ವಿಮಾನ ಪತನ: ಹಾಲಿವುಡ್ ನಟ ಹ್ಯಾರಿಸನ್‌ಗೆ ಗಂಭೀರ ಗಾಯ

ಹ್ಯಾರಿಸನ್ ಫೋರ್ಡ್ - ಪತನಗೊಂಡ ವಿಮಾನ
ಹ್ಯಾರಿಸನ್ ಫೋರ್ಡ್ - ಪತನಗೊಂಡ ವಿಮಾನ
Updated on

ಲಾಸ್‌ಏಂಜಲಿಸ್: ಹಾಲಿವುಡ್ ನಟ ಹ್ಯಾರಿಸನ್ ಫೋರ್ಡ್ ಪ್ರಯಾಣಿಸುತ್ತಿದ್ದ ಲಘು ವಿಮಾನ ಗುರುವಾರ ಅಪಘಾತಕ್ಕಿಡಾಗಿದ್ದು, ಘಟನೆಯಲ್ಲಿ ಹ್ಯಾರಿಸನ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಲಾಸ್‌ಏಂಜಲಿಸ್‌ನ ಹೊರವಲಯದಲ್ಲಿರುವ ಗಾಲ್ಫ್ ಕೋರ್ಸ್‌ನಲ್ಲಿ ಈ ಅವಘಡ ಸಂಭವಿಸಿದ್ದು, 72 ವರ್ಷದ ಹಾಲಿವುಡ್ ಹಿರಿಯ ನಟನ ತಲೆ ಮತ್ತು ದೇಹದ ಇತರ ಭಾಗಗಳಿಗೆ ಬಲವಾದ ಏಟು ಬಿದ್ದಿದೆ ಎಂದು ಟಿಎಂಝಡ್ ಸೆಲೆಬ್ರಿಟಿ ವೆಬ್‌ಸೈಟ್ ವರದಿ ಮಾಡಿದೆ.

ಹ್ಯಾರಿಸನ್ ಫೋರ್ಡ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಅವರಿಗಾದ ಗಂಭೀರ ಗಾಯಗಳ ಕುರಿತು ಇನ್ನು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಹ್ಯಾರಿಸನ್ ಅವರ ವಿಂಟೇಜ್ ಲಘು ವಿಮಾನ ಗುರುವಾರ ಮಧ್ಯಾಹ್ನ ಪತನಗೊಂಡಿದ್ದು, ಹಾಲಿವುಡ್ ನಟನನ್ನು ಗುರುತಿಸಿದ ಲಾಸ್‌ಏಂಜಲಿಸ್ ಅಗ್ನಿ ಶಾಮಕ ದಳದ ಸಿಬ್ಬಂದಿ, ಸಿಂಗಲ್ ಇಂಜಿನ್‌ನ ಎರಡು ಸೀಟುಗಳ ಹಳೇ ಲಘು ವಿಮಾನ ಪತನವಾದ ಪರಿಣಾಮ ಪೈಲಟ್ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದಷ್ಟೇ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com