ಸೆಲ್ಫಿ ಕಳಿಸಿ ಗಂಗಾ ನದಿ ಸ್ವಚ್ಛಗೊಳಿಸಿ!

ನೀವು ಗಂಗಾ ನದಿಯನ್ನು ಸ್ವಚ್ಛಗೊಳಿಸಬೇಕಾ? ಹಾಗಾದರೆ ಸೆಲ್ಫಿ ತೆಗೆದು ಕಳಿಸಿ,
ಗಂಗಾ ನದಿ ಬಳಿ ಸೆಲ್ಫಿ(ಸಾಂದರ್ಭಿಕ ಚಿತ್ರ)
ಗಂಗಾ ನದಿ ಬಳಿ ಸೆಲ್ಫಿ(ಸಾಂದರ್ಭಿಕ ಚಿತ್ರ)

ನವದೆಹಲಿ: ನೀವು ಗಂಗಾ ನದಿಯನ್ನು ಸ್ವಚ್ಛಗೊಳಿಸಬೇಕಾ? ಹಾಗಾದರೆ ಸೆಲ್ಫಿ ತೆಗೆದು ಕಳಿಸಿ, ಗಂಗಾ ನದಿ ಸ್ವಚ್ಛತೆಗೂ ಸೆಲ್ಫಿಗೂ ಏನು ಸಂಬಂಧ ಅಂತೀರಾ? ಇದು ಗಂಗಾ ನದಿ ಸ್ವಚ್ಛತೆಗಾಗಿ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಹೊಸ ಯೋಜನೆ.

ಕ್ಲೀನ್ ಗಂಗಾ ರಾಷ್ಟ್ರೀಯ ಮಿಷನ್ ಗಾಗಿ ಕೇಂದ್ರ ಸರ್ಕಾರ ವಿನೂತನ ಮಾರ್ಗವನ್ನು ಪರಿಚಯಿಸಿದ್ದು, ಭುವನ್ ಗಂಗಾ ಎಂಬ ಆಪ್ ನ್ನು ಬಿಡುಗಡೆ ಮಾಡಲಿದೆ, ಇದನ್ನು ಇಸ್ರೋ ಸಂಸ್ಥೆ ಅಭಿವೃದ್ಧಿ ಪಡಿಸಿದೆ. ನೀವು ಮಲಿನಗೊಂಡಿರುವ ಗಂಗಾ ನದಿ ಭಾಗದಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸಿ ಭುವನ್ ಗಂಗಾ ಆಪ್ ನಲ್ಲಿ ಅಪ್ ಲೋಡ್ ಮಾಡಿದರೆ ಸಾಕು ಗಂಗಾ ನದಿ ಸ್ವಚ್ಛಗೊಳ್ಳುತ್ತದೆ.

ನೀವು ಕಳಿಸಿದ ಸೆಲ್ಫಿಯನ್ನು ಪಡೆಯಲಿರುವ ಕ್ಲೀನ್ ಗಂಗಾ ರಾಷ್ಟ್ರೀಯ ಮಿಷನ್ ಅಧಿಕಾರಿಗಳು ಮಲಿನಗೊಂಡಿರುವ ಭಾಗವನ್ನು ಸ್ವಚ್ಛಗೊಳಿಸಲು ಕಾರ್ಮಿಕರಿಗೆ ಸೂಚನೆ ನೀಡಲಿದ್ದಾರೆ. ಅಲ್ಲಿಗೆ ಒಂದು ಚಿಕ್ಕ  ಸೆಲ್ಫಿಯಿಂದ ಗಂಗಾ ನದಿ ಸ್ವಚ್ಛತೆಗೆ ಸಾರ್ವಜನಿಕರೂ ಸಹಾಯ ಮಾಡಿದಂತಾಗುತ್ತದೆ.

ಭುವನ್ ಗಂಗಾ ಆಪ್ ನಲ್ಲಿ 2 ,500 ಕಿ.ಮೀ ಉದ್ದದ ನದಿಯ ನಕ್ಷೆ ಇದ್ದು, ಇದರಲ್ಲಿ ಮಲಿನಗೊಂಡಿರುವ ಪ್ರದೇಶಗಳ ಚಿತ್ರಗಳನ್ನು ಅಪ್ ಲೋಡ್ ಮಾಡಿದ ತಕ್ಷಣ ನಕ್ಷೆಯ ಸಹಾಯದಿಂದ ಆ ನಿರ್ದಿಷ್ಟ ಸ್ಥಳವನ್ನು ಸೂಚಿಸುತ್ತದೆ. ಈ ವಿನೂತನ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುವ ನಿರೀಕ್ಷೆ ಇದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com