8 ಇರಾಕಿ ಸೈನಿಕರನ್ನು ಕೊಂದು ಮುಂಡವನ್ನು ನೇತು ಹಾಕಿದ ಇಸಿಸ್ ಉಗ್ರರು

ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ(ಇಸಿಸ್) ಉಗ್ರರು ದಿನೇ ದಿನೆ ತಮ್ಮ ಪೈಶಾಚಿಕ ಹೀನ ಕೃತ್ಯವನ್ನು ಮುಂದುವರಿಸಿದ್ದಾರೆ.
ಸೈನಿಕರನ್ನು ಕೊಂದು ಮುಂಡವನ್ನು ನೇತು ಹಾಕಿದ ಇಸಿಸ್ ಉಗ್ರರು
ಸೈನಿಕರನ್ನು ಕೊಂದು ಮುಂಡವನ್ನು ನೇತು ಹಾಕಿದ ಇಸಿಸ್ ಉಗ್ರರು
Updated on: 

ಇರಾಕ್: ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ(ಇಸಿಸ್) ಉಗ್ರರು ದಿನೇ ದಿನೆ ತಮ್ಮ ಪೈಶಾಚಿಕ ಹೀನ ಕೃತ್ಯವನ್ನು ಮುಂದುವರಿಸಿದ್ದಾರೆ. ಎಂಟು ಮಂದಿ ಇರಾಕಿ ಸೈನಿಕರನ್ನು ಹತ್ಯೆ ಮಾಡಿದ ಬಳಿಕ ಅವರ ಮುಂಡವನ್ನು ನಗರದ ಮುಖ್ಯದ್ವಾರವೊಂದಕ್ಕೆ ನೇತು ಹಾಕಿದ್ದಾರೆ.

8 ಮಂದಿ ಇರಾಕಿ ಸೈನಿಕರನ್ನು ಕಬ್ಬಿಣದ ಪಂಜರದಲ್ಲಿಟ್ಟು ಮೆರವಣಿಗೆ ಮಾಡಿ ಬಳಿಕ ಅವರ ಕತ್ತುನ್ನು ಸೀಳು ಕೊಲೆ ಮಾಡಿ ರುಂಡವಿಲ್ಲದ ಮುಂಡವನ್ನು ಸಾರ್ವಜನಿಕ ಸ್ಥಳದಲ್ಲಿ ತಲೆ ಕೆಳಗಾಗಿ ನೇತು ಹಾಕಿದ್ದಾರೆ.

ಇರಾಕಿನ ಕಿರ್ಕುಕ್ ಪ್ರಾಂತ್ಯದಲ್ಲಿ ಈ ಕೃತ್ಯವೆಸಗಿರುವ ಇಸಿಸ್ ಉಗ್ರರು, ತಮ್ಮ ಕಾನೂನು ಮೀರಿದವರಿಗೆ ಇದೇ ಶಿಕ್ಷೆ ಕಾದಿದೆ ಎಂಬ ಬರಹವನ್ನೂ ಅಲ್ಲಿ ಹಾಕಿ ನಾಗರಿಕರಲ್ಲಿ ಭೀತಿ ಮೂಡಿಸಿದ್ದಾರೆ. ಈ ಪ್ರಾಂತ್ಯದಲ್ಲಿ ಉಗ್ರರ ಹಾವಳಿ ಹೆಚ್ಚಾಗಿದ್ದು, ಅಲ್ಲಿನ ನಿವಾಸಿಗಳು ದಿನನಿತ್ಯವೂ ಜೀವಭಯದಲ್ಲಿ ಬದುಕುವಂತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com