
ನವದೆಹಲಿ: ದೆಹಲಿ ಭ್ರಷ್ಟಾಚಾರ ನಿಗ್ರಹ ದಳ ಮುಖ್ಯಸ್ಥರ ಎಂ.ಕೆ ಮೀನಾ ನೇಮಕ ವಿವಾದ ಸಂಬಂಧ ದೆಹಲಿ ಹೈಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದ ಆಮ್ ಆದ್ಮಿ ಪಕ್ಷಕ್ಕೆ ಭಾರಿ ಹಿನ್ನೆಡೆಯಾಗಿದೆ. ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಎಸಿಬಿಗೆ ಎಂ.ಕೆ ಮೀನಾ ಅವರನ್ನು ನೇಮಕ ಮಾಡಿದ್ದು ಸರಿಯಿಲ್ಲ ಮೀನಾ ಕೆಲಸ ಮಾಡದಂತೆ ತಡೆ ಹಿಡಿಯಬೇಕು ಹಾಗೂ ಅವರು ಎಸಿಬಿ ಕಚೇರಿಗೆ ಪ್ರವೇಶಿಸಬಾರದು ಎಂದು ಆಪ್ ಹೈಕೋರ್ಟ್ ನಲ್ಲಿ ಅಪೀಲು ಸಲ್ಲಿಸಿತ್ತು.
ವಿಚಾರಣೆ ನಡೆಸಿದ ದೆಹಲಿ ಹೈ ಕೋರ್ಟ್ ಆಮ್ ಆದ್ಮಿ ಪಕ್ಷ ಮೀನಾ ಅವರನ್ನು ಎಸಿಬಿಯಲ್ಲಿ ಕೆಲಸ ಮಾಡದಂತೆ ತಡೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿತ್ತು. ಆಪ್ ಮನವಿಯನ್ನು ಹೈಕೋರ್ಟ್ ನಿರಾಕರಿಸಿದೆ.ಕಾನೂನು ಪ್ರಕಾರ ಕರ್ತವ್ಯ ನಿರ್ವಹಿಸುವಂತೆ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ವಿಪಿ ವ್ಯಾಸ್ ತಿಳಿಸಿದ್ದಾರೆ.
ಈ ಸಂಬಂಧ ಕೇಂದ್ರಕ್ಕೂ ಹೈ ಕೋರ್ಟ್ ನೋಟಿಸ್ ನೀಡಿದೆ. 2 ವಾರಗಳಲ್ಲಿ ಉತ್ತಿರಸುವಂತೆ ಸೂಚಿಸಿರುವ ಹೈ ಕೋರ್ಟ್ ದೆಹಲಿ ಲೆಫ್ಟಿನೆಂಟ್ ಗವರ್ನರ್ ಗೆ ಅಧಿಕಾರಿಗಳ ನೇಮಕ ಮಾಡುವ ಅಧಿಕಾರದ ಬಗ್ಗೆ ವಿವರಣೆ ನೀಡುವಂತೆ ನಿರ್ದೇಶನ ನೀಡಿದೆ ಆಗಸ್ಟ್ 11 ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಭ್ರಷ್ಟಾಚಾರ ನಿಗ್ರಹ ದಳ ಮುಖ್ಯಸ್ಥರಾಗಿ ನೇಮಕ ಗೊಂಡಿರುವ ಎಂ.ಕೆ ಮೀನಾ ಅವರು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಹಾಗೂ ಇಲಾಖೆಯ ಅಧಿಕಾರಿಗಳಿಗೆ ಬೆದರಿಕೆ ಹಾಕಿ ಒತ್ತಡ ಹೇರುತ್ತಿದ್ದಾರೆ ಎಂದು ಆಪ್ ಆರೋಪ ಮಾಡಿತ್ತು.
Advertisement