
ಜಮ್ಮು ಮತ್ತು ಕಾಶ್ಮೀರವು ವಿವಾದಿತ ಪ್ರದೇಶ. ಅದು ಭಾರತದ ಭಾಗವಲ್ಲ. ಹೀಗೆಂದು ಹೇಳಿರುವುದು ಹುರಿಯತ್ ನಾಯಕ ಸೈಯ್ಯದ್ ಅಲಿ ಶಾ ಗಿಲಾನಿ.
ಹಿಂದಿನಿಂದಲೇ ಪಾಕಿಸ್ತಾನದತ್ತ ಒಲವು ಹೊಂದಿರುವ ಗಿಲಾನಿ ಈ ಹೇಳಿಕೆ ನೀಡುವ ಮೂಲಕ ತನ್ನ ಉದ್ಧಟತನ ಪ್ರದರ್ಶಿಸಿದ್ದಾರೆ. ಸೋಮವಾರವಷ್ಟೇ ಅವರು ಪಾಕಿಸ್ತಾನದ ರಾಯಭಾರಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಮಂಗಳವಾರ ಮಾತನಾಡಿದ ಗಿಲಾನಿ, ಸಿಎಂ ಸಯೀದ್ ಹುರಿಯತ್ ಅನ್ನು ಶ್ಲಾಘಿಸಿರುವುದು `ರಾಜಕೀಯ ಸ್ಟಂಟ್' ಅಷ್ಟೆ. ಯಾವ ಪಕ್ಷವೇ ಅಧಿಕಾರದಲ್ಲಿರಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದಿದ್ದಾರೆ. ಜತೆಗೆ, ಆಲಂ ವಿರುದ್ಧ ಹೊರಿಸಿರುವ ಆರೋಪಗಳೆಲ್ಲ ಸುಳ್ಳು ಎಂದೂ ಹೇಳಿದ್ದಾರೆ.
Advertisement