ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭಾರತ ಮೂಲದ ಕೆಲಸದಾಕೆಯನ್ನು ಬಚ್ಚಿಟ್ಟು ಬಂಗಲೆ ಕಳೆದುಕೊಂಡಳು ಒಡತಿ

ಭಾರತ ಮೂಲದ ಕೆಲಸದಾಕೆಯನ್ನು ಮನೆಯಲ್ಲಿ ಬಚ್ಚಿಟ್ಟಿದ್ದ ಕಾರಣ ತನ್ನ ಬಂಗಲೆಯನ್ನೇ ಮನೆ ಒಡತಿ ಬಿಟ್ಟುಕೊಡಬೇಕಾಯ್ತು...

ನ್ಯೂಯಾರ್ಕ್‌: ಭಾರತ ಮೂಲದ ಕೆಲಸದಾಕೆಯನ್ನು ಮನೆಯಲ್ಲಿ ಬಚ್ಚಿಟ್ಟಿದ್ದ ಕಾರಣ ತನ್ನ ಬಂಗಲೆಯನ್ನೇ ಮನೆ ಒಡತಿ ಬಿಟ್ಟುಕೊಡಬೇಕಾಯ್ತು!

ಹೌದು. ಕೇರಳದಿಂದ ಅಕ್ರಮ ವಲಸೆ ಬಂದ ಮಹಿಳೆಯನ್ನು 5 ವರ್ಷ ಕಾಲ ಬಚ್ಚಿಟ್ಟಿದ್ದಕ್ಕೆ ಹಾಗೂ ಆಕೆಯನ್ನು ಜೀತದಾಳುವಿನಂತೆ ನಡೆಸಿಕೊಂಡ ಆರೋಪಕ್ಕೆ ಸಂಬಂಧಿಸಿ ಭಾರತ ಮೂಲದ ಅಮೆರಿಕದ ಮಹಿಳೆಯೊಬ್ಬರು ತಮ್ಮ 34 ಕೊಠಡಿಗಳ ಬಂಗಲೆಯನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕಿದೆ.

ಅಮೆರಿಕದಲ್ಲಿ ವಾಸವಾಗಿದ್ದ ಆ್ಯನಿ ಜಾರ್ಜ್‌ ಎಂಬ ಮಹಿಳೆ ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಕೇರಳದಿಂದ ವಲಸೆ ಬಂದ ವಲ್ಸಮ್ಮ ಮಥಾಯ್‌ ಎಂಬುವವರನ್ನು ಜೀತದಾಳುವಿನಂತ ನಡೆಸಿಕೊಂಡು, 2005ರಿಂದ 2011ರವರೆಗೆ ಅನೇಕ ಕಡೆ ಬಚ್ಚಿಟ್ಟಿದ್ದರು ಎಂಬ ದೂರು ದಾಖಲಾಗಿತ್ತು.

ತಮ್ಮ ಮನೆಯಲ್ಲಿ ಕೆಲಸಕ್ಕಿದ್ದ ಕೇರಳದ ವಲ್ಸಮ್ಮ ಮಥಾಯ್‌ ಎಂಬುವರನ್ನು 2005ರಿಂದ 2011ರವರೆಗೆ ಅನೇಕ ಕಡೆ ಬಚ್ಚಿಟ್ಟ ದೂರು ಕೇರಳ ಮೂಲದ ಆ್ಯನಿ ಜಾರ್ಜ್‌ ಎಂಬುವರ ಮೇಲೆ 2013ರಲ್ಲಿ ದಾಖಲಾಗಿತ್ತು.

ಮಥಾಯ್‌ ಅವರನ್ನು ಆ್ಯನಿ, ದಿನದಲ್ಲಿ 17 ಗಂಟೆಗಳ ಕಾಲ ದುಡಿಸುತ್ತಿದ್ದರು. ವಿಶ್ರಾಂತಿ, ಅನಾರೋಗ್ಯ ರಜೆ ಹಾಗೂ ಮನೆಯಲ್ಲಿ ನಿದ್ರೆ ಮಾಡಲು ಅವಕಾಶ ನೀಡುತ್ತಿರಲಿಲ್ಲ ಎಂದು ವಿಚಾರಣೆ ಸಮಯದಲ್ಲಿ ವಕೀಲರು ಆರೋಪಿಸಿದ್ದರು.

ಇನ್ನು ಮಥಾಯ್‌ ಅವರು ಆ್ಯನಿ ಅವರ 5 ಮಕ್ಕಳನ್ನು ಬೆಳಗ್ಗೆ 5.30 ರಿಂದ ರಾತ್ರಿ 11.30ರವರೆಗೆ ನೋಡಿಕೊಳ್ಳಬೇಕಾಗಿತ್ತು.

Related Stories

No stories found.

Advertisement

X
Kannada Prabha
www.kannadaprabha.com