ವಿಶ್ವಸಂಸ್ಥೆ: ಮಹಿಳಾ ಕಾರ್ಯದರ್ಶಿ ಏಕಿಲ್ಲ?

ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಸ್ಥಾನಕ್ಕೆ ಮಹಿಳೆಯರೇಕೆ ನೇಮಕವಾಗಬಾರದು ಎನ್ನುವ ಕುರಿತು ಮಹತ್ವದ ಚರ್ಚೆ ಆರಂಭವಾಗಿದೆ...
ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿ ಬಾನ್ ಕಿ ಮೂನ್ (ಸಂಗ್ರಹ ಚಿತ್ರ)
ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿ ಬಾನ್ ಕಿ ಮೂನ್ (ಸಂಗ್ರಹ ಚಿತ್ರ)

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಸ್ಥಾನಕ್ಕೆ ಮಹಿಳೆಯರೇಕೆ ನೇಮಕವಾಗಬಾರದು ಎನ್ನುವ ಕುರಿತು ಮಹತ್ವದ ಚರ್ಚೆ ಆರಂಭವಾಗಿದೆ.

ಪ್ರಸ್ತುತ ಮಹಾ ಕಾರ್ಯದರ್ಶಿಯಾಗಿರುವ ಬಾನ್ ಕಿ- ಮೂನ್ ಅಧಿಕಾರಾವಧಿ 2016ರ ಡಿ. 31ರವರೆಗೆ ಇದೆ. ಆದರೂ ಈಗಾಗಲೇ ವಿಶ್ವಸಂಸ್ಥೆಗೆ ಬಾನ್ ಉತ್ತರಾಧಿಕಾರಿಯಾಗಿ ಮಹಿಳೆಯರೇಕೇ ಆಯ್ಕೆಯಾಗಬಾರದು ಎಂಬ ಬಗ್ಗೆ ವಿಚಾರ ವಿನಿಮಯ ನಡೆದಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯರಿಗೆ ಏರ್ಪಡಿಸಲಾಗಿದ್ದ ಖಾಸಗಿ ಔತಣಕೂಟದಲ್ಲಿ ಈ ಕುರಿತಂತೆ ಚರ್ಚೆ ನಡೆಯಿತು. ಯುರೋಪಿಯನ್ ರಾಯಭಾರಿಯೊಬ್ಬರು, ವಿಶ್ವಸಂಸ್ಥೆಯ 70 ವರ್ಷಗಳ  ಇತಿಹಾಸದಲ್ಲಿ ಪುರುಷರೇ ಈ ಮಹತ್ವದ ಸ್ಥಾನವನ್ನು ಅಲಂಕರಿಸಿದ್ದಾರೆ ಎಂದರು.

ಜನವರಿ 1946ರ ವಿಧೇಯಕದಲ್ಲಿ ಸಾಧನೆ ಮತ್ತು ಹಿರಿಮೆಯುಳ್ಳ ಪುರುಷರು ಹುದ್ದೆಗೆ ಅರ್ಹರು ಎನ್ನಲಾಗಿದೆ ಎಂದು ಪ್ರಸ್ತಾವಿಸಿದ ರಾಯಭಾರಿ, ಈ ಸಂಕಲ್ಪ ವಾಕ್ಯಕ್ಕೆ, ಮಹಿಳೆಯರೂ ಅರ್ಹರು ಎಂದೇಕೆ ಸೇರಿಸಬಾರದು ಎಂದು ಸೂಚಿಸಿದರು. ಕಳೆದ ಎರಡು ಬಾರಿಯೂ ಮಹಿಳೆಯರೂ ಮಹಾಕಾರ್ಯದರ್ಶಿ ಸ್ಥಾನದ ಹತ್ತಿರದವರೆಗೂ ತಲುಪಿ ನಿರ್ಗಮಿಸಿದ್ದರು. ಅಪಾರ ರಾಜಕೀಯ ಅನುಭವವುಳ್ಳ 12ಕ್ಕಿಂತಲೂ ಹೆಚ್ಚು ಮಹಿಳೆಯರು ಅರ್ಹರಿದ್ದು, ಮುಂದಿನ ದಿನಗಳಲ್ಲಿ ಅವರು ಅಭ್ಯರ್ಥಿಗಳಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com