ಮೈ ಲಾರ್ಡ್, ನೀವೊಮ್ಮೆ ಬುರ್ಖಾ ಹಾಕಿ ಕೋರ್ಟ್ ಕಾರಿಡಾರಲ್ಲಿ ಓಡಾಡಿ: ದುಶ್ಯಂತ್ ದಾವೆ

``ಮೈ ಲಾರ್ಡ್, ನೀವೊಮ್ಮೆ ಬುರ್ಖಾ ಧರಿಸಿ ಕೋರ್ಟ್ ಕಾರಿಡಾರ್‍ನಲ್ಲಿ ಓಡಾಡಿ ನೋಡಿ. ಕೋರ್ಟ್ ಬಗ್ಗೆ ನ್ಯಾಯವಾದಿಗಳು ಸೇರಿದಂತೆ ಯಾರ್ಯಾರು ಏನೇನು ಮಾತನಾಡುತ್ತಿದ್ದಾರೆ ಎಂಬುದು ಆಗ ನಿಮಗೆ ಗೊತ್ತಾಗುತ್ತದೆ.''...
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದೆಹಲಿ: ``ಮೈ ಲಾರ್ಡ್, ನೀವೊಮ್ಮೆ ಬುರ್ಖಾ ಧರಿಸಿ ಕೋರ್ಟ್ ಕಾರಿಡಾರ್‍ನಲ್ಲಿ ಓಡಾಡಿ ನೋಡಿ. ಕೋರ್ಟ್ ಬಗ್ಗೆ ನ್ಯಾಯವಾದಿಗಳು ಸೇರಿದಂತೆ ಯಾರ್ಯಾರು ಏನೇನು ಮಾತನಾಡುತ್ತಿದ್ದಾರೆ ಎಂಬುದು ಆಗ ನಿಮಗೆ ಗೊತ್ತಾಗುತ್ತದೆ.''

ಇದು ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗ(ಎನ್‍ಜೆಎಸಿ)ದ ಪರ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ದುಶ್ಯಂತ್ ದಾವೆ ಹೇಳಿದ ಮಾತು. ನ್ಯಾ.ಜೆ.ಎಸ್.ಖೆಹರ್ ನೇತೃತ್ವದ ಸಂವಿಧಾನ ಪೀಠದ ಮುಂದೆ ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ ಪರ ವಾದ ಮಂಡಿಸಿದ ನ್ಯಾ.ದಾವೆ, ``ನ್ಯಾಯಾಂಗದಲ್ಲಾಗುತ್ತಿರುವ ಕೆಟ್ಟ ನೇಮಕ ಮತ್ತು ಕೊಳೆಯುತ್ತಿರುವ ನ್ಯಾಯ ವಿತರಣೆ ವ್ಯವಸ್ಥೆಯ ಬಗ್ಗೆ ನ್ಯಾಯವಾದಿಗಳಿಗೇ ಎಷ್ಟು ಅಸಮಾಧಾನವಿದೆ ಎಂಬುದು ಗೊತ್ತಾಗಬೇಕೆಂದರೆ ನೀವೊಮ್ಮೆ ಬುರ್ಖಾ ಧರಿಸಿ ಓಡಾಡಬೇಕು.

1984ರ ಸಿಖ್ ವಿರೋಧಿ ದಂಗೆಯಾಗಲೀ, 2002ರ ಗುಜರಾತ್ ಗಲಭೆಯಾಗಲೀ, ಈ ಯಾ್ವ ಪ್ರಕರಣದಲ್ಲೂ ಸೂಕ್ತ ನ್ಯಾಯ ದೊರೆತಿಲ್ಲ. ನ್ಯಾಯಾಂಗಕ್ಕೆ ನೇಮಕ ಹೇಗಾಗುತ್ತದೆ ಎಂಬುದಕ್ಕೆ ಕಾರಣ ನಿಮಗೆ ಗೊತ್ತಿರಬಹುದು. ಎಲ್ಲ ನ್ಯಾಯಾಲಯಗಳೂ ರಾಜಕಾರಣಿಗಳು, ಸಿನಿಮಾ ತಾರೆಯರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವುದು ನಾಚಿಕೆಗೇಡಿನ ವಿಚಾರ. ಇಂಥದ್ದರಿಂದ ಜನಸಾಮಾನ್ಯರು ನ್ಯಾಯದಿಂದ ವಂಚಿತರಾಗಬೇಕಾಗಿದೆ'' ಎಂದಿದ್ದಾರೆ.

ನೇಮಕವು ನ್ಯಾಯಾಂಗ ಸ್ವಾತಂತ್ರ್ಯದ ಭಾಗ:
ನ್ಯಾಯಾಂಗದ ಹಕ್ಕಿನಲ್ಲಿ ನ್ಯಾಯಾಧೀಶರ ನೇಮಕವೂ ಸೇರುತ್ತದೆ. ಇದು ನ್ಯಾಯಾಂಗ ಸ್ವಾತಂತ್ರ್ಯದ ಪ್ರಮುಖ ಭಾಗವಾಗಿದ್ದು, ಸಂವಿಧಾನದ ಮೂಲ ಆಶಯವೂ ಆಗಿದೆ. ನ್ಯಾಯಾಂಗ ನೇಮಕ ಆಯೋಗವು ಈ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತದೆ ಎಂದು ಹಿರಿಯ ನ್ಯಾಯವಾದಿ ಫಾಲಿ ಎಸ್. ನಾರಿಮನ್ ಅವರು ಸುಪ್ರೀಂಗೆ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com