ಐಸಿಸ್ ನಂಟಿರುವ ದೇಶಗಳ ಜತೆ ವ್ಯಾಪಾರ ವಹಿವಾಟಿಲ್ಲ: ಭಾರತ ಸರ್ಕಾರ

ಐಸಿಸ್ ಜತೆ ಸಂಬಂಧ ಹೊಂದಿರುವ ಎಲ್ಲ ದೇಶಗಳೊಂದಿಗಿನ ತೈಲ ಹಾಗೂ ಇತರ ಉತ್ಪನ್ನಗಳ ವ್ಯಾಪಾರಕ್ಕೆ ಭಾರತ ನಿಷೇಧ ಹೇರಿದೆ.
ಇಸಿಸ್ ಉಗ್ರ ಸಂಘಟನೆ
ಇಸಿಸ್ ಉಗ್ರ ಸಂಘಟನೆ
ನವದೆಹಲಿ: ಐಸಿಸ್ ಜತೆ ಸಂಬಂಧ ಹೊಂದಿರುವ ಎಲ್ಲ ದೇಶಗಳೊಂದಿಗಿನ ತೈಲ ಹಾಗೂ ಇತರ ಉತ್ಪನ್ನಗಳ ವ್ಯಾಪಾರಕ್ಕೆ ಭಾರತ ನಿಷೇಧ ಹೇರಿದೆ.
ಇರಾಕ್, ಸಿರಿಯಾ, ಲಿಬಿಯಾಗಳಲ್ಲಿರುವ ಐಸಿಸ್ ವಿರುದ್ಧ ವಿಶ್ವಸಂಸ್ಥೆ ನಿಯಮಾವಳಿ ರೂಪಿಸಿದ್ದು, ಅದನ್ನು ಬೆಂಬಲಿಸುವ ಸಲುವಾಗಿ ಮಂಗಳವಾರದಂದು ಕೇಂದ್ರ ಸರ್ಕಾರ ಈ ನಿರ್ಧಾರ  ಪ್ರಕಟಿಸಿದೆ. ``ವಿಶ್ವಸಂಸ್ಥೆ ಕೈಗೊಂಡಿರುವ ನಿರ್ಧಾರಕ್ಕೆ ಬೆಂಬಲವಾಗಿ ಐಸಿಸ್ ಬೆಂಬಲಿತ ದೇಶಗಳೊಂದಿಗೆ ತೈಲ, ಸಂಸ್ಕರಿಸಿದ ತೈಲೋತ್ಪನ್ನ, ಧಾರ್ಮಿಕ, ವೈಜ್ಞಾನಿಕ ಮಹತ್ವವಿರುವ  ಉತ್ಪನ್ನಗಳ ವ್ಯವಹಾರಕ್ಕೆ ನಿರ್ಬಂಧ ಹೇರಲಾಗಿದೆ'' ಎಂದು ಸರ್ಕಾರ ಘೋಷಿಸಿದೆ.
ಮಹಿಳೆಯರ ರುಂಡ ಕತ್ತರಿಸಿದರು
ಸಿರಿಯಾದಲ್ಲಿ ಐಸಿಸ್ ತನ್ನ ಕ್ರೌರ್ಯದ ಇನ್ನೊಂದು ಮಜಲನ್ನು ಅನಾವರಣಗೊಳಿಸಿದೆ. ಇಬ್ಬರು ಹೆಂಗಸರ ಮೇಲೆ ವಾಮಾಚಾರದ ಆರೋಪ ಹೊರಿಸಿರುವ ಉಗ್ರರು ಅವರ ರುಂಡ ಕಡಿದು ಹತ್ಯೆ ಮಾಡಿದ್ದಾರೆ. ಸಿರಿಯಾದ ಮಾನವ ಹಕ್ಕುಗಳ ಸಂಸ್ಥೆ ಇದನ್ನು ದೃಢಪಡಿಸಿದೆ.
ಭಾರಿ ಸ್ಫೋಟ
ಆಫ್ಘನ್ ರಾಜಧಾನಿ ಕಾಬೂಲ್‍ನ ಅಮೆರಿಕ ರಾಯಭಾರ ಕಚೇರಿಯಿಂದ 500 ಮೀ. ದೂರದಲ್ಲಿ ಉಗ್ರರು ಆತ್ಮಹತ್ಯಾ ದಾಳಿ ನಡೆಸಿದ್ದು, ಮೂವರು ಅಸುನೀಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com