ಹರ್ಯಾಣದಲ್ಲಿ ದೆಹಲಿ ಗ್ಯಾಂಗ್‍ರೇಪ್‍ಗಿಂತಲೂ ಭೀಕರ ಹತ್ಯಾಚಾರ
ನವದೆಹಲಿ: ನಾವೆಲ್ಲ ದೆಹಲಿ ಗ್ಯಾಂಗ್‍ರೇಪ್ ಬಗ್ಗೆ ಮಾತನಾಡುತ್ತೇವೆ. ಆದರೆ, ಅದಕ್ಕಿಂತಲೂ ಭೀಕರ ಹಾಗೂ ಹೇಯ ಎನ್ನಬಹುದಾದ ಗ್ಯಾಂಗ್‍ರೇಪ್‍ವೊಂದು ದೆಹಲಿಗೆ ಹೊಂದಿಕೊಂಡಂತಿರುವ ಹರ್ಯಾಣದ ರೋಹ್‍ಟಕ್‍ನಲ್ಲಿ ಕಳೆದ ತಿಂಗಳು ನಡೆದಿದೆ. ಮಾನಸಿಕ ಅಸ್ವಸ್ಥೆಯೊಬ್ಬಳ ಮೇಲೆ ಮುಗಿಬಿದ್ದ ಕಾಮುಕರು ಆಕೆಯ ಮಾನಭಂಗವನ್ನಷ್ಟೇ ಮಾಡಿಲ್ಲ, ಚಿತ್ರ ಹಿಂಸೆ ನೀಡಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಆದರೆ, ದೆಹಲಿ ಗ್ಯಾಂಗ್ ರೇಪ್ ಹೋರಾಟಕ್ಕೆ ಸಿಕ್ಕ ರಾಜಕೀಯ, ಟೆಕಿಗಳ ಬೆಂಬಲ ಈ ಹೋರಾಟಕ್ಕೆ ಸಿಕ್ಕೇ ಇಲ್ಲ.
ಈ ಮಹಿಳೆಯ ಮರಣೋತ್ತರ ಪರೀಕ್ಷೆ ನಡೆಸಿದ್ದು ಪಂಡಿತ್ ಭಾಗವತ್ ದಯಾಳ್ ಶರ್ಮಾ ಪೋಸ್ಟ್ ಗ್ರ್ಯಾಜುವೇಟ್ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(ಪಿಜಿಐಎಂಎಸ್)ನ ಡಾ.ಎಸ್.ಕೆ. ದತ್ತೇರ್ವಾಲ್. ದತ್ತೇರ್ವಾಲ್ ಅವರು ಸುಮಾರು 30 ಸಾವಿರ ಮಂದಿಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಆದರೆ, ಇಷ್ಟೊಂದು ಬಿsೀಕರ, ಕ್ರೌರ್ಯವನ್ನು ನೋಡಿಯೇ ಇಲ್ಲವಂತೆ. ಕಾಮುಕರು ಈ 28 ವರ್ಷದ ಮಹಿಳೆಯ ಮೇಲೆ ನಡೆಸಿದ ಈ ಕ್ರೌರ್ಯ ಕಂಡು ಸ್ವತಃ ಅವರೇ ಆಘಾತಕ್ಕೊಳಗಾಗಿದ್ದಾರೆ.
ಸಾಮೂಹಿಕ ಅತ್ಯಾಚಾರದಿಂದ ತೃಪ್ತರಾಗದ ಕಾಮುಕರು ಎಂಥಾ ನಿರ್ದಯಿಗಳೆಂದರೆ ಆಕೆಯ ಗುದದ್ವಾರದೊಳಗೆ ಕಲ್ಲುಗಳನ್ನು ತುರುಕಿಸಿದ್ದಾರೆ. ತಲೆ, ಸೊಂಟ, ಎದೆಯ ಮೇಲೆ ಮನಬಂದಂತೆ ಹೊಡೆದಿದ್ದಾರೆ. 16 ಸೆ.ಮೀ. ಉದ್ದ ಮತ್ತು 4 ಸೆ.ಮೀ. ಅಗಲದ ಕೋಲೊಂದನ್ನು ಯೋನಿಯೊಳಗೆ ತೂರಿಸಿದ್ದಾರೆ. ವೈದ್ಯರ ಪ್ರಕಾರ, ಈ ಕೃತ್ಯಕ್ಕೆ ಇದಕ್ಕಿಂತಲೂ ಉದ್ದ ಕೋಲು ತೂರಿಸಲಾಗಿತ್ತು. ಆಗ ಅದು ಮುರಿದು ಹೋಗಿರಬಹುದು ಎಂದು ವೈದ್ಯರು ಹೇಳಿದ್ದಾರೆ. ಇಂಥ ಭೀಕರ
`ಹತ್ಯಾಚಾರ'ದ ಮರಣೋತ್ತರ ಪರೀಕ್ಷೆ ನಡೆಸಬೇಕಾದರೆ ವೈದ್ಯರಿಗೆ ಐದು ಗಂಟೆ ಬೇಕಾಯಿತಂತೆ. ಅಷ್ಟರ ವರೆಗೆ ಮಹಿಳೆಯ ದೇಹ ಜರ್ಝರಿತವಾಗಿತ್ತು. ಕೊಳೆತು, ಅಂಗಾಂಗ ನಾಪತ್ತೆಯಾದ ಸ್ಥಿತಿಯಲ್ಲಿದ್ದ ಈ ಶವವನ್ನು ಗುರುತಿಸುವುದೇ ಕಷ್ಟವಾಗಿತ್ತು.
ಅತ್ಯಾಚಾರ ಎಲ್ಲೆಲ್ಲಿ ಎಷ್ಟೆಷ್ಟು?
ಭಾರತ ಅತ್ಯಾಚಾರ ರಾಷ್ಟ್ರವಾಗುತ್ತಿದೆ ಎಂದು ವಿದೇಶಿ ಪತ್ರಿಕೆಗಳು ಬೊಬ್ಬಿಡುತ್ತಿವೆ. ಆದರೆ, ನಿಜವಾಗಿಯೂ ಭಾರತದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳಿಗಿಂತ ಹೆಚ್ಚು ಅತ್ಯಾಚಾರ ನಡೆಯುತ್ತಿದೆಯೇ? ವಿಶ್ವ ಸಂಸ್ಥೆಯ ಮಾದಕ ವಸ್ತುಗಳು ಮತ್ತು ಅಪರಾಧಗಳಿಗೆ ಸಂಬಂಧಿಸಿದ ವಿಭಾಗ ಬಿಡುಗಡೆ ಮಾಡಿದ ಪಟ್ಟಿ ಇಲ್ಲಿದೆ ನೋಡಿ.
ದೇಶ ರೇಪ್ ಪ್ರಮಾಣ (1 ಲಕ್ಷ ಮಂದಿಗೆ)
ಭಾರತ 02
ಜಪಾನ್ 1.2
ಮೊರಕ್ಕೋ 3.6
ಬಹ್ರೈನ್ 4.6
ಮೆಕ್ಸಿಕೋ 12.3
ಬ್ರಿಟನ್ 24.1
ಅಮೆರಿಕ 28.6
ಸ್ವೀಡನ್ 66.5
ದ.ಆಫ್ರಿಕಾ 114.9
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ