ಲಖ್ವಿ 'ಒಂದು ಹಾವು', ಅದು ಚೀನಾಗೂ ಗಂಭೀರವಾಗಿ ಕಚ್ಚುತ್ತೆ: ಬಿಜೆಪಿ

ಮುಂಬೈ ದಾಳಿಯ ರೂವಾರಿ, ಎಲ್‌ಇಟಿ ಉಗ್ರ ಝಕಿವುರ್ ರೆಹಮಾನ್ ಲಖ್ವಿ ಒಂದು ಹಾವು ಎಂದು ಕರೆದಿರುವ ಬಿಜೆಪಿ, ಅದು ಭಾರತಕ್ಕೆ...
ಝಕಿವುರ್ ರೆಹಮಾನ್ ಲಖ್ವಿ
ಝಕಿವುರ್ ರೆಹಮಾನ್ ಲಖ್ವಿ

ನವದೆಹಲಿ: ಮುಂಬೈ ದಾಳಿಯ ರೂವಾರಿ, ಎಲ್‌ಇಟಿ ಉಗ್ರ ಝಕಿವುರ್ ರೆಹಮಾನ್ ಲಖ್ವಿ ಒಂದು ಹಾವು ಎಂದು ಕರೆದಿರುವ ಬಿಜೆಪಿ, ಅದು ಭಾರತಕ್ಕೆ ಅಷ್ಟೇ ಅಲ್ಲ ಚೀನಾಗೂ ಗಂಭೀರವಾಗಿ ಕಚ್ಚಲಿದೆ ಎಂದು ಬುಧವಾರ ಹೇಳಿದೆ.

ಲಖ್ವಿಯನ್ನು ಬಿಡುಗಡೆ ಮಾಡಿದ ಪಾಕಿಸ್ತಾನ ವಿರುದ್ಧ ಕ್ರಮ ಕೈಗೊಳ್ಳಲು ವಿಶ್ವಸಂಸ್ಥೆಯ ನಿರ್ಣಯಕ್ಕೆ ಚೀನಾ ತಡೆಯೊಡ್ಡಿರುವುದನ್ನು ವಿದೇಶಾಂಗ ಸಚಿವಾಲಯ ಗಂಭೀರವಾಗಿ ಪರಿಗಣಿಸಿದೆ ಎಂದು ಬಿಜೆಪಿ ವಕ್ತಾರ ಎಂ.ಜೆ.ಅಕ್ಬರ್ ಅವರು ಹೇಳಿದ್ದಾರೆ.

'ಚೀನಾ ನಮ್ಮ ಕ್ರಮವನ್ನು ಮತ್ತು ಭಯೋತ್ಪಾದನೆಯನ್ನು ಅರ್ಥ ಮಾಡಿಕೊಳ್ಳುತ್ತೆ ಎಂಬ ವಿಶ್ವಾಸವಿದೆ. ವಿಶೇಷವಾಗಿ ಲಖ್ವಿಯಂತಹ ಹುಳಗಳು ಭಾರತಕ್ಕೆ ಅಷ್ಟೇ ಅಲ್ಲ ಚೀನಾಗೂ ಕಚ್ಚುತ್ತವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು' ಎಂದು ಅಕ್ಬರ್ ಹೇಳಿದ್ದಾರೆ.

ಲಖ್ವಿ ಬಿಡುಗಡೆ ವಿರುದ್ಧ ಭಾರತ ಸರ್ಕಾರ ನೀಡಿದ ದೂರಿನ ಮೇರೆಗೆ ವಿಶ್ವಸಂಸ್ಥೆಯ ಉನ್ನತಮಟ್ಟದ ಸಮಿತಿಯೊಂದು ಸಭೆ ಸೇರಿ ಪಾಕ್‌ನಿಂದ ಬೆಳವಣಿಗೆ ಬಗ್ಗೆ ಸ್ಪಷ್ಟನೆ ನೀಡುವಂತೆ ನಿರ್ಣಯ ಕೈಗೊಂಡಿತ್ತು. ಆದರೆ ವಿಶ್ವಸಂಸ್ಥೆಯಲ್ಲಿನ ಚೀನಾ ರಾಯಭಾರಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಈ ಹೇಳಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com