

ನವದೆಹಲಿ: ಕೊಲ್ಕೋತಾ-ಲೂದಿಯಾನ ನೂತನ ರೈಲ್ವೆ ಕಾರಿಡಾರ್ ನಿರ್ಮಾಣಕ್ಕೆ ವಿಶ್ವ ಬ್ಯಾಂಕ್ 650 ಮಿಲಿಯನ್ ಡಾಲರ್, ಅಂದರೆ 4.135 ಕೋಟಿ ರು. ಹಣವನ್ನು ಸಾಲ ನೀಡಲು ಸಮ್ಮತಿಸಿದೆ,
ಪಂಜಾಬ್ ನಲ್ಲಿರುವ ಲೂದಿಯಾನ ಮತ್ತು ಪೂರ್ವದಲ್ಲಿರುವ ಕೋಲ್ಕೋತಾ ನಡುವೆ ಸರಕು ಸಾಗಣೆಗಾಗಿ ಬೃಹತ್ ರೈಲ್ವೆ ಕಾರಿಡಾರ್ ನಿರ್ಮಾಣ ಮಾಡಲಿದೆ.
ಭಾರತಕ್ಕೆ ತ್ವರಿತವಾಗಿ ಸರಕುಸಾಗಣೆ ಮಾರ್ಗದ ಅವಶ್ಯಕತೆಯಿದ್ದು ಶೀಘ್ರವೇ ರೇಲ್ವೆ ಕಾರಿಡಾರ್ ನಿರ್ಮಾಣ ಮಾಡುವುದಾಗಿ ಪ್ರಾಜೆಕ್ಟ್ ನ ಟೀಮ್ ಲೀಡರ್ ತಿಳಿಸಿದ್ದಾರೆ,
ಸ್ವಾತಂತ್ರ್ಯ ಪೂರ್ವದಲ್ಲಿ ಭಾರತೀಯ ರೈಲ್ವೆ ನಿರ್ಮಾಣವಾಗಿದ್ದು. ರಸ್ತೆ ಸಾರಿಗೆ ಮೂಲಕ ಸರಕುಗಳನ್ನು ಸಾಗಿಸುವದು ತುಂಬಾ ಪ್ರಯಾಸದಾಯಕ ಹಾಗೂ ಅತಿ ಹೆಚ್ಚಿನ ವೆಚ್ಚ ತಗುಲತ್ತದೆ. ರೇಲ್ವೆ ಕಾರಿಡಾರ್ ನಿರ್ಮಾಣ ಮಾಡುವುದರಿಂದ ಹೆಚ್ಚಿನ ಪ್ರಯೋಜನವಾಗುತ್ತದೆ.