ಭೂಸ್ವಾಧೀನ ಮಸೂದೆ ವಿರುದ್ಧ ನಿತೀಶ್ ನಿರಶನ ಆರಂಭ

ನಿತೀಶ್  ಕುಮಾರ್
ನಿತೀಶ್ ಕುಮಾರ್

ಪಾಟ್ನಾ: ಕೇಂದ್ರ ಸರ್ಕಾರದ ಭೂಸ್ವಾಧೀನ ಮಸೂದೆ ವಿರುದ್ಧ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು 24 ಗಂಟೆಗಳ ನಿರಶನ ಆರಂಭಿಸಿದ್ದಾರೆ.

ಭೂಸ್ವಾಧೀನ ಮಸೂದೆ ವಿರುದ್ಧ ಜೆಡಿಯು ರಾಜ್ಯಾದ್ಯಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಇದರ ಅಂಗವಾಗಿ ನಿತೀಶ್ ಕುಮಾರ್ ಅವರು ಇಂದು ಬೆಳಗ್ಗೆ ಪಕ್ಷದ ಕಚೇರಿಗೆ ಆಗಮಿಸಿ, ಯೋಗ ಮಾಡಿದ ಬಳಿಕ ನಿರಶನ ಆರಂಭಿಸಿದ್ದಾರೆ.

ಜೆಡಿಯು ರಾಜ್ಯಾಧ್ಯಕ್ಷ ಬಸಿಷ್ಠ ನಾರಾಯಣ್ ಸಿಂಗ್, ಹಿರಿಯ ಸಚಿವರಾದ ವಿಜಯ್ ಜೌಧರಿ, ಶಾಮ್ ರಜಾಕ್, ರಾಜಿವ್ ರಂಜನ್ ಸಿಂಗ್ ಲಲನ್ ಹಾಗೂ ಜೆಡಿಯು ಸಂಸದರಾದ ಅಲಿ ಅನ್ವರ್, ಹರ್ಬನ್ಸ್ ಸೇರಿದಂತೆ ಪಕ್ಷದ ಹಲವು ನಾಯಕರು ನಿತೀಶ್ ಕುಮಾರ್ ಪ್ರತಿಭಟನೆಗೆ ಸಾಥ್ ನೀಡಿದ್ದಾರೆ.

ಪಕ್ಷದ ಹಲವು ಕಾರ್ಯಕರ್ತರು ಸಹ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಪಕ್ಷದ ಕಚೇರಿಯ ಆವರಣದಲ್ಲಿ ಉಪವಾಸ ನಡೆಸುತ್ತಿದ್ದಾರೆ.

ಈ ವೇಳೆ ಮಾತನಾಡಿದ ಜೆಡಿಯು ರಾಜ್ಯಾಧ್ಯಕ್ಷ ಬಸಿಷ್ಠ ನಾರಾಯಣ್ ಸಿಂಗ್ ಅವರು, ಕೇಂದ್ರ ಸರ್ಕಾರದ ಭೂಸ್ವಾಧೀನ ಮಸೂದೆಯ ವಿರುದ್ಧ ಗಾಂಧಿ ಮಾದರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com