ಭಾರತೀಯರು ಮಳೆನೀರು ಬಳಸಿ ಹಣಗಳಿಸಿ: ನಾಸಾ

ಮಳೆ ನೀರನ್ನು ಸಮರ್ಥವಾಗಿ ಬಳಸಿಕೊಂಡರೆ ಭಾರತೀಯರು ಸಾಕಷ್ಟು ಹಣ ಉಳಿತಾಯ ಮಾಡಲು ಸಾಧ್ಯವಿದೆ ಎಂದು ನಾಸಾ ಅಭಿಪ್ರಾಯಪಟ್ಟಿದೆ...
ಮಳೆನೀರು
ಮಳೆನೀರು
Updated on

ವಾಷಿಂಗ್ಟನ್: ಮಳೆ ನೀರನ್ನು ಸಮರ್ಥವಾಗಿ ಬಳಸಿಕೊಂಡರೆ ಭಾರತೀಯರು ಸಾಕಷ್ಟು ಹಣ ಉಳಿತಾಯ ಮಾಡಲು ಸಾಧ್ಯವಿದೆ ಎಂದು ನಾಸಾ ಅಭಿಪ್ರಾಯಪಟ್ಟಿದೆ.

ನಾಸಾ ಉಪಗ್ರಹ ನೀಡಿದ ಅಂಕಿ ಅಂಶಗಳನ್ನು ಆಧರಿಸಿ ವಿಜ್ಞಾನಿಗಳು ಈ ಹೇಳಿಕೆ ನೀಡಿದ್ದಾರೆ. ಮಳೆ ನೀರನ್ನು ಸಂಗ್ರಹಿಸಿ ತರಕಾರಿ ಬೆಳೆಯಬಹುದು, ನೀರಿನ ಬಿಲ್ ಕಡಿಮೆ ಮಾಡಿಕೊಳ್ಳಬಹುದು ಹಾಗೂ ಇದನ್ನು ಇನ್ನೊಂದು ಆದಾಯದ ಮೂಲವನ್ನಾಗಿ ಮಾಡಿಕೊಳ್ಳಬಹುದು ಎಂಬುದು ವಿಜ್ಞಾನಿಗಳ ಅಭಿಮತ.

1997ರಿಂದ 2011ರ ನಡುವೆ ದೇಶದಲ್ಲಿ ಬಿದ್ದಿರುವ ಮಳೆಯ ಪ್ರಮಾಣ ಗಮನಿಸಿರುವ ವಿಜ್ಞಾನಿಗಳು 'ಇಲ್ಲಿ ಮಳೆ ನೀರು ಸಮರ್ಥ ಬಳಕೆಯಾಗುತ್ತಿಲ್ಲ, ಮಳೆನೀರು ಕೊಯ್ಲು ಈಗಾಗಲೇ ವ್ಯಾಪಕವಾಗಿದ್ದರೂ, ಕೇವಲ ಶೇ. 20ರಷ್ಟು ಮಾತ್ರ ಮಳೆನೀರಿನ ಉಪಯೋಗ ಆಗುತ್ತಿದೆ. 'ಮಳೆನೀರನ್ನು ಪೂರ್ಣಪ್ರಮಾಣದಲ್ಲಿ ಬಳಸಿದ್ದೇ ಆದಲ್ಲಿ ಒಂದು ವರ್ಷದ ನಂತರ ಪ್ರತಿವ್ಯಕ್ತಿ ಸಾವಿರಗಳಲ್ಲಿ ಲಾಭ ಮತ್ತು ಉಳಿತಾಯ ನೋಡಬಹುದು ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com