ಯೋಗೇಂದ್ರ ಯಾದವ್
ಯೋಗೇಂದ್ರ ಯಾದವ್

ನಕಲಿ ಪ್ರಮಾಣ ಪತ್ರದ ಬಗ್ಗೆ ಕೇಜ್ರಿಗೆ ಮೊದಲೇ ಮಾಹಿತಿ ಇತ್ತು: ಯೋಗೇಂದ್ರ ಯಾದವ್

ಜಿತೇಂದ್ರ ತೋಮರ್ ನಕಲಿ ಪ್ರಮಾಣ ಪತ್ರದ ಬಗ್ಗೆ ಚುನಾವಣೆಗೂ ಮುನ್ನವೇ ದೆಹಲಿ ಮುಖ್ಯಮಂತ್ರಿ ಕೇಜ್ರವಾಲ್ ಅವರಿಗೆ ಮಾಹಿತಿ ಇತ್ತು ಎಂದು ಆಮ್ ಆದ್ಮಿ ಪಕ್ಷದ ಉಚ್ಚಾಟಿತ ನಾಯಕ...
Published on

ಚೆನ್ನೈ: ಜಿತೇಂದ್ರ ತೋಮರ್ ನಕಲಿ ಪ್ರಮಾಣ ಪತ್ರದ ಬಗ್ಗೆ ಚುನಾವಣೆಗೂ ಮುನ್ನವೇ ದೆಹಲಿ ಮುಖ್ಯಮಂತ್ರಿ ಕೇಜ್ರವಾಲ್ ಅವರಿಗೆ ಮಾಹಿತಿ ಇತ್ತು ಎಂದು ಆಮ್ ಆದ್ಮಿ ಪಕ್ಷದ ಉಚ್ಚಾಟಿತ ನಾಯಕ ಯೋಗೇಂದ್ರ ಯಾದವ್ ಅವರು ಗುರುವಾರ ಹೇಳಿದ್ದಾರೆ.

ಚೆನ್ನೈನ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, 2015 ದೆಹಲಿ ಚುನಾವಣೆಗೂ ಮುನ್ನವೇ ತೋಮರ್ ಅವರ ನಕಲಿ ಪ್ರಮಾಣ ಪತ್ರದ ಬಗ್ಗೆ ಕೇಜ್ರಿವಾಲ್ ಗೆ ಗೊತ್ತಿತ್ತು. ಈ ಬಗ್ಗೆ ಮಾಹಿತಿ ತಿಳಿದ ಕೂಡಲೇ ಪಕ್ಷದ ನಾಯಕರು ಇದನ್ನು ವಿರೋಧಿಸಿ ತನಿಖೆ ನಡೆಸುವಂತೆ ಆಗ್ರಹಿಸಿದ್ದೆವು. ಆದರೆ, ಅಂದು ಕೇಜ್ರಿವಾಲ್ ಈ ಬಗ್ಗೆ ಆಸಕ್ತಿ ತೋರಿಸಿರಲಿಲ್ಲ. ತೋಮರ್ ನಕಲಿ ಪ್ರಮಾಣ ಪತ್ರ ಬಹಿರಂಗ ಪ್ರಕರಣವನ್ನು ಈ ಮೊದಲೇ ನಿರೀಕ್ಷಿಸಲಾಗಿತ್ತು ಎಂದು ಹೇಳಿದ್ದಾರೆ.

ಇದೇ ವೇಳೆ ಕೇಜ್ರಿವಾಲ್ ಆಂಗ್ಲ ಮಾಧ್ಯಮಗಳಲ್ಲಿ ಹಿಂದಿ ಮಾತನಾಡುವುದರ ಕುರಿತಂತೆ ಮಾತನಾಡಿರುವ ಅವರು, ಕೇಜ್ರಿವಾಲ್ ಅವರು ಕೂಡಲೇ ಆಂಗ್ಲ ಮಾಧ್ಯಮಗಳಲ್ಲಿ ಹಿಂದಿ ಮಾತನಾಡುವುದನ್ನು ಬಿಟ್ಟುಬಿಡಬೇಕು. ಒಬ್ಬ ನಾಯಕನಾದವನು ಯಾವಾಗಲೂ ಕೇಂದ್ರೀಕೃತ ನಾಯಕನಾಗಿರಬೇಕು. ವಿಶಾಲದಾಯಿಯಾಗಿರಬೇಕು. ಪಕ್ಷದಲ್ಲಿ ಸ್ಥಳೀಯ ನಾಯಕರ ಅವಶ್ಯಕತೆ ಇದೆ. ಒಬ್ಬ ಸಾಮಾನ್ಯ ವ್ಯಕ್ತಿ ಕನಿಷ್ಟ ಎಂದರೂ ಒಂದು ವರ್ಷವಾದರೂ ಅಧಿಕಾರವನ್ನು ನಡೆಸಬಲ್ಲ. ಮುಂದಿನ ದಿನಗಳಲ್ಲಿ ಆಮ್ ಆದ್ಮಿ ಪಕ್ಷ ಉತ್ತಮ ಆಡಳಿತ ನಡೆಸಲಿದೆ ಎಂದು ನನಗೆ ನಂಬಿಕೆ ಇದೆ ಎಂದು ಹೇಳಿದ್ದಾರೆ.

ನರೇಂದ್ರ ಮೋದಿ ಅವರ ಸರ್ಕಾರದಿಂದ ನಮ್ಮ ಪಕ್ಷ ಜನಪ್ರಿಯತೆ ಕಳೆದುಕೊಳ್ಳುತ್ತಿದೆ ಎಂಬ ಹೇಳಿಕೆಗಳು ತಪ್ಪು, ಒಂದು ವರ್ಷದ ಆಡಳಿತದಿಂದ ಒಂದು ಸರ್ಕಾರ ಹೀಗೆ ಇದೆ, ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ ಯೋಗೇಂದ್ರ ಯಾದವ್ ಅವರು, ರಾಜಕೀಯ ರಂಗಕ್ಕೆ ಮತ್ತೆ ಇಳಿಯುವುದಾಗಿ ತಿಳಿಸಿದ್ದಾರೆ. ಜೈ ಕಿಸಾನ್ ಅಭಿಯಾನ ಇದೀಗ ರೈತರಿಗೆ ಉಪಯೋಗವಾಗುತ್ತಿದ್ದು, 1 ಹಳ್ಳಿಗರಿಗೆ ತಲುಪಿಸಲು ತಂಡ ಯೋಜನೆ ರೂಪಿಸುತ್ತಿದೆ ಎಂದು ಹೇಳಿದ್ದಾರೆ.

ನಂತರ ಭೂ ಕಾಯ್ದೆ ತಿದ್ದುಪಡಿ ಕುರಿತಂತೆ ಮಾತನಾಡಿರುವ, ತಿದ್ದುಪಡಿ ಕಾಯ್ದೆ ಸಮಸ್ಯೆ ಕೇವಲ ಒಂದು ಭಾಗದ ಸಮಸ್ಯೆಯಷ್ಟೇ. ನಿಜವಾದ ಸಮಸ್ಯೆ ಇರುವುದು ಆರ್ಥಿಕ ಹಾಗೂ ಪರಿಸರ ವಲಯದಲ್ಲಿ. ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಹಾನಿಯಾಗುತ್ತಿದ್ದು, ಲಾಭಕ್ಕಿಂತ ನಷ್ಟಗಳೇ ಹೆಚ್ಚಾಗುತ್ತಿದೆ. ಮೊದಲು ಸಂತ್ರಸ್ಥ ರೈತರಿಗೆ ಸಾಮಾನ್ಯ ಪರಿಹಾರ ಹಣಕ್ಕಾಗಿ ಹೋರಾಟ ನಡೆಸಬೇಕಿದೆ. ಈ ಕುರಿತ ಹೋರಾಟವನ್ನು ಆಗಸ್ಟ್ 10 ರಂದು ನಡೆಯಲಿರುವ ಸಂಸತ್ ನ ಜಂಟಿ ಅಧಿವೇಶನದ ಸಂದರ್ಭದಲ್ಲಿ ನಡೆಸಲಾಗುವುದು ಎಂದಿದ್ದಾರೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com