
ನವದೆಹಲಿ: ಕೇಂದ್ರ ಸರ್ಕಾರಕ್ಕೆ ಮಂಗಳವಾರ ಸಂಸತ್‍ನಲ್ಲಿ ಸಿಹಿ ಮತ್ತು ಕಹಿ ಎರಡೂ ಅನುಭವ. ಒಂದೆಡೆ, ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಯ ಭೂಸ್ವಾಧೀನ
ತಿದ್ದುಪಡಿ ವಿಧೇಯಕಕ್ಕೆ ಲೋಕಸಭೆ ಯಲ್ಲಿ ಅಂಗೀಕಾರ ದೊರೆತದ್ದು ಖುಷಿಯಾದರೆ, ಮತ್ತೊಂದೆಡೆ ಕಣಿವೆ ರಾಜ್ಯದಲ್ಲಿ ಪಿಡಿಪಿ ಮಾಡುತ್ತಿರುವ ಕಿತಾಪತಿಯಿಂದ ಪ್ರತಿಪಕ್ಷಗಳ ವಾಗ್ದಾಳಿಗೆ ತುತ್ತಾಗಬೇಕಾದ ಅನಿವಾರ್ಯತೆ. ಹೌದು. ಅಂತೂ ಇಂತೂ ವಿವಾದಿತ ಭೂಸ್ವಾಧೀನ ವಿಧೇಯಕಕ್ಕೆ ಲೋಕಸ ಭೆಯ ಅಂಗೀಕಾರ ಪಡೆಯುವಲ್ಲಿ ಮೋದಿ ಸರ್ಕಾರ ಯಶಸ್ವಿಯಾಗಿದೆ. ಆದರೆ ರಾಜ್ಯಸಭೆಯಲ್ಲಿ ವಿಧೇಯಕ ವನ್ನು ಪಾಸ್ ಮಾಡುವುದೇ ಸರ್ಕಾರ ಕ್ಕಿರುವ ದೊಡ್ಡ ಸವಾಲು. ಅದನ್ನು ಸರ್ಕಾರ ಹೇಗೆ ನಿಭಾಯಿಸುತ್ತದೆ ಎನ್ನುವುದನ್ನು ಕಾದು ನೋಡಬೇಕು. ಇದೇ ವೇಳೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ನಡೆಸುತ್ತಿರುವ ಅವಾಂತರದಿಂದ ತೀವ್ರ ಮುಜುಗರಕ್ಕೀಡಾಗಿರುವ ಬಿಜೆಪಿ, ಮೈತ್ರಿ ಪಕ್ಷ ಪಿಡಿಪಿಗೆ ತಕ್ಕ ತಿರುಗೇಟು ನೀಡಿದೆ. ನಿಮ್ಮ ಉದ್ಧಟತನ ಹೀಗೇ ಮುಂದುವ ರಿದರೆ ಬೆಂಬಲ ವಾಪಸ್ ಪಡೆಯಬೇಕಾದೀತು ಎಂಬ ಕಠಿಣ ಸಂದೇಶವನ್ನು ಪಿಡಿಪಿಗೆ ಬಿಜೆಪಿ ರವಾನಿಸಿದೆ.
ಭೂಸ್ವಾಧೀನಕ್ಕೆ ಲೋಕ ಅಸ್ತು
ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ವಿವಾದಿತ ಭೂಸ್ವಾಧೀನ ತಿದ್ದುಪಡಿವಿಧೇಯಕ ಮಂಗಳವಾರ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ. 2 ದಿನಗಳ ಬಿಸಿ
ಬಿಸಿ ಚರ್ಚೆಯ ಬಳಿಕ ವಿಧೇಯಕಕ್ಕೆ ಹಸಿರು ನಿಶಾನೆ ದೊರೆತಿದೆ.
ಸರ್ಕಾರದ ಭೂ ಸುಧಾರಣೆ ವಿಧೇಯಕವನ್ನು ಬೆಂಬಲಿಸುವುದೋ, ಬೇಡವೋ ಎಂದು ಕುಳಿತಿದ್ದ ಎನ್‍ಡಿಎ ಅಂಗಪಕ್ಷ ಅಕಾಲಿ ದಳ ಕೊನೇ ಕ್ಷಣದಲ್ಲಿ ವಿಧೇಯಕಕ್ಕೆ
ಬೆಂಬಲ ನೀಡಿದೆ. ಇದೇ ವೇಳೆ, ವಿಧೇಯಕಕ್ಕೆ ಮತ್ತೆ 9 ತಿದ್ದುಪಡಿಗಳನ್ನು ತರಲಾಗಿದ್ದು, ಇದಕ್ಕೂ ಲೋಕಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ತಿದ್ದುಪಡಿ ಕುರಿತು ಮತದಾನ ನಡೆಯು
ವಾಗ ಎನ್‍ಡಿಎ ಮೈತ್ರಿಪಕ್ಷ ಶಿವಸೇನೆ, ಪ್ರಾದೇಶಿಕ ಪಕ್ಷಗಳಾದ ಬಿಜು ಜನತಾದಳ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ ಸದನದಿಂದ ಹೊರನಡೆದವು. ಜಯಲಲಿತಾ
ನೇತೃತ್ವದ ಎಐಎಡಿಎಂಕೆ ಕೂಡ ವಿಧೇಯಕಕ್ಕೆ ಬೆಂಬಲ ನೀಡಿತು. ಪ್ರತಿಪಕ್ಷಗಳ ವಿರೋಧ: ಕಾಂಗ್ರೆಸ್, ಎಡಪಕ್ಷಗಳು, ತೃಣಮೂಲ ಕಾಂಗ್ರೆಸ್, ಜೆಡಿಯು ಸೇರಿದಂತೆ ಪ್ರತಿಪಕ್ಷಗಳು ಭೂಸ್ವಾಧೀನ ವಿಧೇಯಕಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿದವು. ಈ ವೇಳೆ ಮಾತನಾಡಿದ ಗ್ರಾಮೀಣಾಭಿ ವೃದ್ಧಿ ಸಚಿವ ರಾವ್ಬೀರೇಂದ್ರ ಸಿಂಗ್, ರೈತರ ಹಿತಾಸಕ್ತಿಗೆ ಸಂಬಂ„ಸಿದ ಸಲಹೆಗಳಿದ್ದರೆ, ಅವುಗಳನ್ನುಸ್ವಾಗತಿಸುತ್ತೇವೆ ಎಂದರು.
ತಾರಕಕ್ಕೇರಿದ ಆಲಂ ವಿವಾದ
ಸಂಸತ್‍ನ ಉಭಯ ಸದನಗಳಲ್ಲಿ ಮಂಗಳವಾ ರವೂ `ಆಲಂ' ವಿವಾದ ತಾರಕಕ್ಕೇರಿತು. ಮಸಾರತ್ ಆಲಂನನ್ನು ಬಿಡುಗಡೆ ಮಾಡುವ ಮೂಲಕ
ದೇಶವಿರೋಧಿ ಕೃತ್ಯವೆಸಗಿರುವ ಪಿಡಿಪಿ ವಿರುದಟಛಿ ನಿಷೇಧ ಹೇರಬೇಕು. ಮುಫ್ತಿ ಸಯೀದ್ ಸರ್ಕಾರವನ್ನು ಸರ್ಕಾರವನ್ನು ವಜಾ ಮಾಡಬೇಕು ಎಂದು ಲೋಕಸಭೆಯಲ್ಲಿ ಪ್ರತಿಪಕ್ಷಗಳು ಒತ್ತಾಯಿಸಿದವು. ಇದೇ ವೇಳೆ ಇನ್ನೂ 800 ಪ್ರತ್ಯೇಕತಾವಾದಿಗಳನ್ನು ಬಿಡುಗಡೆ ಮಾಡಲು ಸಯೀದ್ ಸರ್ಕಾರ ಮುಂದಾಗಿದೆ. ಇದೇ ವೇಳೆ, ಇನ್ನೂ 800 ಪ್ರತ್ಯೇಕತಾ ವಾದಿಗಳನ್ನು ಬಿಡುಗಡೆ ಮಾಡಲು ಸಯೀದ್ ಸರ್ಕಾರ ಮುಂದಾಗಿದೆ ಎಂಬ ವಿಚಾರವನ್ನೆತ್ತಿ ರಾಜ್ಯಸಭೆ ಯಲ್ಲೂ ಪ್ರತಿಪಕ್ಷಗಳು ವಾಗ್ದಾಳಿ ನಡೆಸಿದವು. ಈ ನಿರ್ಧಾರದ ಬಗ್ಗೆ ರಾಜ್ಯ ಪಾಲರು ಕೇಂದ್ರಕ್ಕೆ ನೀಡಿದ ವರದಿ ಯಲ್ಲಿ ಉಲ್ಲೇಖಿಸಿದ್ದಾರೆಯೇ ಎಂದೂ ಪ್ರಶ್ನಿಸಿದವು. ಇದಕ್ಕೆ ಉತ್ತರಿಸಿದ ಸಚಿವ
ಅರುಣ್ ಜೇಟ್ಲಿ, ಯಾವುದೇ ನಿರ್ದಿಷ್ಟ ವಿಚಾರ ಸರ್ಕಾರದ ಗಮನಕ್ಕೆ ಬಂದರೂ ಅದರ ಬಗ್ಗೆ ಪ್ರತಿಕ್ರಿಯಿಸುತ್ತೇವೆ ಎಂದರು.
Advertisement