
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ರಿಪಬ್ಲಿಕನ್ ಪಕ್ಷದಿಂದ ಲ್ಯೂಸಿಯಾನಾದ ಗವರ್ನರ್ ಬಾಬಿ ಜಿಂದಾಲ್ ಕೂಡ ಕಣಕ್ಕಿಳಿಯದ್ದಾರೆ. ಈ ವಿಚಾರವನ್ನು ಜಿಂದಾಲ್ ಬುಧವಾರ ಟ್ವಿಟರ್ ಮೂಲಕ ಅಧಿಕೃತವಾಗಿ ಘೋಷಿಸಿದ್ದಾರೆ.
ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಭಾರತೀಯ ಮೂಲದ ಮೊದಲ ವ್ಯಕ್ತಿಯಾಗಿದ್ದಾರೆ. ಈ ಚುನಾವಣೆಗೆ ಸಂಬಂಧಿಸಿ ವರ್ಷದಿಂದಲೇ ಸದ್ದಿಲ್ಲದ ತಯಾರಿ ಆರಂಭಿಸಿದ್ದ ಜಿಂದಾಲ್ ಅವರು ಪತ್ನಿ ಸುಪ್ರಿಯಾ ಜತೆಗೂಡಿ ತಮ್ಮ ಮಕ್ಕಳಿಗೆ ಚುನಾವಣಾ ಪ್ರಚಾರದ ಕುರಿತು ಮಾಹಿತಿ ನೀಡುತ್ತಿರುವ ವಿಡಿಯೋವೊಂದನ್ನೂ ಬಿಡುಗಡೆ ಮಾಡಿದ್ದಾರೆ.
ಇತ್ತೀಚೆಗೆ ನಡೆದ ಸಮೀಕ್ಷೆಯೊಂದರಲ್ಲಿ ಜಿಂದಾಲ್ ಅವರಿಗೆ ನಿರಾಶಾದಾಯಕ ಫಲಿತಾಂಶ ಬಂದಿತ್ತು. ಅವರ ವೆಚ್ಚ ಕಡಿತ ಕ್ರಮಗಳು ಸಾಕಷ್ಟು ವಿರೋಧಕ್ಕೆ ಕಾರಣವಾಗಿತ್ತು. ಇಷ್ಟಾದರೂ ಜಿಂದಾಲ್ ಅವರಿಗೆ ಗೆಲ್ಲುವ ಅವಕಾಶಗಳಿವೆ ಎನ್ನುವ ನಿರೀಕ್ಷೆ ಬೆಂಬಲಿಗರದು.
Advertisement