ಅಮೆರಿಕ ಉಪಗ್ರಹ
ದೇಶ
20 ವರ್ಷ ಹಳೆಯ ಅಮೆರಿಕ ಉಪಗ್ರಹ ಅಂತರಿಕ್ಷದಲ್ಲೇ ಸ್ಫೋಟ!
ಇಪ್ಪತ್ತು ವರ್ಷಗಳ ಹಳೆಯ ಅಮೆರಿಕದ ಮಿಲಿಟರಿ ಹವಾಮಾನ ಉಪಗ್ರಹವೊಂದು ಅಂತರಿಕ್ಷದಲ್ಲೇ ಸ್ಫೋಟಗೊಂಡಿದೆ.
ನ್ಯೂಯಾರ್ಕ್: ಇಪ್ಪತ್ತು ವರ್ಷಗಳ ಹಳೆಯ ಅಮೆರಿಕದ ಮಿಲಿಟರಿ ಹವಾಮಾನ ಉಪಗ್ರಹವೊಂದು ಅಂತರಿಕ್ಷದಲ್ಲೇ ಸ್ಫೋಟಗೊಂಡಿದೆ.
1995ರಲ್ಲಿ ಉಡಾವಣೆಯಾಗಿದ್ದ ಡಿಎಂಎಸ್‘ಪಿ ಎಫ್-13 ಉಪಗ್ರಹವೂ ಇದಾಗಿದ್ದು, ಇಂಧನ ವ್ಯವಸ್ಥೆಯಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಫೆಬ್ರವರಿ 3ರಂದು ಸ್ಫೋಟಗೊಂಡಿದೆ. ಉಪಗ್ರಹ ಸ್ಫೋಟಗೊಂಡು ಸುಮಾರು 43 ತುಂಡುಗಳಾಗಿದೆ.
ಡಿಎಂಎಸ್‘ಪಿ ಎಫ್-13 ಉಪಗ್ರಹವೂ ಭೂಮಿಯಿಂದ 800 ಕಿ.ಮೀ ಮೇಲಿತ್ತು. ಧ್ರುವಪ್ರದೇಶದ ಹವಾಮಾನದ ಬಗ್ಗೆ ನಿರಂತರ ಮಾಹಿತಿ ಕಲೆ ಹಾಕುತ್ತಿತ್ತು. ಇಂಧನ ವ್ಯವಸ್ಥೆಯಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಕಂಟ್ರೋಲ್ ಕಳೆದುಕೊಂಡ ಉಪಗ್ರಹ ಸ್ಫೋಟಗೊಂಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ