ಕುವೈತ್ ಮಸೀದಿ ದಾಳಿಕೋರ ಸೌದಿ ಪ್ರಜೆ

ಕುವೈತ್‌ನ ಶಿಯಾ ಮಸೀದಿಯಲ್ಲಿ ಆತ್ಮಾಹುತಿ ದಾಳಿ ನಡೆಸಿದವ ಸೌದಿ ಪ್ರಜೆ ಎಂದು ಆಂತರಿಕ ಸಚಿವಾಲಯ ಭಾನುವಾರ ಸ್ಪಷ್ಟಪಡಿಸಿದೆ...
ಮಸೀದಿಯಲ್ಲಿ ನಡೆದ ದಾಳಿಯಲ್ಲಿ ಮೃತರಾದವರ ಶವಸಂಸ್ಕಾರದ ವೇಳೆ ರೋದಿಸುತ್ತಿರುವ ಸಂಬಂಧಿಕರು (ಕೃಪೆ: ರಾಯಿಟರ್ಸ್)
ಮಸೀದಿಯಲ್ಲಿ ನಡೆದ ದಾಳಿಯಲ್ಲಿ ಮೃತರಾದವರ ಶವಸಂಸ್ಕಾರದ ವೇಳೆ ರೋದಿಸುತ್ತಿರುವ ಸಂಬಂಧಿಕರು (ಕೃಪೆ: ರಾಯಿಟರ್ಸ್)

ದುಬೈ: ಕುವೈತ್‌ನ ಶಿಯಾ ಮಸೀದಿಯಲ್ಲಿ ಆತ್ಮಾಹುತಿ ದಾಳಿ ನಡೆಸಿದವ ಸೌದಿ ಪ್ರಜೆ  ಎಂದು ಆಂತರಿಕ ಸಚಿವಾಲಯ ಭಾನುವಾರ ಸ್ಪಷ್ಟಪಡಿಸಿದೆ.

ಕಳೆದ ಶುಕ್ರವಾರ ಅಲ್ ಇಮಾಮ್ ಅಲ್ ಸಾದೇಖ್ ಮಸೀದಿ ಮೇಲೆ ನಡೆದ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದು , 227 ಮಂದಿ ಗಾಯಗೊಂಡಿದ್ದರು ಎಂದು ಸಚಿವಾಲಯ ಹೇಳಿದೆ.

ದಾಳಿಕೋರನನ್ನು 'ಫಾದ್ ಸುಸೈಮನೆ ಅಬ್ದುಲ್ಮೊಹ್ಸೆನ್ ಅಲ ಖುಬಾಆ ಎಂದು ಗುರುತಿಸಲಾಗಿದೆ,' ಎಂದು ಸಚಿವಾಲಯದ ಹೇಳಿಕೆಯನ್ನು ಮಾಧ್ಯಮವೊಂದು ಪ್ರಕಟಿಸಿದೆ.

ಕುವೈತ್ ವಿಮಾನ ನಿಲ್ದಾಣದ ಮೂಲಕ ಶುಕ್ರವಾರ ಮುಂಜಾನೆಯೇ ಖುಬಾಅ ದೇಶವನ್ನು ಪ್ರವೇಶಿಸಿದ್ದಾನೆ. ಖುಬಾಅ ತಂಗಿದ್ದ ಮನೆಯ ಮಾಲೀಕ ಹಾಗೂ ಆತನಿಗೆ ಬಾಂಬ್ ಸಾಗಿಸಲು ಸಹಕರಿಸಿದ ವಾಹನ ಚಾಲಕನನ್ನು ಬಂಧಿಸಲಾಗಿದೆ. ಕುವೈತ್‌ ಪ್ರಜೆಯಾದ ದಾಳಿಕೋರನನ್ನು ಆಂತರಿಕ ಸಚಿವಾಲಯ ಉಗ್ರ ಮತ್ತು ವಕ್ರ ವಿಚಾರಗಳನ್ನು ಹೊಂದಿರುವವ ಎಂದಿದೆ.

ಬಂಧಿತ ವಾಹನದ ಚಾಲಕ ಅಬ್ದುಲ ರಹಮಾನ್ ಸಬಹ ಈಡನ್ ಸೌದ್‌ನನ್ನು 1989ರಿಂದ ಅಕ್ರಮವಾಗಿ ವಾಸಿಸುತ್ತಿರುವವನು ಹಾಗೂ ವಾಹನದ ಮಾಲೀಕನನ್ನು 'ನೆಲೆ ಇಲ್ಲದ' ನಿವಾಸಿ ಎಂದು ಗುರುತಿಸಿಕೊಳ್ಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com