206 ಕೋಟಿ ಚಿಕ್ಕಿ ಹಗರಣ: ಸೂಕ್ತ ಸಾಕ್ಷ್ಯಾಧಾರ ಸಿಕ್ಕರೆ ತನಿಖೆ- ಸಿಎಂ ಫಡ್ನವೀಸ್

ದಿವಂಗತ ಗೋಪಿನಾಥ್ ಮುಂಡೆ ಅವರ ಪುತ್ರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಸಚಿವೆ ಪಂಕಜ್ ಮುಂಡೆ ವಿರುದ್ಧ ಕೇಳಿ ಬಂದಿರುವ 206 ಕೋಟಿ ರೂ ಚಿಕ್ಕಿ ...
ಪಂಕಜ ಮುಂಡೆ
ಪಂಕಜ ಮುಂಡೆ

ಮುಂಬಯಿ: ದಿವಂಗತ ಗೋಪಿನಾಥ್ ಮುಂಡೆ ಅವರ ಪುತ್ರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವದ್ಧಿ ಸಚಿವೆ ಪಂಕಜ್ ಮುಂಡೆ ವಿರುದ್ಧ ಕೇಳಿ ಬಂದಿರುವ 206 ಕೋಟಿ ರೂ ಚಿಕ್ಕಿ ಹಗರಣ ಆರೋಪ ಸಂಬಂಧ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್, ವಿರೋಧ ಪಕ್ಷಗಳು ಸೂಕ್ತ ಸಾಕ್ಷ್ಯಾಧಾರ ಒದಗಿಸಿದರೆ ತನಿಖೆ ನಡೆಸಲು ಸಿದ್ಧ ಎಂದು ಹೇಳಿದ್ದಾರೆ.

ಪ್ರಕರಣ ಸಂಬಂಧ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ದೇವೇಂದ್ರ ಫಢ್ನವೀಸ್ ಭೇಟಿ ಮಾಡಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಫಡ್ನವೀಸ್ ಪಂರಜ ಮುಂಡೆ ನಿಯಮಾವಳಿ ಪ್ರಕಾರವೇ ಕೆಲಸ ಮಾಡಿದ್ದಾರೆ. ಯಾವುದೇ ತಪ್ಪು ಮಾಡಿಲ್ಲ ಜೊತೆಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿದ್ದರು.

ಪಂಕಜ್ ಮುಂಡೆ ಮಕ್ಕಳಿಗೆ ನೀಡುವ ಚಿಕ್ಕಿ ತಯಾರಿಸಲು ಕಾಂಗ್ರೆಸ್ ಮುಖಂಡರು ನಡೆಸುವ ಎನ್ ಜಿ ಒ ಗೆ ಟೆಂಡರ್ ನೀಡಿದ್ದರೂ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಸಚಿವೆ ಪಂಕಜ್ ಮುಂಡೆ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ದಾಖಲಿಸಿರುವ ಹಿನ್ನೆಲೆಯಲ್ಲಿ ತಮಗೆ ಬೆದರಿಕೆ ಕರೆ ಬರುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com