ಗುಂಡು ಪಾರ್ಟಿ ಮಾಡುವವರು ಕೊಂಚ ಇತ್ತ ಗಮನಿಸಿ!

ವಾರಾಂತ್ಯದಲ್ಲಿ ಅಥವಾ ದಿನವೂ ಗುಂಡು ಪಾರ್ಟಿ ಮಾಡುವವರು ಕೊಂಚ ಇತ್ತ ಗಮನಿಸಿ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ವಾರಾಂತ್ಯದಲ್ಲಿ ಅಥವಾ ದಿನವೂ ಗುಂಡು ಪಾರ್ಟಿ ಮಾಡುವವರು ಕೊಂಚ ಇತ್ತ ಗಮನಿಸಿ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್‍ಎಐ) ಬಿಯರ್, ವಿಸ್ಕಿ ಮತ್ತು ಇತರ ಮದ್ಯಗಳ ಮೇಲೆ ಪ್ರಾಧಿಕಾರ ಪರಿವೀಕ್ಷಣೆಯ ಕಣ್ಣು ಹರಿಸಿದೆ.
ಈಗಾಗಲೇ ನೆಸ್ಲೆ ಇಂಡಿಯಾದ ಮ್ಯಾಗಿ ನೂಡಲ್ಸ್ ಮತ್ತು ಇತರ ಜನಪ್ರಿಯ ಬ್ರಾಂಡ್ ಗಳ ನೂಡಲ್ಸ್‍ಗಳು ಮತ್ತು ಇತರ ಉತ್ಪನ್ನಗಳಲ್ಲಿ ಹಾನಿಕಾರಕ ಅಂಶಗಳಿವೆ ಎಂದು ಅವುಗಳನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ಸೂಚಿಸಿತ್ತು.

ಇದೀಗ ಪ್ರಾಧಿಕಾರ ಬಿಯರ್, ವಿಸ್ಕಿ ಮತ್ತು ಇತರ ಮದ್ಯ (ಆಲ್ಕೋಹಾಲಿಕ್ ಬೇವರೇಜಸ್)ಗಳು ಗುನ್ನು ಪಾಲಿಸಬೇಕು. ಈ ನಿಟ್ಟಿನಲ್ಲಿ ಎರಡು ತಿಂಗಳಲ್ಲಿ ಸೂಕ್ತ ಮಾನದಂಡವನ್ನು ರೂಪಿಸಲು ಮುಂದಾಗಿದೆ. ಏಕೆಂದರೆ ಇಂಥ ಪಾನೀಯಗಳಲ್ಲಿಯೂ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡುವ ಅಂಶಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಾಧಿಕಾರ ಇಂಥ ಕ್ರಮಕ್ಕೆ ಮುಂದಾಗಿದೆ. ಹೀಗಾಗಿ, ಕಿಕ್ ಏರಿಸುವ ಪಾನಿಯಗಳ ಮೂಲ ಗುಣಕ್ಕೆ ಕುತ್ತು ಬರಬಹುದೇ ಎಂಬ ಆತಂಕ ಗುಂಡು ಪ್ರಿಯರದ್ದು.
ಮೇ 29ರಂದು ಸಾರ್ವಜನಿಕರಿಂದ ಈ ಬಗ್ಗೆ ಸಲಹೆಗಳನ್ನು ಪ್ರಾ„ಕಾರ ಆಹ್ವಾನಿಸಿದೆ. ಆಗಸ್ಟ್ 1ರ ವರೆಗೆ ಪ್ರಾಧಿಕಾರಕ್ಕೆ ಮದ್ಯದ ಗುಣಮಟ್ಟ ಹೇಗೆ ಇರಬೇಕು ಎಂಬ ಬಗ್ಗೆ ಸಲಹೆ ನೀಡಲು ಅವಕಾಶ ಉಂಟು.
ನಿಗಾ ಯಾವುದಕ್ಕೆ?: ವಿಸ್ಕಿ, ವೋಡ್ಕಾ, ಜಿನ್, ಬಿಯರ್ ಮತ್ತು ಬ್ರೀಜರ್‍ಗಳ ಗುಣಮಟ್ಟದ ಮೇಲೆ ಪ್ರಾಧಿಕಾರ ಕಣ್ಣಿರಿಸಿದೆ.
ಯಾಕೆ ಇಂಥ ಕ್ರಮ?: ಈ ವರ್ಷದ ಆರಂಭದಲ್ಲಿ ಪ್ರಾಧಿಕಾರದ ಕೇಂದ್ರೀಯ ಸಲಹಾ ಸಮಿತಿ ಸಭೆಯಲ್ಲಿ ಮದ್ಯದ ವ್ಯಾಪ್ತಿಯಲ್ಲಿ ಬರುವ ಎಲ್ಲ ಪಾನೀಯಗಳನ್ನು ಪ್ರಾಧಿಕಾರ ನಿಯಮಗಳ ವ್ಯಾಪ್ತಿಗೆ ಬರಬೇಕೆಂದು ಚರ್ಚಿಸಲಾಗಿತ್ತು. ನಿಯಮಗಳು ಅಂತಿಮಗೊಂಡ ಬಳಿಕ ಸಂಬಂಧಿತ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಅಬಕಾರಿ ಇಲಾಖೆಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ನಿಯಮ ರೂಪಿಸಲು ಸಲಹೆ ಮಾಡಲಾಗಿತ್ತು.
ಎಚ್ಚರಿಕೆ ಸೂಚನೆ ಇದೆ: ತಂಬಾಕು ಉತ್ಪನ್ನ, ಪಾನ್ ಮಸಾಲಾ, ಸುಪಾರಿ ಮತ್ತು ಮದ್ಯಗಳ ಪ್ಯಾಕೆಟ್ ಮತ್ತು ಬಾಟಲ್‍ಗಳ ಮೇಲೆ ಎಚ್ಚರಿಕೆಯ ಸೂಚನೆ ಮುದ್ರಿತವಾಗಿರುವುದರಿಂದ ಅದನ್ನು `ಸುರಕ್ಷಿತವಲ್ಲದ ಆಹಾರ' ಎಂದು ವರ್ಗೀಕರಿಸದೇ ಇರಲು ಆಹಾರ ಪ್ರಾಧಿಕಾರ ನಿರ್ಧರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com