ಉತ್ತರಾಖಂಡ ಪ್ರವಾಹ: ಕರ್ನಾಟಕ, ಆಂಧ್ರದ 140 ಮಂದಿ ಸಂಕಷ್ಟದಲ್ಲಿ?

ಉತ್ತರ ಭಾರತ ಸೇರಿದಂತೆ ಇದೀಗ ದೇಶಾದ್ಯಂತ ಮುಂಗಾರು ವ್ಯಾಪಿಸಿದ್ದು, ಮತ್ತೆ ಉತ್ತರಾಖಂಡದಲ್ಲಿ ಪ್ರವಾಹ ಭೀತಿ ಪರಸ್ಥಿತಿ ಉಂಟಾಗಿದೆ...
ಉತ್ತರಾಖಂಡ್ ಪ್ರವಾಹ(ಸಾಂದರ್ಭಿಕ ಚಿತ್ರ)
ಉತ್ತರಾಖಂಡ್ ಪ್ರವಾಹ(ಸಾಂದರ್ಭಿಕ ಚಿತ್ರ)

ಡೆಹ್ರಾಡೂನ್: ಉತ್ತರ ಭಾರತ ಸೇರಿದಂತೆ ಇದೀಗ ದೇಶಾದ್ಯಂತ ಮುಂಗಾರು ವ್ಯಾಪಿಸಿದ್ದು, ಮತ್ತೆ ಉತ್ತರಾಖಂಡದಲ್ಲಿ ಪ್ರವಾಹ ಭೀತಿ ಪರಸ್ಥಿತಿ ಉಂಟಾಗಿದೆ.

ಕರ್ನಾಟಕ, ಆಂಧ್ರಪ್ರದೇಶದ 140 ಮಂದಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಇದೇ ವೇಳೆ ಉತ್ತರಾಖಂಡದಲ್ಲಿ ಪ್ರವಾಹದಿಂದ ಸಿಕ್ಕಿ ಹಾಕಿಕೊಂಡಿರುವ 900 ಮಂದಿಯನ್ನು ರಕ್ಷಣಾ ಪಡೆಗಳು ರಕ್ಷಿಸಿವೆ.

ಚಮೋಲಿ ಮತ್ತು ರುದ್ರಪ್ರಯಾಗ ಜಿಲ್ಲೆಯಲ್ಲಿ ರಸ್ತೆ, ಸೇತುವೆಗಳು ಮಳೆಗೆ ಕೊಚ್ಚಿ ಹೋಗಿವೆ. ಇದೇ ವೇಳೆ ಚಾರ್ ಧಾಮ್ ಯಾತ್ರೆಯನ್ನು ರದ್ದು ಮಾಡಲಾಗಿದೆ ಎಂಬ ವದಂತಿಯನ್ನು ಉತ್ತರಾಖಂಡ ಮುಖ್ಯಮಂತ್ರಿ ಹರೀಶ್ ರಾವತ್ ತಳ್ಳಿಹಾಕಿದ್ದಾರೆ. ಧಾರಾಕಾರ ಮಳೆ ಹಿನ್ನೆಲೆಯಲ್ಲಿ ತೀರ್ಥಯಾತ್ರಿಗಳ ಸಂಚಾರಕ್ಕೆ ನಿಯಂತ್ರಣ ಹೇರಲಾಗಿದೆ ಎಂದಿದ್ದಾರೆ.

ಚಮೋಲಿ ಜಿಲ್ಲಾಧಿಕಾರಿ ನೀಡಿದ ಮಾಹಿತಿ ಪ್ರಕಾರ ಸುಮಾರು 9 ಸಾವಿರ ಮಂದಿ ಪ್ರವಾಸಿಗರನ್ನು ಬದರಿನಾಥ ಮತ್ತು ಹೇಮಕುಂಡ ಸಾಹಿಬ್‍ನಿಂದ ರಕ್ಷಿಸಲಾಗಿದೆ. ಕೇದಾರನಾಥ, ಬದರೀನಾಥ ಮತ್ತು ಹೇಮಕುಂಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಶೀಘ್ರವೇ ಸಂಚಾರಕ್ಕೆ ಮುಕ್ತ ಗೊಳಿಸುವ ಪ್ರಯತ್ನ ನಡೆಸಲಾಗುತ್ತದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com