
ವಿಕ್ಟೋರಿಯಾ: ನೆರೆಯ ದೇಶದೊಂದಿಗೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಐದು ದಿನಗಳ ವಿದೇಶಿ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಬುಧವಾರ ದ್ವೀಪ ರಾಷ್ಟ್ರವಾದ ಸೆಷಲ್ಸ್ ಗೆ ಭೇಟಿ ನೀಡಿದ್ದಾರೆ.
ಈ ಮೊದಲ ಭೇಟಿಯ ವೇಳೆ ದ್ವೀಪ ರಾಷ್ಟ್ರದೊಂದಿಗೆ ಮಹತ್ವದ ಒಪ್ಪಂದಗಳಿಗೆ ಮೋದಿ ಸಹಿ ಹಾಕಿದ್ದಾರೆ. ಜಲಸಂಪನ್ಮೂಲದ ಮ್ಯಾಪಿಂಗ್‍ಗೆ ನೆರವು, ಕರಾವಳಿ ಭದ್ರತೆ ಬಿಗಿಗೊಳಿಸಲು ಎರಡನೇ ಡ್ರೋಣ್ ವಿಮಾನ ಪೂರೈಕೆ ಮತ್ತು ದ್ವೀಪ ರಾಷ್ಟ್ರದ ನಾಗರೀಕರಿಗೆ 3 ತಿಂಗಳ ಉಚಿತ ವೀಸಾ ಒದಗಿಸುವ ಸಂಬಂಧ ಪ್ರಧಾನಿ ಮೋದಿ ಅವರು ಸೆಷೆಲ್ಸ್ ಅಧ್ಯಕ್ಷ ಜೇಮ್ಸ್ ಅಲಿಕ್ಸ್ ಮಿಶೆಲ್ ಅವರ ಜತೆ ಒಡಂಬಡಿಕೆ ಮಾಡಿಕೊಂಡಿದ್ದಾರೆ.
34 ವರ್ಷಗಳ ಬಳಿಕ ಭಾರತೀಯ ಪ್ರಧಾನಿಯೊಬ್ಬರು ಸೆಷೆಲ್ಸ್ ಗೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಮಾರಿಷಸ್ ಮತ್ತು ಶ್ರೀಲಂಕಾದ ಜತೆಗೆ ಭಾರತ ಮಾಡಿಕೊಳ್ಳುತ್ತಿರುವ ಸಮುದ್ರ ರಕ್ಷಣೆಗೆ ಸಂಬಂಧಿಸಿದ ಸಹಕಾರ ಒಪ್ಪಂದದಲ್ಲಿ ಸೆಷೆಲ್ಸ್ ಅನ್ನೂ ಭಾಗಿದಾರನನ್ನಾಗಿ ಮಾಡುವುದಾಗಿಯೂ ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ. ಸೆಷೆಲ್ಸ್ ನಿಂದ ಮೋದಿ ಮಾರಿಷಸ್ ರಾಜಧಾನಿ ಪೋರ್ಟ್ ಲೂಯಿಗೆ ಆಗಮಿಸಿದ್ದಾರೆ.
Advertisement