ಬಾಬಿಗೆ ಸುಪ್ರೀಂ ಕೋರ್ಟ್ ಬೇಡ್ವಂತೆ

ಅಮೆರಿಕದ ಅಧ್ಯಕ್ಷೀಯ ಚುನಾವಣೆಗಾಗಿ ರಿಪಬ್ಲಿಕನ್ ಅಭ್ಯರ್ಥಿ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಬಾಬ್ಬಿ ಜಿಂದಾಲ್ ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ...
ಬಾಬಿ ಜಿಂದಾಲ್
ಬಾಬಿ ಜಿಂದಾಲ್

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಗಾಗಿ ರಿಪಬ್ಲಿಕನ್ ಅಭ್ಯರ್ಥಿ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಬಾಬಿ ಜಿಂದಾಲ್ ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮನಸ್ಸಿಗೆ ಬಂದಂತೆ ವರ್ತಿಸುವುದಾದರೆ ಅಮೆರಿಕಕ್ಕೆ ಸುಪ್ರೀಂ ಕೋರ್ಟ್ ಏಕೆ ಬೇಕು ಎಂದು ಪ್ರಶ್ನಿಸಿದ್ದಾರೆ. ಟೈಮ್ ನಿಯತಕಾಲಿಕೆಗೆ ಬರೆದ ಲೇಖನದಲ್ಲಿ ಜಿಂದಾಲ್ ಈ ಅಸಮಾಧಾನ ಹೊರಹಾಕಿದ್ದಾರೆ. ಸುಪ್ರೀಂ ಗುರುವಾರ ಒಬಾಮಕೇರ್ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದೆ. ಸದ್ಯದಲ್ಲೇ ಅಮೆರಿಕದ ಜನ ಅಭಿಪ್ರಾಯ ವ್ಯಕ್ತಪಡಿಸಲಿದ್ದಾರೆ ಎಂದು ಜಿಂದಾಲ್ ಹೇಳಿದ್ದಾರೆ.

ಸುಪ್ರೀಂ ಸಂಪೂರ್ಣ ನಿಯಂತ್ರಣ ಕಳೆದುಕೊಂಡಿದೆ. ತನ್ನದೇ ಕಾನೂನು ರೂಪಿಸುತ್ತಿದೆ. ನ್ಯಾಯಾಂಗದ ಭಾಗವಾಗುವುದಕ್ಕಿಂತ ಸುಪ್ರೀಂಕೋರ್ಟ್ ಸಾರ್ವಜನಿಕ ಅಭಿಪ್ರಾಯ ರೂಪಿಸುವ ಸಂಸ್ಥೆಯಾಗುತ್ತಿದೆ. ನಾವು ಒಂದಷ್ಟು ಹಣ ಉಳಿಸಬೇಕಾದರೆ ಸುಪ್ರೀಂನಿಂದ ಮುಕ್ತಿ ಪಡೆಯಬೇಕು ಎಂದು ಜಿಂದಾಲ್ ಅಭಿಪ್ರಾಯಪಟ್ಟಿದ್ದಾರೆ.

ಈ ನಡುವೆ, ಸಲಿಂಗಿ ಮದುವೆ ವಿಚಾರಕ್ಕೆ ಸಂಬಂಧಿಸಿದ ತೀರ್ಪಿನ ಕುರಿತೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗಂಡು-ಹೆಣ್ಣಿನ ನಡುವೆ ಮದುವೆ ಎನ್ನುವ ಬಾಂಧವ್ಯ ಸ್ಥಾಪಿಸಿದ್ದು ದೇವರು. ಇದನ್ನು ಭೂಮಿ ಮೇಲಿರುವ ಯಾವುದೇ ಕೋರ್ಟ್ ಬದಲಾಯಿಸಲಸಾಧ್ಯ. ಸಲಿಂಗಿ ಮದುವೆಗಳನ್ನು ರಕ್ಷಿಸಲು ಹೊರಟರೆ ಇದಕ್ಕೆ ವಿರೋಧ ವ್ಯಕ್ತಪಡಿಸುವವರ ನಂಬಿಕೆ ಕುರಿತು ತಾರತಮ್ಯ ಮಾಡಿದಂತಾಗುತ್ತದೆ ಎಂದಿದ್ದಾರೆ.

ಟ್ವಿಟರ್‍ನಲ್ಲಿ ಜೋಕ್ ಆದ ಜಿಂದಾಲ್!
ತಮ್ಮನ್ನು ಭಾರತೀಯ ಮೂಲದವರೆಂದು ಕರೆಸಿಕೊಳ್ಳಲು ಇಷ್ಟಪಡದ ಜಿಂದಾಲ್ ಟ್ವೀಟಿಗರ ಪಾಲಿಗೆ ಜೋಕ್ ಆಗಿದ್ದಾರೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆಸ್ಪರ್ಧಿಸುತ್ತಿರುವ ಜಿಂದಾಲ್‍ರನ್ನು ಭಾರತೀಯ ಮೂಲದವರು ಹಾಗೂ ಭಾರತೀಯರು ಟ್ವಿಟರ್‍ನಲ್ಲಿ ಭಾರೀ ವ್ಯಂಗ್ಯ ಮಾಡಿದ್ದಾರೆ. ಇದೇ ಕಾರಣಕ್ಕೆ #BobbyJindalIsSoWhite ಶುಕ್ರವಾರವಿಡೀ ಟ್ರೆಂಡ್ ಆಗಿತ್ತು. ``ಬಾಬಿ ಜಿಂದಾಲ್ ಎಷ್ಟು ಬಿಳಿಯೆಂದರೆ ಅವರನ್ನು ಟೀಚರ್ ಕರಿಬೋರ್ಡ್‍ನಲ್ಲಿ ಬರೆಯುವ ಚಾಕ್‍ಪೀಸ್ ಆಗಿ ಬಳಸುತ್ತಿದ್ದರು.'' ``ಬಿಳಿ ಗೋಡೆ ಮುಂದೆ ಜಿಂದಾಲ್ ನಿಂತರೆ ಅವರು ಕಾಣುವುದೇ ಇಲ್ಲ.'' ಹೀಗೆ ಹಲವು ಜೋಕ್‍ಗಳು ಬಾಬಿ ಜಿಂದಾಲ್ ವಿಚಾರವಾಗಿ ಟ್ವಿಟರ್‍ನಲ್ಲಿ ಹರಿದಾಡುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com