ಮದ್ಯ ಸೇವನೆಯು ಮೂಲಭೂತ ಹಕ್ಕಂತೆ!

``ಮದ್ಯಸೇವನೆಯು ವ್ಯಕ್ತಿಗಳ ಮೂಲ ಭೂತ ಹಕ್ಕು. ಅಲ್ಲದೆ ಅದು ಘನತೆಯ ಸೂಚಕವೂ ಹೌದು''. ಹೀಗೆಂದು ಹೇಳಿ ಮಧ್ಯಪ್ರದೇಶ ಗೃಹ ಸಚಿವ ಬಾಬುಲಾಲ್ ಗೌರ್ ಹೊಸ ವಿವಾದ ಸೃಷ್ಟಿಸಿದ್ದಾರೆ.
ಮಧ್ಯ ಪ್ರದೇಶ ಗೃಹ ಸಚಿವ ಬಾಬುಲಾಲ್ ಗೌರ್
ಮಧ್ಯ ಪ್ರದೇಶ ಗೃಹ ಸಚಿವ ಬಾಬುಲಾಲ್ ಗೌರ್

ಭೋಪಾಲ: ``ಮದ್ಯಸೇವನೆಯು ವ್ಯಕ್ತಿಗಳ ಮೂಲ ಭೂತ ಹಕ್ಕು. ಅಲ್ಲದೆ ಅದು ಘನತೆಯ ಸೂಚಕವೂ ಹೌದು''. ಹೀಗೆಂದು ಹೇಳಿ ಮಧ್ಯಪ್ರದೇಶ ಗೃಹ ಸಚಿವ ಬಾಬುಲಾಲ್ ಗೌರ್ ಹೊಸ ವಿವಾದ ಸೃಷ್ಟಿಸಿದ್ದಾರೆ.

ಭೋಪಾಲ್‍ನಲ್ಲಿ ಮದ್ಯ ಮಾರಾಟವನ್ನು ರಾತ್ರಿ10ರಿಂದ 11.30ರವರೆಗೆ ವಿಸ್ತರಿಸಿದ್ದಕ್ಕೆ ಅವರು ಸೋಮವಾರ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ``ಮದ್ಯ ಸೇವಿಸುವುದರಿಂದ ಅಪರಾಧ ಪ್ರಕರಣಗಳ ಸಂಖ್ಯೆ ಏನೂ ಹೆಚ್ಚುವುದಿಲ್ಲ. ಆದರೆ ಅದನ್ನು ಸೇವಿಸಿದ ಮೇಲೆ ಜನ ತಮ್ಮ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಾರೆ. ಹಾಗಾಗಿ ಅಪರಾಧಗಳು ಸಂಭವಿಸುತ್ತವೆ. ಯಾರು ಹದ್ದು ಮೀರದೆ ಕುಡಿಯುತ್ತಾರೋ ಅವರಿಂದ ಅಪರಾಧಗಳಾಗುವುದಿಲ್ಲ. ಈಗಿನ ದಿನ ಗಳಲ್ಲಿ ಮದ್ಯಸೇವನೆಯು ಸಾಮಾಜಿಕ ಸ್ಥಾನಮಾನದ ಸಂಕೇತ'' ಎಂದೂ ಅವರು ಹೇಳಿದ್ದಾರೆ. ಗೌರ್ ಹೇಳಿಕೆಗೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಈ ಹಿಂದೆ ಗೌರ್, `'ಚೆನ್ನೈನಲ್ಲಿ ಮಹಿಳೆಯರು ದೇಹಪೂರ್ತಿ ಮುಚ್ಚುವ ಬಟ್ಟೆ ಧರಿಸುವ ಕಾರಣ ಇಲ್ಲಿ ಅತ್ಯಾಚಾರ ನಡೆಯುವುದಿಲ್ಲ'' ಎಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com