ಕಾಂಗ್ರೆಸ್ ಸದಸ್ಯರು ಅವಕಾಶ ವಿಸ್ತರಿಸಬೇಕೆಂದು ಮನವಿ ಮಾಡಿದ್ದಾರೆ. ಎರಡನೆಯದ್ದು ಬಿಹಾರ ಚುನಾವಣೆ. ಹಲವು ವಿವಾದದಗಳ ಸುಳಿಯಲ್ಲಿ ಸಿಲುಕಿರುವ ಮೋದಿ ಸರ್ಕಾರ ಆತುರಪಟ್ಟು ಕೊಂಡು ಭೂಸ್ವಾಧೀನ ವಿಧೇಯಕ ಸಂಸತ್ ನಲ್ಲಿ ಮಂಡಿಸದೇ ಇರಲು ನಿರ್ಧರಿಸಿದೆ ಎಂದು ಹೇಳಲಾಗಿದೆ. ಹೇಗಾದರೂ ಮಾಡಿ ಬಿಹಾರ ಚುನಾವಣೆಯಲ್ಲಿ ಬಹುಮತದಿಂದ ಸರ್ಕಾರ ರಚಿಸಬೇಕು ಎನ್ನುವ ಇರಾದೆ ಬಿಜೆಪಿಯದ್ದು. ಇದೇ ವೇಳೆ ಆರ್ ಎಸ್‍ಎಸ್‍ನ ಮತ್ತೊಂದು ಸಹಸಂಸ್ಥೆ ಸ್ವದೇಶಿ ಜಾಗರಣ ಮಂಚ್ ಕೂಡ ವಿಧೇಯಕವನ್ನು ವಿರೋಧಿಸಿದೆ.