ಜಾಫ್ನಾದಲ್ಲಿ ಮನೆ ನಿರ್ಮಿಸಲು ಆರ್ಥಿಕ ನೆರವು: ಪ್ರಧಾನಿ ಮೋದಿ

ಶ್ರೀಲಂಕಾದ ಜಾಫ್ನಾದಲ್ಲಿರುವ ತಮಿಳರಿಗೆ ಮನೆ ನಿರ್ಮಿಸಲು ಭಾರತ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ...
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)

ಜಾಫ್ನಾ (ಶ್ರೀಲಂಕಾ): ಶ್ರೀಲಂಕಾದ ಜಾಫ್ನಾದಲ್ಲಿರುವ ತಮಿಳರಿಗೆ ಮನೆ ನಿರ್ಮಿಸಲು ಭಾರತ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಶ್ರೀಲಂಕಾ ಪ್ರವಾಸದ 2ನೇ ದಿನವಾದ ಇಂದು ಎಲ್ ಟಿಟಿಇ ಸಂಘಟನೆ ಕಾರಸ್ಥಾನವಾಗಿದ್ದ ಜಾಫ್ನಾಕ್ಕೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು ಜಾಫ್ನಾಕ್ಕೆ ಭೇಟಿ ನೀಡಿರುವುದು ನನ್ನ ಸೌಭಾಗ್ಯ. ನಿರಾಶ್ರಿತರಿಗೆ ಸೂರು ಕಲ್ಪಿಸಲು ನಾವು ಬದ್ಧ. ಶ್ರೀಲಂಕಾ ಸರ್ಕಾರದೊಂದಿಗೆ ಸೇರಿ ಜಾಫ್ನಾದಲ್ಲಿ ಸುಮಾರು 27 ಸಾವಿರ ಮನೆಗಳ ನಿರ್ಮಾಣಕ್ಕೆ ಭಾರತ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ಮೋದಿ ಭರವಸೆ ನೀಡಿದರು.

ಎಲ್ ಟಿಟಿಇ ಮುಖ್ಯಸ್ಥ ಪ್ರಭಾಕರನ್ ಬದುಕಿದ್ದ ವೇಳೆ ಶ್ರೀಲಂಕಾದಲ್ಲಿ ನಡೆಯುತ್ತಿದ್ದ ಆಂತರಿಕ ಕಲಹದ ಸಮಯದಲ್ಲಿ ಇದೇ ಜಾಫ್ನಾ ಎಲ್ ಟಿಟಿಇ ಸಂಘಟನೆಯ ರಾಜಧಾನಿಯಾಗಿತ್ತು. ಈಗಲೂ ಇಲ್ಲಿ ಸುಮಾರು 60 ಮಿಲಿಯನ್ ತಮಿಳರು ನಿರಾಶ್ರಿತರಾಗಿದ್ದು, ಶ್ರೀಲಂಕಾ ಸರ್ಕಾರ ಇಲ್ಲಿ ನಿರಾಶ್ರಿತ ಶಿಬಿರಗಳನ್ನು ನಡೆಸುತ್ತಿದೆ.

3 ರಾಷ್ಟ್ರಗಳ ಪ್ರವಾಸದ ನಿಮಿತ್ತ ನಿನ್ನೆ ಶ್ರೀಲಂಕಾಕ್ಕೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಜಾಫ್ನಾಕ್ಕೆ ಭೇಟಿ ನೀಡಿದರು. ಆ ಮೂಲಕ ಜಾಫ್ನಾಕ್ಕೆ ಭೇಟಿ ನೀಡಿದ ಮೊದಲ ಭಾರತ ಪ್ರಧಾನಿ ಎಂಬ ಖ್ಯಾತಿಗೂ ಮೋದಿ ಪಾತ್ರರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com