ಅತ್ಯಾಚಾರಿಯೊಂದಿಗೆ ಸಂಧಾನ ಮಾಡಿಕೊಳ್ಳಲು ಸಂತ್ರಸ್ತೆಗೆ ಕೋರ್ಟ್ ಆದೇಶ!

ಮದ್ರಾಸ್ ನ ಹೈಕೋರ್ಟ್ ನ್ಯಾಯಮೂರ್ತಿಗಳೊಬ್ಬರು ಅತ್ಯಾಚಾರ ಮಾಡಿದವನೊಂದಿಗೇ ಸಂಧಾನ ಮಾಡಿಕೊಳ್ಳುವಂತೆ ಕೋರ್ಟ್ ಆದೇಶ ನೀಡಿದ್ದಾರೆ.
ಮದ್ರಾಸ್ ಹೈಕೋರ್ಟ್
ಮದ್ರಾಸ್ ಹೈಕೋರ್ಟ್

ಚೆನ್ನೈ: ಅತ್ಯಾಚಾರವೆಸಗಿದವರಿಗೆ ಕೋರ್ಟ್ ಗಳಲ್ಲಿ ಶಿಕ್ಷೆ ನೀಡುವುದು ಸಾಮಾನ್ಯ ಆದರೆ ಮದ್ರಾಸ್ ನ ಹೈಕೋರ್ಟ್ ನ್ಯಾಯಮೂರ್ತಿಗಳೊಬ್ಬರು ಅತ್ಯಾಚಾರ ಮಾಡಿದವನೊಂದಿಗೇ ಸಂಧಾನ ಮಾಡಿಕೊಳ್ಳುವಂತೆ ಆದೇಶ ನೀಡಿದ್ದಾರೆ .

ವಿವಾದ ಕೊನೆಗಾಣಿಸುವಿಕೆಯ ಪರ್ಯಾಯ ಮಾರ್ಗದ ಪ್ರಕಾರ ಅತ್ಯಾಚಾರವೆಸಗಿದವನೊಂದಿಗೆ ಸಂಧಾನ ಮಾಡಿಕೊಳ್ಳಿ ಎಂದು ಮದ್ರಾಸ್  ಹೈಕೋರ್ಟ್ ಮಹಿಳೆಯೊಬ್ಬರಿಗೆ ಆದೇಶ ನೀಡಿದೆ. ತಮಿಳುನಾಡಿನ  ಮಹಿಳೆಯೊಬ್ಬರ ಮೇಲೆ ಆಕೆ ಅಪ್ರಾಪ್ತೆಯಾಗಿದ್ದಾಗ ಅತ್ಯಾಚಾರ ನಡೆದಿತ್ತು. ಈಗ ಆಕೆ ಒಂದು ಮಗಿವಿನ ತಾಯಿಯಾಗಿದ್ದು ಅತ್ಯಾಚಾರಿಯೊಂದಿಗೆ ಸಂಧಾನ ಮಾಡಿಕೊಳ್ಳುವಂತೆ ಕೋರ್ಟ್ ಸೂಚನೆ ನೀಡಿದೆ.

ಸಂಧಾನ ಪ್ರಕ್ರಿಯೆಗಾಗಿ ಅಪರಾಧಿ ಮೋಹನ್ ಗೆ ಜಾಮೀನನ್ನೂ ನೀಡಲಾಗಿದೆ. ಅತ್ಯಾಚಾರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜುಲೈ 2012 ರಲ್ಲಿ ಅಪರಾಧಿ ಮೋಹನ್ ಗೆ ಸೆಷನ್ಸ್ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ, 2 ಲಕ್ಷ ದಂಡ ವಿಧಿಸಿ ಶಿಕ್ಷೆ ಪ್ರಕಟಿಸಿತ್ತು.   

ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದ ಅಪರಾಧಿ ಮೋಹನ್, ತನಗೆ ನೀಡಲಾಗಿರುವ ಶಿಕ್ಷೆಯನ್ನು ಪ್ರಶ್ನಿಸಿದ್ದ. ಅಲ್ಲದೇ ಸಂಧಾನ ಪ್ರಕ್ರಿಯೆಗೆ ಸಿದ್ಧವಿರುವುದಾಗಿ ತಿಳಿಸಿದ್ದ. ಅಪರಾಧಿಯ ಅರ್ಜಿಯನ್ನು ಪುರಸ್ಕರಿಸಿರುವ ಮದ್ರಾಸ್ ಹೈಕೋರ್ಟ್ ನ ನ್ಯಾ.ದೇವದಾಸ್ ಅತ್ಯಾಚಾರಕ್ಕೊಳಗಾದ ಮಹಿಳೆಗೆ ಅಪರಾಧಿಯೊಂದಿಗೆ ಸಂಧಾನ ಮಾಡಿಕೊಳ್ಳುವಂತೆ ಆದೇಶ ನೀಡಿದ್ದಾರೆ. ಈ ಪ್ರಕರಣದಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆ ಮಾತ್ರ ಸಂತ್ರಸ್ತೆಯಲ್ಲ, ಈ ಘಟನೆಯಿಂದಾಗಿ ಜನ್ಮಿಸಿರುವ ಮಗು ಸಹ ಸಂತ್ರಸ್ತೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಆದ್ದರಿಂದ ಸಂಧಾನ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com