇಶವಾಗಲಿದೆ ಎಂದಿದ್ದಾರೆ.
ಡಿಆರ್ ಡಿಒಗೆ ಭೂಮಿ ವರ್ಗಾವಣೆಗೆ ಅಸ್ತು: ಪಶ್ಚಿಮ ಬಂಗಾಳದ ಜಾದವ್ ವಿಶ್ವವಿದ್ಯಾಲಯದ ರಾಷ್ಟ್ರೀಯ ಉಪಕರಣ ವಿಭಾಗಕ್ಕೆ ಸೇರಿದ ಸ್ವಲ್ಪ ಭೂಮಿ ಮತ್ತು ಕಟ್ಟಡಗಳನ್ನು ರಕ್ಷಣಾ
ಸಂಶೋಧನಾ ಕೇಂದ್ರ ಸ್ಥಾಪನೆಗೆ ರಕ್ಷಣಾ ಸಂಶೋಧನೆ ಮತ್ತು ಅಬಿsವೃದಿಟಛಿ ಸಂಸ್ಥೆ (ಡಿಆರ್ ಡಿಒ)ಗೆ ವರ್ಗಾಯಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ದೀರ್ಘಾವಧಿಒಪ್ಪಂದದ ಮೇರೆಗೆ ಭೂಮಿಯನ್ನು ವರ್ಗಾಯಿಸಲಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಸ್ಥಳದಲ್ಲಿ ಡಿಆರ್‍ಡಿಒ ಜಗದೀಶ್ ಚಂದ್ರಬೋಸ್ ಸೆಂಟರ್
ಫಾರ್ ಅಡ್ವಾನ್ಸ್ ಟೆಕ್ನಾಲಜಿ (ಜೆಸಿಬಿಸಿಎಟಿ) ಸ್ಥಾಪಿಸಲಿದೆ. ಸದ್ಯ ರಕ್ಷಣಾ ಇಲಾಖೆಗೆ ಅತಿ ಹೆಚ್ಚಿನ ಸಾಧನಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಕೇಂದ್ರ ಆರಂಭಗೊಂಡ ನಂತರ ಇಲ್ಲೇ ರಕ್ಷಣಾ ಸಾಮಗ್ರಿಗಳನ್ನು ಅಭಿವೃದ್ಧಿಪಡಿಸಲಿದ್ದು ಆಮದು ಕಡಿಮೆ
ಯಾಗಲಿದೆ. ರಾಷ್ಟ್ರೀಯ ಉಪಕರಣ ಸಂಸ್ಥೆ ಸರ್ಕಾರಿ ಸ್ವಾಮ್ಯದ್ದಾಗಿದ್ದು ನಷ್ಟದಲ್ಲಿ ಮುಳುಗಿತ್ತು. ಹೀಗಾಗಿ 2009ರಲ್ಲಿ ಪುನಶ್ಚೇತನಾ ಯೋಜನೆ ರೂಪಿಸಿ ಜಾದವ್ ಪುರ್ ವಿವಿಗೆ
ವರ್ಗಾಯಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com