
ನವದೆಹಲಿ: ರಜೆಯಲ್ಲಿ ಅಜ್ಞಾತ ಸ್ಥಳಕ್ಕೆ ತೆರಳಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಾರಾಂತ್ಯಕ್ಕೆ ದೆಹಲಿಗೆ ಮರಳಲಿದ್ದಾರೆ. ಮುಂದಿನ ವಾರದಿಂದ ಫಿಟ್ ಆಗಿ ಸಂಸತ್ ಮತ್ತು ಪಕ್ಷದ ಕೆಲಸ ಕಾರ್ಯಗಳಲ್ಲಿ `ಫಿಟ್' ಆಗಿ ಭಾಗವಹಿಸಲಿದ್ದಾರಂತೆ.
ಹೀಗೆಂದು ಕಾಂಗ್ರೆಸ್ ಮೂಲಗಳೇ ತಿಳಿಸಿವೆ. ಈಗಾಗಲೇ ತಿಳಿಸಿರುವಂತೆ ರಾಹುಲ್ ಮಂಗಳವಾರ ದೆಹಲಿಗೆ ಆಗಮಿಸಬೇಕಾಗಿತ್ತು. ಬಜೆಟ್ ಅಧಿವೇಶನ ವೇಳೆ ರಾಹುಲ್ ಗೈರಾಗಿದ್ದು, ಹಲವು ವಿವಾದಗಳನ್ನು ಹುಟ್ಟು ಹಾಕಿತ್ತು.
ಮನವಿ ವಜಾ
ಇದೇ ವೇಳೆ, ತನ್ನ ಮೇಲಿರುವ ಮಾನನಷ್ಟ ಮೊಕದ್ದಮೆ ಕೈಬಿಡಬೇಕೆಂದು ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ. ಕಳೆದ ಚುನಾವಣೆ ವೇಳೆ ರ್ಯಾಲಿಯಲ್ಲಿ ಮಾತನಾಡಿದ್ದ ವೇಳೆ ಆರ್ ಎಸ್‍ಎಸ್ ಕಾರ್ಯಕರ್ತರೇ ಗಾಂಧೀಜಿ ಹತ್ಯೆಗೆ ಕಾರಣ ಎಂದು ರಾಹುಲ್ ಗಾಂಧಿ ಎಂದಿದ್ದರು. ನೀಡಿದ್ದರು. ಈ ಸಂಬಂಧ ಆರ್‍ಎಸ್‍ಎಸ್ ಮುಖಂಡ ರಾಜೇಶ್ ಕುಂಟೆ ಹೈಕೋರ್ಟಲ್ಲಿ ಮೊಕದ್ದಮೆ ಹೂಡಿದ್ದರು.
Advertisement