ಧೀರೂಭಾಯ್ ಅಂಬಾನಿ ಮತ್ತು ಅವರ ಪುತ್ರರು
ಧೀರೂಭಾಯ್ ಅಂಬಾನಿ ಮತ್ತು ಅವರ ಪುತ್ರರು

ಪಠ್ಯವಾಗಲಿರುವ ಅಂಬಾನಿ ಜೀವನಗಾಥೆ

ದೇಶದ ಖ್ಯಾತ ಉದ್ಯಮಿ ರಿಲಯನ್ಸ್ ಸಮೂಹದ ಸಂಸ್ಥಾಪಕ ಧೀರೂಭಾಯ್ ಅಂಬಾನಿಯ ಕುರಿತು ಒಂದು ಪಾಠವನ್ನು ಶಾಲಾ ಪಠ್ಯಪುಸ್ತಕದಲ್ಲಿ ಸೇರಿಸುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಚಿಂತಿಸುತ್ತಿದೆ.
Published on
ಅಹ್ಮದಾಬಾದ್: ದೇಶದ ಖ್ಯಾತ ಉದ್ಯಮಿ ರಿಲಯನ್ಸ್ ಸಮೂಹದ ಸಂಸ್ಥಾಪಕ ಧೀರೂಭಾಯ್ ಅಂಬಾನಿಯ ಕುರಿತು ಒಂದು ಪಾಠವನ್ನು ಶಾಲಾ ಪಠ್ಯಪುಸ್ತಕದಲ್ಲಿ ಸೇರಿಸುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಚಿಂತಿಸುತ್ತಿದೆ.
ಸಮಾಜಕ್ಕೆ ಗಣನೀಯ ಕೊಡುಗೆ ನೀಡಿದ ಖ್ಯಾತವೆತ್ತರ ಕುರಿತು ಮಕ್ಕಳು ತಿಳಿಯಬೇಕು. ಹೀಗಾಗಿ ಅವರ ಜೀವನ ಚರಿತ್ರೆಯನ್ನು ಪಠ್ಯಪುಸ್ತಕದಲ್ಲಿ ಅಳವಡಿಸಬೇಕಿದೆ ಎಂದು ಶಿಕ್ಷಣ ಸಚಿವ ಭುಪೇಂದ್ರ ಹೇಳಿದ್ದಾರೆ.
ಅಂತೆಯೇ ರಿಲಯನ್ಸ್  ಸಂಸ್ಥಾಪಕ  ಧೀರೂಭಾಯ್ ಅಂಬಾನಿ , ದೇನಾ ಬ್ಯಾಂಕ್ ಸಂಸ್ಥಾಪಕ ದೇವಕರಣ್ ನಂಜಿ ಮತ್ತಿತರರ ಜೀವನ ಚರಿತ್ರೆಗಳನ್ನು ಪಠ್ಯಾಂಶಗಳನ್ನಾಗಿಸಲು ಗುಜರಾತ್ ಸರ್ಕಾರ ಯೋಜಿಸಿದೆ. 9 ರಿಂದ 12ನೇ ತರಗತಿವರೆಗಿನ ಪಠ್ಯಪುಸ್ತಕಗಳಲ್ಲಿ ಪಠ್ಯಾಂಶವಾಗಿಸಲು ಹಾಗೂ 6 ರಿಂದ 8ನೇ ತರಗತಿವರೆಗೆ ಜನರಲ್ ನಾಲೆಡ್ಜ್‌ ಪುಸ್ತಕಗಳಲ್ಲಿ ಧೀರೂಭಾಯ್ ಹಾಗೂ ದೇವಕರಣ್ ನಂಜಿ  ಕುರಿತ ಜೀವನವನ್ನು ಪಠ್ಯಾಂಶವಾಗಿಸಲು ಗುಜರಾತ್ ರಾಜ್ಯದ ಸ್ಕೂಲ್ ಟೆಕ್ಸ್ಟ್ ಬುಕ್ ಬೋರ್ಡ್‌ ಕ್ರಮ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.
ಮಕ್ಕಳಲ್ಲಿ ಉದ್ಯಮಶೀಲತೆ ಹಾಗೂ ದೊಡ್ಡಮಟ್ಟದ ಕನಸುಗಳನ್ನು ಕಾಣಲು ಅಂಬಾನಿ ಬದುಕು ಸ್ಫೂರ್ತಿದಾಯಕವಾಗ ಬಲ್ಲದು ಎಂಬ ವಿಶ್ವಾಸ ಸರ್ಕಾರ ಹೊಂದಿದ್ದು, ರಾಜ್ಯದ ಶಿಕ್ಷಣ ಸಚಿವ ಭೂಪೇಂದ್ರಸಿನ್ಹ್ ಚುದಸ್ಮ ಈ ಯೋಜನೆ ಯನ್ನು ಶಿಕ್ಷಣ ಇಲಾಖೆಯೊಂದಿಗೆ ಹಂಚಿ ಕೊಂಡಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com