ವೈದ್ಯೆಯ ಕಾಲರ್ ಸರಿಮಾಡಿ ವಿವಾದಕ್ಕೀಡಾದ ಬಿಜೆಪಿ ಸಚಿವ

ಜಮ್ಮ-ಕಾಶ್ಮೀರದ ಬಿಜೆಪಿ ಸಚಿವ ಚೌಧರಿ ಲಾಲ್ ಸಿಂಗ್ ಮಹಿಳಾ ವೈದ್ಯೆಯ ಸಮವಸ್ತ್ರ ಕಾಲರ್ ಸರಿಮಾಡಿರುವ ಚಿತ್ರವೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ...
ಜಮ್ಮ-ಕಾಶ್ಮೀರ ಆರೋಗ್ಯ ಸಚಿವ ಚೌಧರಿ ಲಾಲ್ ಸಿಂಗ್ ಮಹಿಳಾ ವೈದ್ಯೆಯ ಕಾಲರ್ ಸರಿ ಮಾಡುತ್ತಿರುವ ದೃಶ್ಯ
ಜಮ್ಮ-ಕಾಶ್ಮೀರ ಆರೋಗ್ಯ ಸಚಿವ ಚೌಧರಿ ಲಾಲ್ ಸಿಂಗ್ ಮಹಿಳಾ ವೈದ್ಯೆಯ ಕಾಲರ್ ಸರಿ ಮಾಡುತ್ತಿರುವ ದೃಶ್ಯ

ಜಮ್ಮು(ಲಖನ್ಪುರ): ಜಮ್ಮ-ಕಾಶ್ಮೀರ ಆರೋಗ್ಯ ಸಚಿವ ಚೌಧರಿ ಲಾಲ್ ಸಿಂಗ್ ಮಹಿಳಾ ವೈದ್ಯೆಯ ಸಮವಸ್ತ್ರ ಕಾಲರ್ ಸರಿಮಾಡಿರುವ ಚಿತ್ರವೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಜಮ್ಮ-ಕಾಶ್ಮೀರ ಆರೋಗ್ಯ ಸಚಿವ ಚೌಧರಿ ಲಾಲ್ ಸಿಂಗ್ ಅವರು ಅಮರನಾಥ ಯಾತ್ರಿಕರ ಆರೋಗ್ಯ ತಪಾಸಣೆ ಮಾಡುತ್ತಿರುವ ಸರ್ಕಾರಿ ಆಸ್ಪತ್ರೆಗಳ ಪರಿಶೀಲನೆ ಮಾಡುವ ಸಲುವಾಗಿ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಮಹಿಳಾ ವೈದ್ಯೆಯ ಸಮವಸ್ತ್ರದ ಕಾಲರ್ ಸರಿಯಾಗಿಲ್ಲ ಎಂದು ಹೇಳಿ ಸಚಿವರೇ ಮಹಿಳಾ ವೈದ್ಯೆಯ ಬಳಿ ಹೋಗಿ ಆಕೆಯ ಕಾಲರ್ ನ್ನು ಸರಿ ಮಾಡಿದ್ದರು. ಆದರೆ ಇದಕ್ಕೆ ಮಹಿಳಾ ವೈದ್ಯೆ ಏನನ್ನೂ ಹೇಳದೆ ಸುಮ್ಮನೆ ನಿಂತಿದ್ದಳು.

ಈ ದೃಶ್ಯದ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಚಿವರ ಈ ವರ್ತನೆ ಸರಿಯಾದುದ್ದಲ್ಲ. ಸಚಿವನ ಈ ಕ್ರಮ ಮಹಿಳೆಯರಿಗೆ ಅವಮಾನ ಮಾಡಿದಂತೆಗಿದ್ದು, ಇದನ್ನು ಖಂಡಿಸುತ್ತೇವೆ ಎಂಬ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.

ಸಮವಸ್ತ್ರ ಧರಿಸುವುದು ಸಾಮಾನ್ಯ ಶಿಸ್ತಾಗಿದೆ. ಸಚಿವರು ವೈದ್ಯೆಯ ಕಾಲರ್ ಸರಿ ಮಾಡುತ್ತಿದ್ದಂತೆಯೇ ಪಕ್ಕದಲ್ಲಿದ್ದ ಮತ್ತೊಬ್ಬ ವೈದ್ಯೆಯು ತನ್ನ ಕಾಲರ್ ನ್ನು ಸರಿಮಾಡಿಕೊಂಡಿದ್ದರು. ಒಬ್ಬರಿಗೆ ಪಾಠ ಹೇಳಿಕೊಡುತ್ತಿದ್ದಂತೆ ಮತ್ತೊಬ್ಬ ವೈದ್ಯೆಯು ಪಾಠ ಕಲಿತಂತೆ ಆಯಿತು. ಸಚಿವರು ಯಾವುದೇ ಕೆಟ್ಟ ಆಲೋಚನೆಯಿಂದ ಇದನ್ನು ಮಾಡಿಲ್ಲ. ಸಚಿವರು ಕಾಲರ್ ಸರಿಮಾಡುವಾಗ ಸಾರ್ವಜನಿಕರು ಸ್ಥಳದಲ್ಲಿಯೇ ಇದ್ದರು. ಅಲ್ಲಿ ಯಾವುದೇ ಪ್ರತಿಭಟನೆಗಳಾಗಲಿ, ವಿರೋಧವಾಗಲಿ ವ್ಯಕ್ತವಾಗಲಿಲ್ಲ. ಇದರಲ್ಲಿ ಅವಮಾನವಾಗುವಂತಹ ಯಾವುದೇ ವಿಚಾರವಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com