ರಾಹುಲ್ ಬೇಹು ಠುಸ್ಸ್

ಮೋದಿ ಸರ್ಕಾರದ ವಿರುದ್ಧ ಗೂಬೆ ಕೂರಿಸಲು ಕಾಂಗ್ರೆಸ್ ಬಳಸಿದ್ದ `ರಾಹುಲ್ ಬೇಹುಗಾರಿಕೆ' ಅಸ್ತ್ರ ಠುಸ್ಸ್ ಆಗಿದೆ...
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಮೋದಿ ಸರ್ಕಾರದ ವಿರುದ್ಧ ಗೂಬೆ ಕೂರಿಸಲು ಕಾಂಗ್ರೆಸ್ ಬಳಸಿದ್ದ `ರಾಹುಲ್ ಬೇಹುಗಾರಿಕೆ' ಅಸ್ತ್ರ ಠುಸ್ಸ್ ಆಗಿದೆ.

ರಾಹುಲ್ ಗಾಂಧಿ ವಿರುದ್ಧ ನಡೆದಿದ್ದು ರಾಜಕೀಯ ಬೇಹುಗಾರಿಕೆ ಅಲ್ಲವೇ ಅಲ್ಲ, ಅದು ಸರ್ವೇ ಸಾಮಾನ್ಯವಾಗಿ ನಡೆಯುವ ಮಾಹಿತಿ ಸಂಗ್ರಹ ಕಾರ್ಯ ಎಂಬುದು ಸಾಬೀತಾಗಿದೆ. ಕಾಂಗ್ರೆಸ್ ಉಪಾಧ್ಯಕ್ಷ ಮಾತ್ರವಲ್ಲ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ, ಆಡ್ವಾಣಿ, ವಾಜಪೇಯಿ, ಎಚ್.ಡಿ. ದೇವೇಗೌಡ ಸೇರಿದಂತೆ 526 ಮಂದಿ ಗಣ್ಯರ ಮಾಹಿತಿಯನ್ನೂ ಪೊಲೀಸರು ಸಂಗ್ರಹಿಸಿದ್ದಾರೆ ಎನ್ನುವುದನ್ನು ಖಾಸಗಿ ಸುದ್ದಿವಾಹಿನಿಯೊಂದು ಸಾಕ್ಷಿಸಮೇತ ಸ್ಪಷ್ಟಪಡಿಸಿದೆ.

ಸೋಮವಾರ ಸಂಸತ್‍ನಲ್ಲಿ ತೀವ್ರ ಗದ್ದಲ ಸೃಷ್ಟಿಸಬೇಕು ಎಂದು ತಂತ್ರ ರೂಪಿಸಿದ್ದ ಕಾಂಗ್ರೆಸ್‍ನ ಬಣ್ಣ ಒಂದು ದಿನ ಮೊದಲೇ ಬಯಲಾಗಿದೆ. ಈ ವಿಚಾರ ಸುದ್ದಿವಾಹಿನಿಯಲ್ಲಿ ಸ್ಫೋಟಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಭಾರಿ ವಾಕ್ಸಮರ ಶುರುವಾಗಿದೆ. ಸ್ವತಃ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರೇ ಈ ರೀತಿಯ ಮಾಹಿತಿ ಸಂಗ್ರಹಕ್ಕೆ ಒಪ್ಪಿದ್ದಾರೆ. ಜತೆಗೆ, ತಮ್ಮೆಲ್ಲ ವೈಯಕ್ತಿಕ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾರೆ. ಹೀಗಿರುವಾಗ ತಮ್ಮ ಮಾಹಿತಿ ನೀಡಲು ರಾಹುಲ್‍ಗೇಕೆ ಭಯ ಎಂದು ಬಿಜೆಪಿ ಪ್ರಶ್ನಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com