'ಯೋಗ' ಆಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯದ ಸಂಸ್ಕೃತಿಯಲ್ಲಿದೆ: ಉಪ ಕುಲಪತಿ

ವಿಶ್ವವಿದ್ಯಾಲಯದ ಸಂಸ್ಕೃತಿಯಲ್ಲಿ ಯೋಗವು ಆಳವಾಗಿ ಬೇರುಬಿಟ್ಟಿದೆ ಎಂದು ಆಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯದ ಉಪ ಕುಲಪತಿ ಜಮೀರ್ ಉದ್ದಿನ್ ಶಾ ಹೇಳಿದ್ದಾರೆ...
ವಿಶ್ವವಿದ್ಯಾಲಯದಲ್ಲಿ ಯೋಗಾಭ್ಯಾಸಕ್ಕೆ ಪ್ರೋತ್ಸಾಹ ನೀಡುವುದಾಗಿ ಉಪಕುಲಪತಿ ಹೇಳಿದ್ದಾರೆ.
ವಿಶ್ವವಿದ್ಯಾಲಯದಲ್ಲಿ ಯೋಗಾಭ್ಯಾಸಕ್ಕೆ ಪ್ರೋತ್ಸಾಹ ನೀಡುವುದಾಗಿ ಉಪಕುಲಪತಿ ಹೇಳಿದ್ದಾರೆ.

ಆಲಿಘಡ: ವಿಶ್ವವಿದ್ಯಾಲಯದ ಸಂಸ್ಕೃತಿಯಲ್ಲಿ ಯೋಗವು ಆಳವಾಗಿ ಬೇರುಬಿಟ್ಟಿದ್ದು, ತಮ್ಮ  ಮೊದಲಿನವರು ಸಹ ಕ್ಯಾಂಪಸ್ ಒಳಗೆ ಯೋಗಾಭ್ಯಾಸ ನಡೆಸುವುದಕ್ಕೆ ಪ್ರೋ ತ್ಸಾಹ ನೀಡುತ್ತಿದ್ದರು ಎಂದು ಆಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯದ  ಉಪ ಕುಲಪತಿ  ಜಮೀರ್ ಉದ್ದಿನ್ ಶಾ ಹೇಳಿದ್ದಾರೆ.

''ನಾನು ಕಳೆದ 40 ವರ್ಷಗಳಿಂದ ಯೋಗಾಭ್ಯಾಸದಲ್ಲಿ  ತೊಡಗಿಸಿಕೊಂಡಿದ್ದು, ನನಗೆ ಬಹಳ ಸಹಾಯವಾಗಿದೆ. ವಿಶ್ವವಿದ್ಯಾಲಯದಲ್ಲಿಯೂ ಈ ಸಂಸ್ಕೃತಿ ಇದ್ದು, ಮಾಜಿ ಕುಲಪತಿಗಳು  ಸಹ ಯೋಗಾಭ್ಯಾಸ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.

ಪ್ರಾಚೀನ ಪದ್ಧತಿಯಾದ ಯೋಗಾಭ್ಯಾಸವನ್ನು ದೇಹ ಮತ್ತು ಮನಸ್ಸುಗಳ  ಆರೋಗ್ಯವೃದ್ಧಿಗಾಗಿ ಸ್ವ ಇಚ್ಚೆಯಿಂದ ಮಾಡಬೇಕೇ ಹೊರತು ಯಾರೂ ಬಲವಂತ ಮಾಡಬಾರದು. ಯಾವುದೇ ವ್ಯಕ್ತಿ  ಅಥವಾ ವರ್ಗದ ಮೇಲೆ ಬಲವಂತವಾಗಿ ಹೇರಿದರೆ ವಿರುದ್ಧವಾಗುತ್ತದೆ. ಅದು ಯಾವುದೇ ಧರ್ಮ, ವರ್ಗಗಳಿಗೆ ಸಂಬಂಧಿಸಿದ್ದಲ್ಲ. ನಮ್ಮ ದೇಶದ ಆಸ್ತಿ ಎಂದು  ಶಾ ಅಭಿಪ್ರಾಯಪಟ್ಟಿದ್ದಾರೆ.

ಇದೇ 21ರ ಮೊದಲ ಅಂತಾರಾಷ್ಟ್ರೀಯ ಯೋಗ ದಿನದಂದು ಅದಕ್ಕೆ ಸಂಬಂಧಿಸಿದ ಕಾರ್ಯಾಗಾರ ನಡೆಸುವಂತೆ ವಿಶ್ವವಿದ್ಯಾಲಯದ  ಶಾರೀರಿಕ ಶಿಕ್ಷಣ ವಿಭಾಗಕ್ಕೆ ಸೂಚನೆ ನೀಡಲಾಗಿದೆ. ಈಗ ವಿವಿಯಲ್ಲಿ ಬೇಸಿಗೆ ರಜಾ ಸಮಯವಾಗಿರುವುದರಿಂದ ಎಲ್ಲರೂ ಭಾಗವಹಿಸಬಹುದೆಂಬ ನಿರೀಕ್ಷೆಯಿಲ್ಲ ಎಂದು  ಹೇಳಿದರು.

ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ ವಿಶ್ವಕ್ಕೆ ಶಾಂತಿಯ ಸಂದೇಶ ಸಾರುವುದು. ಮನುಷ್ಯರ ನಡುವೆ ಸಂಬಂಧ ಬೆಸೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
'' ಯೋಗ ಮತ್ತು ಧಾರ್ಮಿಕತೆ'' ಕುರಿತು ಆಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯ  ದೇಶ ಮಟ್ಟದಲ್ಲಿ ಸೆಮಿನಾರ್ ನ್ನು ಆಯೋಜಿಸಿದ್ದು,  ಅದರಲ್ಲಿ ಮಾಜಿ ಸಚಿವ ಮತ್ತು ರಾಜ್ಯಸಭಾ ಸದಸ್ಯ ಕರಣ್ ಸಿಂಗ್ ಭಾಗವಹಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com