ಅತ್ಯಾಚಾರಿಯೊಂದಿಗೆ ಸಂಧಾನ: ಮದ್ರಾಸ್ ಹೈಕೋರ್ಟ್ ಆದೇಶ ಒಪ್ಪಿದ ಸಂತ್ರಸ್ತೆ

ಅತ್ಯಾಚಾರಿಯೊಂದಿಗೆ ಸಂಧಾನ ಮಾಡಿಕೊಳ್ಳುವಂತೆ ಮದ್ರಾಸ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸಂತ್ರಸ್ತೆ ಒಪ್ಪಿಕೊಂಡಿದ್ದಾರೆ.
ಮದ್ರಾಸ್ ಹೈಕೋರ್ಟ್(ಸಾಂದರ್ಭಿಕ ಚಿತ್ರ)
ಮದ್ರಾಸ್ ಹೈಕೋರ್ಟ್(ಸಾಂದರ್ಭಿಕ ಚಿತ್ರ)

ಚೆನ್ನೈ: ಅತ್ಯಾಚಾರಿಯೊಂದಿಗೆ ಸಂಧಾನ ಮಾಡಿಕೊಳ್ಳುವಂತೆ ಮದ್ರಾಸ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸಂತ್ರಸ್ತೆ ಒಪ್ಪಿಕೊಂಡಿದ್ದು ಅತ್ಯಾಚಾರಿಯನ್ನು ಮದುವೆಯಾಗಲು ಸಮ್ಮತಿ ಸೂಚಿಸಿದ್ದಾರೆ.

ಸಂಧಾನ ಪ್ರಕ್ರಿಯೆಗೆ ಷರತ್ತು ವಿಧಿಸಿರುವ ಅತ್ಯಾಚಾರ ಸಂತ್ರಸ್ತೆ, ತನ್ನ ಮೇಲೆ ಅತ್ಯಾಚಾರವೆಸಗಿದವನ ಕುಟುಂಬ ತನ್ನ ಮಗಳ ಹೆಸರಿಗೆ ಅಸ್ತಿ ವರ್ಗಾವಣೆ ಮಾಡಿದರೆ ಮಾತ್ರ ವಿವಾಹವಾಗುವುದಾಗಿ ತಿಳಿಸಿದ್ದಾರೆ. 2008 ರಲ್ಲಿ ಮೋಹನ್ ಎಂಬಾತ ಅಪ್ರಾಪ್ತ ಯುವತಿಯ ಮೇಲೆ ಅತ್ಯಾಚಾರ ನಡೆಸಿದ್ದ. ಈ ಘಟನೆಯಿಂದಾಗಿ ಗರ್ಭವತಿಯಾಗಿದ್ದ ಯುವತಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು.

ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿ, ಸೆಷನ್ಸ್ ನ್ಯಾಯಾಲಯದಲ್ಲಿ ಅಪರಾಧಿ ಮೋಹನ್ ಗೆ  7 ವರ್ಷ ಜೈಲು ಶಿಕ್ಷೆ, 2 ಲಕ್ಷ ದಂಡ ವಿಧಿಸಿ ಶಿಕ್ಷೆ ಪ್ರಕಟಿಸಿತ್ತು. ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದ ಅಪರಾಧಿ ಮೋಹನ್, ತನಗೆ ನೀಡಲಾಗಿರುವ ಶಿಕ್ಷೆಯನ್ನು ಪ್ರಶ್ನಿಸಿದ್ದ. ಅಲ್ಲದೇ ಸಂಧಾನ ಪ್ರಕ್ರಿಯೆಗೆ ಸಿದ್ಧವಿರುವುದಾಗಿ ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ಸಂಧಾನ ಪ್ರಕ್ರಿಯೆ ಏರ್ಪಟ್ಟಿದ್ದು ಸಂತ್ರಸ್ತೆ ಮೋಹನ್ ನ್ನು ವಿವಾಹವಾಗುವುದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com