
ನವದೆಹಲಿ: ಐಪಿಎಲ್ ಹಗರಣ ಪ್ರಮುಖ ಆರೋಪಿ ಲಲಿತ್ ಮೋದಿ ಭೇಟಿ ಕುರಿತಂತೆ ಯಾವುದೇ ಮಾಹಿತಿಯನ್ನು ರಾಕೇಶ್ ಮರಿಯಾ ಅವರು ನನಗೆ ನೀಡಿರಲಿಲ್ಲ ಎಂದು ಮಾಜಿ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಸೋಮವಾರ ಹೇಳಿದ್ದಾರೆ.
ದೇಶದ ಪ್ರತಿಷ್ಠಿತ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರು ಎಂದೇ ಹೆಸರು ಮಾಡಿದ್ದ ಮುಂಬೈ ಪೊಲೀಸ್ ಆಯುಕ್ತ ರಾಕೇಶ್ ಮರಿಯಾ ಅವರು ಐಪಿಎಲ್ ಹಗರಣ ಪ್ರಮುಖ ಆರೋಪಿ ಲಲಿತ್ ಮೋದಿ ಅವರು ಕಳೆದ ವರ್ಷದ ಲಂಡನ್ ಭೇಟಿಯಾಗಿರುವ ಚಿತ್ರಗಳು ಮಾಧ್ಯಮಗಳಲ್ಲಿ, ಅಂತರ್ಜಾಲಗಳಲ್ಲಿ ಹರಿದಾಡ ತೊಡಗಿದ್ದವು. ಈ ಚಿತ್ರಗಳು ಹಲವು ಚರ್ಚೆಗಳಿಗೆ ಕಾರಣವಾಗಿತ್ತು.
ಹೀಗಾಗಿ ಪ್ರಕರಣ ಕುರಿತಂತೆ ಸ್ಪಷ್ಟನೆ ನೀಡಿದ್ದ ರಾಕೇಶ್ ಮರಿಯಾ ಅವರು, ನಾನು ಕಳೆದ ಜುಲೈನಲ್ಲಿ ಸಮಾವೇಶವೊಂದರಲ್ಲಿ ಪಾಲ್ಗೊಳ್ಳಲೆಂದು ಲಂಡನ್‍ಗೆ ತೆರಳಿದ್ದೆ. ಅಲ್ಲಿ ಲಲಿತ್‍ರನ್ನು ಭೇಟಿಯಾಗಿದ್ದು ನಿಜ. ಲಲಿತ್ ಮತ್ತು ಅವರ ವಕೀಲರು ನನ್ನನ್ನು ಸಂಪರ್ಕಿಸಿ, ಅವರ ಜೀವಕ್ಕೆ ಭೂಗತಲೋಕದಿಂದ ಬೆದರಿಕೆ ಇರುವ ಬಗ್ಗೆ ತಿಳಿಸಿದರು. ನಾನು ಅವರಿಗೆ ಮುಂಬೈಗೆ ಬಂದು ಅಧಿಕೃತ ದೂರು ದಾಖಲಿಸುವಂತೆ ಸೂಚಿಸಿದೆ. ನಂತರ ಭಾರತಕ್ಕೆ ವಾಪಸಾದ ಮೇಲೆ ನಾನು ಈ ವಿಚಾರದ ಬಗ್ಗೆ (ಲಲಿತ್ ರನ್ನು ಭೇಟಿಯಾದ) ರಹಸ್ಯ ವರದಿ ಸಿದ್ಧಪಡಿಸಿ ಡಿಜಿಪಿ ಹಾಗೂ ಗೃಹ ಇಲಾಖೆಗೆ ನೀಡಿದೆ'' ಎಂದು ಸ್ಪಷ್ಟನೆ ಹೇಳಿದ್ದರು.
ರಾಕೇಶ್ ಅವರ ಈ ಹೇಳಿಕೆಯನ್ನು ತಿರಸ್ಕರಿಸಿರುವ ಚವಾಣ್ ಅವರು, ರಾಕೇಶ್ ಹಾಗೂ ಲಲಿತ್ ಮೋದಿ ಭೇಟಿ ಕುರಿತಂತೆ ನನಗೆ ಮಾಹಿತಿ ಇರಲಿಲ್ಲ. ಭೇಟಿ ವೇಳೆ ರಾಕೇಶ್ ನನಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ ಎಂದು ಹೇಳಿದ್ದಾರೆ.
Advertisement