ಲಖ್ವಿ ವಿರುದ್ಧ ಕ್ರಮ: ವಿಶ್ವಸಂಸ್ಥೆಯಲ್ಲಿ ಭಾರತದ ನಡೆಗೆ ಚೀನಾ ತಡೆ

26/11 ಮುಂಬೈ ದಾಳಿಯ ಪ್ರಮುಖ ರುವಾರಿ ಝಕಿ ಉರ್ ರೆಹಮಾನ್‌ ಲಖ್ವಿ ಬಿಡುಗಡೆ ವಿರೋಧಿಸಿ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನದ ಮೇಲೆ ಒತ್ತಡ ಹೇರಿದ್ದ ಭಾರತದ ಕ್ರಮಕ್ಕೆ ವಿಶ್ವಸಂಸ್ಥೆಯಲ್ಲಿ ಚೀನಾ ತಡೆ ನೀಡಿದೆ...
ಝಕಿ ಉರ್ ರೆಹಮಾನ್‌ ಲಖ್ವಿ
ಝಕಿ ಉರ್ ರೆಹಮಾನ್‌ ಲಖ್ವಿ

ವಿಶ್ವಸಂಸ್ಥೆ: 26/11 ಮುಂಬೈ ದಾಳಿಯ ಪ್ರಮುಖ ರುವಾರಿ ಝಕಿ ಉರ್ ರೆಹಮಾನ್‌ ಲಖ್ವಿ ಬಿಡುಗಡೆ ವಿರೋಧಿಸಿ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನದ ಮೇಲೆ ಒತ್ತಡ ಹೇರಿದ್ದ ಭಾರತದ ಕ್ರಮಕ್ಕೆ ವಿಶ್ವಸಂಸ್ಥೆಯಲ್ಲಿ ಚೀನಾ ತಡೆಯೊಡ್ಡಿದೆ.

ಉಗ್ರ ಲಖ್ವಿ ಬಿಡುಗಡೆ ಮಾಡಿದ ಪಾಕಿಸ್ತಾನದ ಕ್ರಮವನ್ನು ವಿರೋಧಿಸಿದ್ದ ಭಾರತವು ಸ್ಪಷ್ಟನೆಗಾಗಿ ವಿಶ್ವಸಂಸ್ಥೆಯ ನಿರ್ಬಂಧ ಸಮಿತಿಯಲ್ಲಿ ಮನವಿ ಮಾಡಿತ್ತು. ಈ ಮನವಿಯನ್ನು ಸ್ವೀಕರಿಸಿದ ವಿಶ್ವಸಂಸ್ಥೆಯ ನಿರ್ಬಂಧ ಸಮಿತಿಯು ಚರ್ಚೆ ನಡೆಸಿತ್ತು. ಚರ್ಚೆಯಲ್ಲಿ ಚೀನಾ ದೇಶವು ವಿಶ್ವಸಂಸ್ಥೆಯಲ್ಲಿ ಭಾರತದ ನಡೆಗೆ ತಡೆಯೊಡ್ಡಿದ್ದು, ಲಖ್ವಿ ವಿಚಾರದಲ್ಲಿ ಭಾರತವೇ ಸರಿಯಾದ ರೀತಿಯ ಮಾಹಿತಿ ನೀಡಿಲ್ಲ ಎಂದು ಹೇಳಿದೆ.

ಈ ಹಿಂದೆ ಭಾರತಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯ ಸ್ಥಾನ ನೀಡಲು ಅಮೆರಿಕ ಬೆಂಬಲ ನೀಡಿತ್ತು. ಅಮೆರಿಕ ಬೆಂಬಲ ನೀಡುತ್ತಿದ್ದಂತೆ ಚೀನಾ ಬೆಂಬಲ ಸಹ ಭಾರತಕ್ಕೆ ಖಾಯಂ ಸದಸ್ಯ ನೀಡುವಂತೆ ಬೆಂಬಲ ನೀಡಿತ್ತು. ಇದೀಗ ಲಖ್ವಿ ವಿಚಾರವಾಗಿ ಚೀನಾ ವಿಶ್ವಸಂಸ್ಥೆಯಲ್ಲಿ ಭಾರತದ ನಡೆಗೆ ತಡೆ ನೀಡಿರುವುದು ವಿಶ್ವಸಮುದಾಯದಲ್ಲಿ ತೀವ್ರ ಚರ್ಚೆಗೆ ಗ್ರಾಹವಾಗಿದೆ. ಇತ್ತೀಚೆಗಷ್ಟೇ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಚೀನಾ ಅಧ್ಯಕ್ಷ ಕ್ಸಿಜಿನ್ ಪಿಂಗ್ ರಕ್ಷಣಾ ಒಪ್ಪಂದಗಳು ಸೇರಿದಂತೆ ಹಲವು ಮಹತ್ವದ ಒಪ್ಪಂದಗಳಿಗೆ ಸಹಿಹಾಕಿದ್ದರು. ವಿಶ್ವಸಂಸ್ಥೆಯಲ್ಲಿ ಚೀನಾದ ಇಂದಿನ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದ್ದು, ಒಂದು ವೇಳೆ ಚೀನಾ ಭಾರತದ ಪರವಾಗಿ ನಿಲುವು ತಳೆದರೆ ತನ್ನ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಒಪ್ಪಂದದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಚೀನಾ ಲಖ್ವಿ ವಿಚಾರದಲ್ಲಿ ಭಾರತದ ಕ್ರಮವನ್ನು ವಿರೋಧಿಸಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮುಂಬೈ ಮೇಲಿನ ಉಗ್ರರ ದಾಳಿ ಸಂದರ್ಭದಲ್ಲಿ ಲಷ್ಕರ್ ಎ ತೊಯ್ಬಾದ 10 ಮಂದಿ ಬಂದೂಕುಧಾರಿಗಳಿಗೆ ನಿಯಂತ್ರಣ ಕೊಠಡಿಯಿಂದ ಉಗ್ರ ಝಕಿ ಉರ್ ರೆಹಮಾನ್ ಲಖ್ವಿ ನಿರ್ದೇಶನ ನೀಡಿದ್ದ. ಇದರಂತೆ ಲಖ್ವಿ 6 ವರ್ಷಗಳ ಕಾಲ ಸೆರೆವಾಸದಲ್ಲಿದ್ದ ಲಖ್ವಿಯನ್ನು ಏಪ್ರಿಲ್ 11 ರಂದು ಪಾಕಿಸ್ತಾನ ಹೈ ಕೋರ್ಟ್ ಬಿಡುಗಡೆ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com