
ಟುನೇಶಿಯಾ: ಇಲ್ಲಿನ ಹೋಟೆಲೊಂದರ ಮೇಲೆ ಉಗ್ರರು ದಾಳಿ ಮಾಡಿದ್ದು, ದಾಳಿಯಲ್ಲಿ 27 ಮಂದಿ ಸಾವನ್ನಪ್ಪಿರುವುದಾಗಿ ಟುನೇಶಿಯಾದ ಅಧಿಕಾರಿಗಳು ಹೇಳಿದ್ದಾರೆ.
ಇಲ್ಲಿನ ಸೋಸ್ಸೇ ಎಂಬಲ್ಲಿರುವ ಹೋಟೆಲ್ ರಿಯು ಇಂಪೀರಿಯಲ್ ಮರ್‌ಹಬಾದ ಮೇಲೆ ಶುಕ್ರವಾರ ಉಗ್ರರ ದಾಳಿ ನಡೆದಿದೆ.
ಪ್ರಾಥಮಿಕ ವರದಿಗಳ ಪ್ರಕಾರ ದಾಳಿಯಲ್ಲಿ 27 ಮಂದಿ ಸಾವಿಗೀಡಾಗಿದ್ದಾರೆ. ಆದರೆ ನಿಖರವಾಗಿ ಎಷ್ಟು ಜನರು ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ಮಾಹಿತಿ ಸದ್ಯ ಲಭ್ಯವಾಗಿಲ್ಲ.
Advertisement