ಸಿರಿಯಾ: ಇಸ್ಲಾಮಿಕ್ ಸ್ಟೇಟ್ ಉಗ್ರರು ಸಿರಿಯಾದಲ್ಲಿ ಇಬ್ಬರು ಮಹಿಳೆಯರ ಶಿರಚ್ಛೇದನ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಮಹಿಳೆಯರ ಶಿರಚ್ಛೇದನ ಮಾಡಲಾಗಿದೆ.
ವಾಮಾಚಾರ ನಡೆಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಐಸೀಸ್ ಉಗ್ರರು ಇಬ್ಬರು ಮಹಿಳೆಯರೊಂದಿಗೆ ಆವರ ಪತಿಯರ ಶಿರಚ್ಛೆದನ ಮಾಡಲಾಗಿದೆ ಎಂದು ಸಿರಿಯಾದ ಮಾನವ ಹಕ್ಕುಗಳ ವೀಕ್ಷಣಾಲಯ ಸ್ಪಷ್ಟಪಡಿಸಿದೆ. ಇಸ್ಲಾಮಿಕ್ ಸ್ಟೇಟ್ ಉಗ್ರರು ಶಿರಚ್ಛೇದನ ಮಾಡಿ ಮಹಿಳೆಯರನ್ನು ಹತ್ಯೆ ಮಾಡಿರುವ ಪ್ರಕರಣ ಇದೇ ಮೊದಲಾಗಿದ್ದು ಹಿಂದೆಂದೂ ಈ ರೀತಿಯಲ್ಲಿ ಉಗ್ರರು ಮಹಿಳೆಯರನ್ನು ಹತ್ಯೆ ಮಾಡಿರಲಿಲ್ಲ ಎಂದು ವೀಕ್ಷಣಾಲಯದ ಮುಖ್ಯಸ್ಥ ರಮಿ ಅಬ್ದೆಲ್ ರಹಮಾನ್ ಹೇಳಿದ್ದಾರೆ.
ಭಯಂಕರ ಮರಣದಂಡನೆ ಶಿಕ್ಷೆ ನೀಡುವುದಕ್ಕೆ ಐಸೀಸ್ ಉಗ್ರರು ಕುಖ್ಯಾತರಾಗಿದ್ದು ವ್ಯಭಿಚಾರದ ಆರೋಪದ ಹಿನ್ನೆಲೆಯಲ್ಲಿ ಮಹಿಳೆಯರನ್ನು ಕಲ್ಲಿನಿಂದ ಹೊಡೆದು ಸಾಯಿಸಿರುವ ಸಾಕಷ್ಟು ಉದಾಹರಣೆಗಳಿವೆ.
ಈ ವರ್ಷ ಸಿರಿಯಾದಲ್ಲಿ ಈ ವರೆಗೂ 3000 ಕ್ಕೂ ಹೆಚ್ಚು ಜನರನ್ನು ಐಸೀಸ್ ಉಗ್ರರು ಹತ್ಯೆ ಮಾಡಿದ್ದು ಈ ಪೈಕಿ 1 ,800 ಮಹಿಳೆಯರು ಸೇರಿದಂತೆ 74 ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ.
Advertisement