2 ರೈಲ್ವೇ ಯೋಜನೆಗೆ ಎಫ್ ಡಿಐ

ರೈಲ್ವೆ ಇಲಾಖೆಯ ಎರಡು ಯೋಜನೆಗಳಿಗೆ ವಿದೇಶಿ ನೇರ ಬಂಡವಾಳ ಹೂಡಿಕೆ ಬಗ್ಗೆ ಸಚಿವ ಸುರೇಶ್ ಪ್ರಭು ಒಪ್ಪಿಗೆ ಸೂಚಿಸಿದ್ದಾರೆ...
ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು (ಸಂಗ್ರಹ ಚಿತ್ರ)
ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು (ಸಂಗ್ರಹ ಚಿತ್ರ)

ನವದೆಹಲಿ: ರೈಲ್ವೆ ಇಲಾಖೆಯ ಎರಡು ಯೋಜನೆಗಳಿಗೆ ವಿದೇಶಿ ನೇರ ಬಂಡವಾಳ ಹೂಡಿಕೆ ಬಗ್ಗೆ ಸಚಿವ ಸುರೇಶ್ ಪ್ರಭು ಒಪ್ಪಿಗೆ  ಸೂಚಿಸಿದ್ದಾರೆ.

ಪ್ರಧಾನಿ ಮೋದಿಯವರ `ಮೇಕ್ ಇನ್ ಇಂಡಿಯಾ' ವ್ಯಾಪ್ತಿಯಲ್ಲಿ ಅವುಗಳು ಜಾರಿಯಾಗಲಿವೆ. ಡೀಸೆಲ್ ಮತ್ತು ಎಲೆಕ್ಟ್ರಿಕ್ ಎಂಜಿನ್ ತಯಾರಿಕಾ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆಯಾಗಲಿವೆ. ಬಿಹಾರದ ಮಾಧೇಪುರ ಮತ್ತು ಮರ್ಹೋ ರಾಗಳಲ್ಲಿ ಕ್ರಮವಾಗಿ ಎಂಜಿನ್ ತಯಾರಿಕಾ ಘಟಕ ರು. 2400 ಕೋಟಿ ಆಗಿರುತ್ತದೆ.

ಬಹುರಾಷ್ಟ್ರೀಯ ಕಂಪನಿಗಳಾದ ಜಿಇ ಮತ್ತು ಇಎಂಡಿ ಕಂಪನಿಗಳು ಮರ್ಹೋರಾದಲ್ಲಿ ಡಿಸೇಲ್ ಎಂಜಿನ್ ತಯಾರಿಕಾ ಘಟಕ ಉತ್ಪಾದನೆ ಪ್ರಸ್ತಾಪವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಮಾದೇಪುರದಲ್ಲಿನ ಎಲೆಕ್ಟ್ರಿಕ್ ಎಂಜಿನ್ ತಯಾರಿಕೆ ಘಟಕಗಳ ಉತ್ಪಾದನೆಗಾಗಿ ಜಾಗತಿಕ ದೈತ್ಯ ಕಂಪನಿಗಳಾದ ಆಲ್ಸ್ ಟಮ್, ಸೀಮನ್ಸ್, ಜಿಇ, ಬೊಂಬಾರ್ಡಿಯರ್‍ ಗಳನ್ನು ಪಟ್ಟಿ ಮಾಡಲಾಗಿದೆ.

ಆ.31ರಂದು ಈ ಬಗ್ಗೆ ಹಣಕಾಸು ಬಿಡ್ ಅನ್ನು ತೆರೆಯಲಾಗುತ್ತದೆ. ಪ್ರಧಾನಿ ಕಚೇರಿಯ ನೇರ ಉಸ್ತುವಾರಿಯಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com