ಮಳೆನೀರಿನಿಂದ ಹಣ ಉಳಿತಾಯ: ನಾಸಾ ವಿಜ್ಞಾನಿಗಳು

ಮಳೆಗಾಲ ಆರಂಭವಾಗಿಮಳೆಗಾಲ ಆರಂಭವಾಗಿದೆ. ಈ ಸಮಯದಲ್ಲಿ ಮಳೆನೀರು ಸಂಗ್ರಹದ ಬಗ್ಗೆ ಕೇಳುತ್ತೇವೆ. ದೆ. ಈ ಸಮಯದಲ್ಲಿ ಮಳೆನೀರು ಸಂಗ್ರಹದ ಬಗ್ಗೆ ಕೇಳುತ್ತೇವೆ...
ಮಳೆ ನೀರು ಸಂಗ್ರಹದ ಸಾಂದರ್ಭಿಕ ಚಿತ್ರ
ಮಳೆ ನೀರು ಸಂಗ್ರಹದ ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಮಳೆಗಾಲ ಆರಂಭವಾಗಿದೆ. ಈ ಸಮಯದಲ್ಲಿ ಮಳೆನೀರು ಸಂಗ್ರಹದ ಬಗ್ಗೆ ಕೇಳುತ್ತೇವೆ. ನಗರ ಪ್ರದೇಶಗಳಲ್ಲಿ ಸ್ವಂತ ಮನೆ ಇರುವವರು ಮಳೆನೀರು ಕೊಯ್ಲು ವ್ಯವಸ್ಥೆ ಮಾಡಿಕೊಳ್ಳಿ, ಇದರಿಂದ ಅನೇಕ ಲಾಭಗಳಿವೆ ಅಂತ ಇತ್ತೀಚಿನ ವರ್ಷಗಳಲ್ಲಿ ತಜ್ಞರು ಹೇಳುತ್ತಾರೆ.

ಇದೀಗ ನಾಸಾ ವಿಜ್ಞಾನಿಗಳು ಉಪಗ್ರಹದ ಮೂಲಕ ನಡೆಸಿದ ಅಧ್ಯಯನದಿಂದ ಇದೇ ಅಂಶ ಹೊರಬಿದ್ದಿದೆ. ತರಕಾರಿ, ಗಾರ್ಡನಿಂಗ್ ಮಾಡುವುದಕ್ಕೆ ಮಳೆ ನೀರು ಬಳಸಿ ಹೆಚ್ಚ ನೀರು ಬಿಲ್ಲು ಪಾವತಿಸುವುದನ್ನು ತಪ್ಪಿಸಿಕೊಳ್ಳಿ, ತರಕಾರಿ, ಹಣ್ಣು ಹಂಪಲು, ಹೂವುಗಳ ಬೆಳೆ ಹೆಚ್ಚು ತೆಗೆದು ನಿಮ್ಮ ಆದಾಯ ಹೆಚ್ಚಿಸಿಕೊಳ್ಳಿ. ಭಾರತದಲ್ಲಿ ಮಳೆನೀರು ಸಂಗ್ರಹವನ್ನು ಆದಾಯದ ಮೂಲವಾಗಿಯೂ ನೋಡಬಹುದು ಎಂದು ನಾಸಾ ಸ್ಯಾಟಲೈಟ್ ದಾಖಲೆಯಲ್ಲಿ ತಿಳಿದುಬಂದಿದೆ.

ನಾಸಾ ವಿಜ್ಞಾನಿಗಳ ತಂಡ ಬೆಂಗಳೂರು ಸೇರಿದಂತೆ ದೆಹಲಿ, ಹೈದರಾಬಾದ್, ಕೋಲ್ಕತ್ತಾ, ಮುಂಬೈ ಮತ್ತು ಶ್ರೀನಗರಗಳಲ್ಲಿ ಮಳೆ ನೀರನ್ನು ಎಷ್ಟರ ಮಟ್ಟಿಗೆ, ಹೇಗೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ವಿಜ್ಞಾನಿಗಳ ತಂಡ ಅಧ್ಯಯನ ನಡೆಸಿದೆ.

ಮಳೆ ನೀರು ಕೊಯ್ಲು ಭಾರತ ದೇಶಕ್ಕೆ ಹೊಸ ಪರಿಕಲ್ಪನೆಯಲ್ಲ, ಆದರೆ ಅದನ್ನು ಅಳವಡಿಸಿಕೊಂಡಿರುವವರ ಸಂಖ್ಯೆ ಇನ್ನೂ ಕಡಿಮೆ ಎನ್ನುತ್ತಾರೆ  ವಿಜ್ಞಾನಿಗಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com