ಮೇಲ್ಜಾತಿ ಹುಡುಗಿಯೊಂದಿಗೆ ಮಾತಾಡಿದ್ದಕ್ಕೆ ದಲಿತ ಇಂಜಿನಿಯರ್ ಹತ್ಯೆ ?

ಮೇಲ್ಜಾತಿಗೆ ಸೇರಿದ ಹುಡುಗಿಯೊಂದಿಗೆ ಮಾತಾಡಿದ್ದಕ್ಕೆ ದಲಿತ ಕುಟುಂಬದ ಎಂಜಿನಿಯರ್ ನನ್ನು ಕೊಂದಿರುವ ಘಟನೆ ತಮಿಳುನಾಡಿನ ನಾಮಕ್ಕಲ್ ನಲ್ಲಿ ನಡೆದಿದೆ...
ಶವ ಪತ್ತೆಯಾಗಿದ್ದ ರೈಲ್ವೆ ಹಳಿ
ಶವ ಪತ್ತೆಯಾಗಿದ್ದ ರೈಲ್ವೆ ಹಳಿ
Updated on

ನಾಮಕ್ಕಲ್, ತಮಿಳುನಾಡು: ಮೇಲ್ಜಾತಿಗೆ ಸೇರಿದ ಹುಡುಗಿಯೊಂದಿಗೆ ಮಾತಾಡಿದ್ದಕ್ಕೆ ದಲಿತ ಕುಟುಂಬದ ಎಂಜಿನಿಯರ್ ನನ್ನು  ಕೊಂದಿರುವ ಘಟನೆ ತಮಿಳುನಾಡಿನ ನಾಮಕ್ಕಲ್ ನಲ್ಲಿ ನಡೆದಿದೆ.

ಬುಧವಾರ ಮಧ್ಯಾಹ್ನ ಗೋಕುಲ್ ರಾಜ್ ಎಂಬಾತನ ಶವ  ರೈಲ್ವೆ ಹಳಿಯ ಮೇಲೆ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿರುವ ಆತನ ಪೋಷಕರು ತಮ್ಮ ಮಗ ಮೇಲ್ಜಾತಿಗೆ ಸೇರಿದ ಸ್ನೇಹಿತೆಯೊಂದಿಗೆ ಮಾತನಾಡುತ್ತಿದ್ದ. ಆ ಹುಡುಗಿ ಕಡೆಯವರು ತಮ್ಮ ಮಗನನ್ನು ಅಪಹರಿಸಿ ಹತ್ಯೆ ಮಾಡಿ ರೇಲ್ವೆ ಹಳಿ ಮೇಲೆ ಶವ ಬಿಸಾಕಿದ್ದಾರೆಂದು ಆರೋಪಿಸಿದ್ದಾರೆ.

ಸ್ಥಳೀಯ ಮುಖಂಡ ಯುವರಾಜ್ ಎಂಬಾತನ ವಿರುದ್ಧ ಮೃತ ಎಂಜಿನೀಯರ್ ಪೋಷಕರು ದೂರು ದಾಖಲಿಸಿದ್ದಾರೆ. ಇನ್ನು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ನಾಮಕ್ಕಲ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

2013 ರಲ್ಲಿಯೂ ತಮಿಳುನಾಡಿನ ಧರ್ಮಪುರಿಯಲ್ಲಿ ಇಂತುಹುದ್ದೇ ಪ್ರಕರಣವೊಂದು ನಡೆದಿತ್ತು. ಕೊಂಗು ವೆಲ್ಲಾಲಾರ್ ಸಮುದಾಯಕ್ಕೆ ಸೇರಿದ ಯುವತಿಯನ್ನು ದಲಿತನಾದ ಇಳವರಸನ್ ಎಂಬಾತ ವಿವಾಹವಾಗಿದ್ದ. ಹುಡುಗಿ ಕುಟುಂಬದವರ ತೀವ್ರ ವಿರೋಧದ ನಡುವೆಯೂ ಈ ಇಬ್ಬರು ಮದುವೆಯಾಗಿದ್ದರು. ಇದಾದ ನಂತರ ಯುವತಿ ತಂದೆ ಆತ್ಮಹತ್ಯೆಗೆ ಶರಣಾಗಿದ್ದರು. ಇದರಿಂದ ಬೆದರಿದ ಯುವತಿ ಇಳವರಸನ್ ಜೊತೆ ಸಂಸಾರ ನಡೆಸದೆ ತಂದೆ ಮನೆಗೆ ವಾಪಸ್ ಆಗಿದ್ದಳು. ತದ ನಂತರ ಇಳವರಸನ್ ಕೂಡ ರೈಲ್ವೆ ಹಳಿಯ ಮೇಲೆ ಶವವಾಗಿ ಪತ್ತೆಯಾಗಿದ್ದ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com