ಮ್ಯಾನ್ಸಾರ್ ದೋಣಿ ದುರಂತ: 21 ಸಾವು, 26 ಜನ ನಾಪತ್ತೆ

ಮ್ಯಾನ್ಸಾರ್ ನಿಂದ ನಿಗದಿತ ಸಂಖ್ಯೆಗಿಂತ ಹೆಚ್ಚು ಅಕ್ರಮ ವಲಸಿಗರನ್ನು ತುಂಬಿಕೊಂಡು ಹೋಗುತ್ತಿದ್ದ ದೋಣಿಯೊಂದು ಮುಳುಗಿ 21 ಕ್ಕೂ ಹೆಚ್ಚು ಜನ ಸಾವನ್ನಪ್ಪಿ, 26 ಜನರು ನಾಪತ್ತೆಯಾದ ಘಟನೆ ಮ್ಯಾನ್ಸಾರ್ ನ ವಿಯೆಟ್ನಾಂ ಪ್ರದೇಶದಲ್ಲಿ ಶನಿವಾರ ನಡೆದಿದೆ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಯಾಂಗೊನ್: ಮ್ಯಾನ್ಸಾರ್ ನಿಂದ ನಿಗದಿತ ಸಂಖ್ಯೆಗಿಂತ ಹೆಚ್ಚು ಅಕ್ರಮ ವಲಸಿಗರನ್ನು ತುಂಬಿಕೊಂಡು ಹೋಗುತ್ತಿದ್ದ ದೋಣಿಯೊಂದು ಮುಳುಗಿ 21 ಕ್ಕೂ ಹೆಚ್ಚು ಜನ ಸಾವನ್ನಪ್ಪಿ, 26 ಜನರು ನಾಪತ್ತೆಯಾದ ಘಟನೆ ಮ್ಯಾನ್ಸಾರ್ ನ ವಿಯೆಟ್ನಾಂ ಪ್ರದೇಶದಲ್ಲಿ ಶನಿವಾರ ನಡೆದಿದೆ.

ಘಟನೆಯಲ್ಲಿ 26 ಜನರು ನಾಪತ್ತೆಯಾಗಿದ್ದು, 21 ಮೃತ ದೇಹಗಳು ಪತ್ತೆಯಾಗಿದ್ದು, ಮೃತರಲ್ಲಿ 2 ಪುರುಷರು, 19 ಮಹಿಳೆಯರಿದ್ದರು. 167 ಮಂದಿಯನ್ನು ಈಗಾಗಲೇ ರಕ್ಷಿಸಲಾಗಿದೆ. ಉಳಿದವರಿಗಾಗಿ ಶೋಧ ಕಾರ್ಯಮುಂದುವರೆದಿದೆ ಎಂದು ವಿಯೆಟ್ನಾಂನ ಪೊಲೀಸರು ಹೇಳಿದ್ದಾರೆ.

ದೋಣಿಯಲ್ಲಿ ಮಕ್ಕಳು ಸೇರಿದಂತೆ ಮ್ಯಾನ್ಮಾರ್ ನ ಸುಮಾರು 200 ಮಂದಿ ಕ್ಯೌಕ್‌ಫ್ಯು ಪ್ರದೇಶದಿಂದ ಪಶ್ಚಿಮ ರಾಖಿನೆ ರಾಜ್ಯಕ್ಕೆ ತೆರಳುತ್ತಿದ್ದರು.ದೋಣಿಯಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಜನರು ಹೋಗಿದ್ದರಿಂದ ರಾತ್ರಿ 8 ಗಂಟೆಗೆ ನೀರಿನ ಮಧ್ಯದಲ್ಲಿಯೇ ದೋಣಿ ನೀರಿನಲ್ಲಿ ಮುಳುಗಿದೆ. ಘಟನೆ ವೇಳೆ ಹಲವರು ಈಜಿ ದಡ ಸೇರಿದ್ದಾರೆ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com