
ಗೌಹಾಟಿ: ಅಸ್ಸಾಮಿನ ಕಾಸಿರಂಗ ರಾಷ್ಟ್ರೀಯ ಅಭಯಾರಣ್ಯದಲ್ಲಿ, ಬೇಟೆಗಾರರು ಮತ್ತೊಂದು ವಿಶ್ವವಿಖ್ಯಾತ ಒಂಟಿ ಕೊಂಬಿನ ರೈನೋ ಕೊಂದಿದ್ದಾರೆ ಎಂದು ಸೋಮವಾರ ಅಧಿಕಾರಿಗಳು ತಿಳಿಸಿದ್ದಾರೆ. ಆದುದರಿಂದ ಒಂಟಿ ಕೊಂಬಿನ ರೈನೊಗಳ ಸಂಖ್ಯೆ ೧೨ ಕ್ಕೆ ಕುಸಿದಿದೆ.
ಅಭ್ಯಾರಣ್ಯವನ್ನು ಗಸ್ತು ಹೊಡೆಯಬೇಕಾದರೆ ಕಾವಲು ಪಡೆ ಸಿಬ್ಬಂದಿ ರೈನೋದ ಕಳೇಬರ ಬರ್ಹಾಪಹಾರ್ ಕಾಡಿನ ಶ್ರೇಣಿಯಲ್ಲಿ ಸೋಮವಾರ ಕಂಡಿದ್ದಾರೆ.
"ಗುಂಡಿನಿಂದ ಹೊಡೆದು ಹತ್ಯೆ ಮಾಡಲಾಗಿದೆ ಹಾಗೂ ಕೊಂಬು ಕಾಣೆಯಾಗಿದೆ ಆದುದರಿಂದ ಇದು ಕಳ್ಳಸಾಗಾಣಿಕೆಗೆ ಬೇಟೆಗಾರರು ಮಾಡಿರುವ ಕೆಲಸ" ಎಂದು ಅಭಯಾರಣ್ಯದ ನಿರ್ದೇಶಕ ಎಂ ಕೆ ಯಾದವ್ ತಿಳಿಸಿದ್ದಾರೆ.
೮೫೮ ಚದರ ಕಿಮೀ ಪ್ರದೇಶದಲ್ಲಿರುವ ಕಾಸಿರಂಗ ರಾಷ್ಟ್ರೀಯ ಅಭಯಾರಣ್ಯ ಅಳಿವಿನಂಚಿನಲ್ಲಿರುವ ವಿಶ್ವದ ೭೦% ಒಂದು ಕೊಂಬಿನ ರೈನೋಗಳಿಗೆ ಮನೆ. ಇದನ್ನು ವಿಶ್ವಸಂಸ್ಥೆಯ ಪಾರಂಪರಿಕ ತಾಣ ಎಂದು ಕೂಡ ಗುರುತಿಸಲಾಗಿದೆ.
Advertisement