ಹುಟ್ಟಿದವನು ಸಾಯಲೇಬೇಕು: ಮ.ಪ್ರ.ಸಚಿವ ಗೌರ್ ಹೇಳಿಕೆ

ಮಧ್ಯಪ್ರದೇಶ ಸರ್ಕಾರದ ಪಾಲಿಗೆ ಕಂಟಕವಾಗಿ ಪರಿಣಮಿಸಿರುವ ವ್ಯಾಪಂ ಹಗರಣದ ಆರೋಪಿಗಳ ಸಾವಿನಲ್ಲಿ ಅನುಮಾನ ಪಡುವಂಥದ್ದೇನಿಲ್ಲ. ಅದೆಲ್ಲ ಸಹಜ ಸಾವು. ಹುಟ್ಟಿದವನು ಸಾಯಲೇಬೇಕು..
ಮಧ್ಯ ಪ್ರದೇಶ ಗೃಹ ಸಚಿವ ಬಾಬುಲಾಲ್ ಗೌರ್
ಮಧ್ಯ ಪ್ರದೇಶ ಗೃಹ ಸಚಿವ ಬಾಬುಲಾಲ್ ಗೌರ್

ನವದೆಹಲಿ: ಮಧ್ಯಪ್ರದೇಶ ಸರ್ಕಾರದ ಪಾಲಿಗೆ ಕಂಟಕವಾಗಿ ಪರಿಣಮಿಸಿರುವ ವ್ಯಾಪಂ ಹಗರಣದ ಆರೋಪಿಗಳ ಸಾವಿನಲ್ಲಿ ಅನುಮಾನ ಪಡುವಂಥದ್ದೇನಿಲ್ಲ. ಅದೆಲ್ಲ ಸಹಜ ಸಾವು. ಹುಟ್ಟಿದವನು ಸಾಯಲೇಬೇಕು. ಕಳೆದೊಂದು ವಾರದಲ್ಲಿ ಮೃತಪಟ್ಟ ಇಬ್ಬರು ಆರೋಪಿಗಳ ಸಾವಿನ ಕುರಿತು ತನಿಖೆ ನಡೆಸುವ ಅಗತ್ಯವಿಲ್ಲ ಎಂದು ಮಧ್ಯಪ್ರದೇಶ ಗೃಹ ಸಚಿವ
ಬಾಬುಲಾಲ್ ಗೌರ್ ಹೇಳಿದ್ದಾರೆ.

ದೇಶದ ಅತಿದೊಡ್ಡ ನೇಮಕ ಹಗರಣವಾಗಿ ಪರಿಗಣಿತರುವ ವ್ಯಾಪಂ ಹಗರಣಕ್ಕೆ ಸಂಬಂಧಿಸಿ ಸರ್ಕಾರ ಸಿಬಿಐ ತನಿಖೆ ಆಗ್ರಹಿಸಬೇಕು ಎಂದು ಒತ್ತಾಯಿಸಿತ್ತು. ಆದರೆ, ಈ ಒತ್ತಾಯವನ್ನೂ ಸಚಿವರು ತಿರಸ್ಕರಿಸಿದ್ದಾರೆ. ಈಗಾಗಲೇ ನಡೆಯುತ್ತಿರುವ ತನಿಖೆ ಸರಿಯಾದ ದಾರಿಯಲ್ಲಿ  ಸಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಪ್ರಕರಣವನ್ನು ಮತ್ತೆ ಸಿಬಿಐಗೆ ವಹಿಸುವ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

2 ದಿನಗಳ ಹಿಂದಷ್ಟೇ ಹಗರಣದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‍ಐಟಿ)ಯು ಮಧ್ಯಪ್ರದೇಶ ಹೈಕೋರ್ಟ್ ಗೆ ನೀಡಿದ ವರದಿಯಲ್ಲಿ ಆರೋಪ ಎದುರಿಸುತ್ತಿದ್ದವರಲ್ಲಿ ಈವರೆಗೆ 23 ಅಸುನೀಗಿದ್ದಾರೆ ಎಂದು ವರದಿ ನೀಡಿತ್ತು. ಇದಾದ ಬೆನ್ನಲ್ಲೇ ಮತ್ತಿಬ್ಬರು ಆರೋಪಿಗಳು ಮೃತಪಟ್ಟಿರುವುದು ಸಾಕಷ್ಟು ಅನುಮಾನ ಮೂಡಿಸಿದೆ. ಈ ರೀತಿ ಸತ್ತವರ ಸಂಖ್ಯೆ 25 ಅಲ್ಲ 40 ದಾಟಿದೆ ಎನ್ನುವ ವಾದಗಳೂ ಇವೆ. ಆದರೆ ಅಧಿಕೃತವಾಗಿ 25 ಹೆಸರಷ್ಟೇ ಬಹಿರಂಗಗೊಂಡಿವೆ ಎನ್ನಲಾಗುತ್ತಿದೆ. ಕಾಂಗ್ರೆಸ್ ವಕ್ತಾರ ಟಾಮ್ ವಡಕ್ಕನ್ ಅವರು, ಆರೋಪಿಗಳ ಸರಣಿ ಸಾವಿನ ಕುರಿತು ಸುಪ್ರೀಂಕೋರ್ಟ್ ಸುಪ್ರೀಂಕೋರ್ಟ್ ಉಸ್ತುವಾರಿಯಲ್ಲಿ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com