ಕರ್ನಾಟಕ ಗಣಿಗಾರಿಕೆ: ಮನವಿಗೆ ಸ್ಪಂದಿಸಿ

ಕರ್ನಾಟಕದಲ್ಲಿ ಕಬ್ಬಿಣದ ಅದಿರಿನ ಮೇಲೆ ಹೇರಲಾಗಿರುವ ಮಿತಿಯನ್ನು ಹೆಚ್ಚಿಸುವಂತೆ ವಿವಿಧ ಗಣಿ ಸಂಸ್ಥೆಗಳು ಸಲ್ಲಿಸಿರುವ ಮನವಿಗೆ ಪ್ರತಿಕ್ರಿಯಿಸಿ...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಕರ್ನಾಟಕದಲ್ಲಿ ಕಬ್ಬಿಣದ ಅದಿರಿನ ಮೇಲೆ ಹೇರಲಾಗಿರುವ ಮಿತಿಯನ್ನು ಹೆಚ್ಚಿಸುವಂತೆ ವಿವಿಧ ಗಣಿ ಸಂಸ್ಥೆಗಳು ಸಲ್ಲಿಸಿರುವ ಮನವಿಗೆ ಪ್ರತಿಕ್ರಿಯಿಸಿ  ಹೀಗೆಂದು ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಉನ್ನತಾಧಿಕಾರ ಸಮಿತಿ(ಸಿಇಸಿ)ಗೆ ಸೂಚಿಸಿದೆ.

ರಾಜ್ಯದಲ್ಲಿ ಕಬ್ಬಿಣದ ಅದಿರಿನ ಮೇಲೆ 30 ದಶಲಕ್ಷ ಟನ್‍ನ ವಾರ್ಷಿಕ ಮಿತಿಯನ್ನು ನಿಗದಿಪಡಿಸಲಾಗಿದೆ. ಈ ಮಿತಿಯನ್ನು ಹೆಚ್ಚಿಸುವಂತೆ ಕೋರಿ ಭಾರತೀಯ ಗಣಿ ಕೈಗಾರಿಕಾ ಸಂಸ್ಥೆ ಅರ್ಜಿ ಸಲ್ಲಿಸಿತ್ತು.

ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ನ್ಯಾಯಪೀಠ, ಗಣಿ ಸಂಸ್ಥೆಗಳ ಅರ್ಜಿಗೆ ಪ್ರತಿಕ್ರಿಯಿಸುವಂತೆ ಸಿಇಸಿಗೆ ತಿಳಿಸಿದೆ. ಜತೆಗೆ, ಕರ್ನಾಟಕದ ಗಣಿಗಾರಿಕೆ ಬಗ್ಗೆ ಸಿಇಸಿ ಸಿದ್ಧಪಡಿಸಿದ ವರದಿಯ ಪ್ರತಿಗಳನ್ನು ಗಣಿ ಸಂಸ್ಥೆಗಳ ಪರ ವಕೀಲರಿಗೆ ನೀಡುವಂತೆ ಸುಪ್ರೀಂ ಕೋರ್ಟ್ ನ ರಿಜಿಸ್ಟ್ರಿಗೆ ಆದೇಶಿಸಿದೆ. ಮುಂದಿನ ವಿಚಾರಣೆ ಮಾ.31ರಂದು ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com